Saturday, 14th December 2024

ರೈತರ ವಿರೋಧಿ ಕಾಯಿದೆಗಳ ಜಾರಿ ಖಂಡನೀಯ

ರೈತರು ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ. ರೈತರಿಗೆ ಸಂಕಷ್ಟ ಬಂದಾಗ ಇರುವ ಸಮಸ್ಯೆಗಳನ್ನು ನಿವಾರಿಸಬೇಕಾದ ಕರ್ತವ್ಯ ಸರಕಾರದಾಗಿರುತ್ತದೆ. ಸರಕಾರವು ರೈತ ವಿರೋಧಿ ಕಾಯ್ದೆ ಜಾರಿಗೆ ತರುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಸತತ ಎರಡೂ ಮೂರು ತಿಂಗಳಿನಿಂದ ರೈತರು ರಾಜ್ಯದ ಮೂಲೆ ಮೂಲೆಯಲ್ಲಿ ಪ್ರತಿಭಟಿಸುತ್ತಿದಾರೆ.

ಸರಕಾರ ಮಾತ್ರ ರೈತರ ಬಗ್ಗೆೆ ನಿರ್ಲಕ್ಷಿಸುತ್ತಿದೆ. ರೈತ ವಿರೋಧಿ ಕಾಯಿದೆ ಜಾರಿಗೆ ತರಬೇಡಿ ಅಂದರೆ ಸರಕಾರ ಕೇಳುತ್ತಿಲ್ಲ. ಆದರೂ ಬಲವಂತವಾಗಿ ಕಾಯಿದೆ ಜಾರಿಗೆ ಮಾಡುತ್ತೇವೆ ಎಂದು ಪದೇ ಪದೆ ರೈತರ ಮೇಲೆ ಒತ್ತಡ ಹಾಕುತ್ತಿರುವುದು ಸರಕಾರದ ದುರ್ನಡತೆ ಪ್ರದರ್ಶಿಸುತ್ತದೆ. ರೈತರಿಗೆ ಕಾಯಿದೆ ಬಗ್ಗೆ ಉಪಯೋಗವೇನು? ನಷ್ಟವೇನು? ಎಂದು ತಿಳಿಸುವುದು ಮುಖ್ಯ. ಜತೆಗೆ ರೈತರ ಒತ್ತಾಯಗಳನ್ನು ಈಡೇರಿಸಬೇಕಿರುವುದು ಸರಕಾರಗಳ ಕರ್ತವ್ಯ. ಯಾವುದಕ್ಕೂ ಕ್ಯಾರೆ ಎನ್ನದೆ ರೈತರ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ. ರಾಜ್ಯದ ಹಲವಾರು ರೈತರು ಸಾಲದ ಸಂಕಷ್ಟದ ಸುಳಿಯಲ್ಲಿ, ಬಡತನದಲ್ಲಿ ಸಂಕಷ್ಟ ಪಡುತ್ತಿದ್ದಾರೆ.

ಇಂಥ ಸಮಯದಲ್ಲಿ ಸರಕಾರ ರೈತ ವಿರೋಧಿ ಕಾಯ್ದೆೆ ಜಾರಿಗೆ ತರುತ್ತಿರುವುದು ನಾಚಿಕೇಡಿನ ಸಂಗತಿ. ಯಾವುದೇ ಕಾಯಿದೆ ಜಾರಿಗೆ ತರಬೇಕಾದರೆ ಪ್ರಜೆಗಳು ಒಪ್ಪಬೇಕು. ಆಡಳಿತದ ಹೆಸರಲ್ಲಿ ರೈತವಿರೋಧಿ ಕಾಯಿದೆಗಳನ್ನು ಜಾರಿಗೊಳಿಸುವುದು ಸರಿ ಯಲ್ಲ.

– ಸಂತೋಷ ಜಾಬೀನ್,