Saturday, 14th December 2024

ಚಿತ್ರ ರಂಗದ ಮಾದರಿ ಪ್ರತಿಭಟನೆ

ಈಗ ಎರಡು ದಿನದ ಹಿಂದೆ ಏಕಾಏಕಿ ಚಿತ್ರ ಮಂದಿರಗಳಿಗೆ ಶೇ.50 ಆಸನ ಭರ್ತಿ ನಿರ್ಬಂಧ ಘೋಷಣೆಯಾಗುತ್ತಲೇ ಪುನೀತ್ ರಾಜ್ ಕುಮಾರ್ ಅವರು ಮೊದಲಗೊಂಡು ಚಿತ್ರರಂಗ ಅನೇಕ ಗಣ್ಯರು ಸರಕಾರದ ದಿಡೀರ್ ತೀರ್ಮಾನದ ಬಗ್ಗೆ ದಿಗ್ಭ್ರಮೆಗೊಂಡು ವಿರೋಧಿಸಿದ ಪ್ರತಿಭಟನೆ ಕೂಗು ಗಟ್ಟಿಯಾಗಿ ಮೊಳಗಿತ್ತು.

ಕೆಲವು ದಿನಗಳಿಂದ ಸೋಂಕಿನ ಪ್ರಮಾಣ ಏರುತ್ತಿದ್ದರೂ ಕೆಲವು ಸಚಿವರು ಲಾಕ್ ಡೌನ್ ಇಲ್ಲ ಸಿನಿಮಾ ನಿರ್ಬಂಧವಿಲ್ಲ ಎನ್ನುವಂತೆ ಹೇಳಿಕೆ ಕೊಡುತ್ತಿದ್ದರ ಪರಿಣಾಮ ಹೊಸದಾಗಿ ತೆರೆಕಂಡ ಚಿತ್ರಗಳಿಗೆ ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡಲಾಗಿದ್ದು ಈ ಅನಿರೀಕ್ಷಿತ್ ಘೋಷಣ ಒಂದು ರೀತಿ ಶಾಕ್ ಆಗಿದ್ದು ನ್ಯಾಯಸಮ್ಮತವೇ.

ನಟರು ನಿರ್ಮಾಪಕರು ಮುಖ್ಯಮಂತ್ರಿಗಳನ್ನು ಬೆಟ್ಟಿಯಗಿ ತಮಗಾದ ತೊಂದರೆಯನ್ನು ಗಮನಕ್ಕೆ ತಂದರು. ಒಂದು ಕಡೆ ಸೋಂಕಿನ ನಿಯಂತ್ರಣದ ಅಗತ್ಯತೆ ಮತ್ತೊಂದೆಡೆ ದಿಡೀರ್ ನಿರ್ಬಂಧ ದಿಂದಾದ ಕಷ್ಟ ಇವುಗಳೆರಡನ್ನೂ ಗಮನಿಸಿ ಪ್ರತಿಭಟಿಸಿ ದವರೊಡನೆ ಮಾತು ಕತೆ ನಡೆಸಿ ಸರ್ಕಾರ ಚಿತ್ರಮಂದಿರಗಳಿಗೆ ವಿಧಿಸಿದ ತಕ್ಷಣದ ನಿರ್ಬಂಧವನ್ನು ನಾಲ್ಕು ದಿನದ ವರಿಗೆ
ಮುಂದೂಡುವ ನಿರ್ಧಾರ ಮಾಡಿತು. ಚಿತ್ರರಂಗವೂ ಹಟ ಹಿಡಿಯದೆ ಸರ್ಕಾರದ ತೀರ್ಮಾನಕ್ಕೆ ಸಹಮತ ವ್ಯಕ್ತಿಪಡಿಸಿ ದೊಡ್ದ ಪ್ರತಿಭಟನೆ ಸಮಾಧಾನಕರವಾಗಿ ಪರಿಹಾರವಾಗಿದ್ದು ಅತ್ಯಂತ ಸ್ವಾಗತಾರ್ಹ. ಈಗ ರಾಜ್ಯದಲ್ಲಿ ಪತಿ ಬೇಡಿಕೆಯೂ ವಿವೇಚನ ರಹಿತ ಪ್ರತಿ ಭಟನೆಯಾಗಿ ನಗರ ಜೀವನ ಅಸ್ತವ್ಯಸ್ಥವಾಗಿದೆ.

ಸೋಂಕು ಹರಡಲು ಕಾರಣವೂ ಆಗಿವೆ. ಪ್ರತಿಭಟನೆ ಎಂದರೆ ಮಾತು ಕತೆಗೆ ಮುಂದಾಗಿ ಒಂದು ಒಪ್ಪಂದಕ್ಕೆ ಬರುವ
ಸಾಧ್ಯವಾಗದೆ ಸರ್ಕಾರವನ್ನೆ ಪೇಚಿಗೆ ಸಿಲಿಕಿಸ ಬೇಕೆಂಬ ಅಸ್ತ್ರವೆಂದು ಭಾವಿಸಿರುವುದು ವಿಷಾದನೀಯ. ಪ್ರತಿ ಭಟನೆಯ ಮುಖಂಡತ್ವ ವಹಿಸಿದವರ ಪ್ರತಿಷ್ಠೆಯಾಗಿ ಸರ್ಕಾರದ ಆದೇಶವನ್ನೆ ಧಿಕ್ಕರಿಸುವಂತಾಗಿರುವುದು ಪ್ರಜ್ಞಾವಂತ ಸಂಘ ಸಂಸ್ಥೆಗಳ ಲಕ್ಷಣವಲ್ಲ.

ಹಟಮಾರಿ ಧೋರಣೆ ಬಿಟ್ಟು ಕೊಡು ತೆಗೆದುಕೊಳ್ಳುವ ಮನೋಭಾವ ಬೆಳಸಿಕೊಂಡು ಸಮಸ್ಯೆೆ ಪರಿಹರಿಸಿಕೊಳ್ಳುವುದು ಹೇಗೆಂಬುದಕ್ಕೆ ಕರ್ನಾಟಕ ಚಿತ್ರ ರಂಗದ ಪ್ರತಿಭಟನೆ ಮಾದರಿಯಾಗಿದೆ. ಪುನೀತ್ ರಾಜಕುಮಾರ್ ಮೊದಲಾಗಿ ಚಿತ್ರರಂಗದ ಗಣ್ಯರಿಗೆ ವಂದನೆಗಳು.

– ಸತ್ಯಬೋಧ 53, 3ಕ್ರಾಸ್ ಹೊಸಕೆರೆಹಳ್ಳಿ ಬಡಾವಣೆ ಬೆಂಗಳೂರು-85