Friday, 21st June 2024

ಆಪ್ತ ಸಮಾಲೋಚಕರನ್ನು ಕಾಯಂಗೊಳಿಸಿ

ರಾಜ್ಯ ಆರೋಗ್ಯ ಇಲಾಖೆಯಲ್ಲಿ ಸುಮಾರು ೨೦ ವರ್ಷಗಳಿಂದ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಐಸಿಟಿಸಿ (ಇಂಟಗ್ರೇಟೆಡ್ ಕೌನ್ಸೆಲಿಂಗ್ ಮತ್ತು ಟೆಸ್ಟಿಂಗ್ ಸೆಂಟರ್)ನ ಆಪ್ತ ಸಮಾಲೋಚಕರು ಮತ್ತು ಪ್ರಯೋಗ ಶಾಲಾ ತಂತ್ರಜ್ಞರನ್ನು ಸರಕಾರ ಕಾಯಂ ಮಾಡಬೇಕಿದೆ.

ಒಟ್ಟು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಆಪ್ತ ಸಮಾಲೋಚಕರು ಮತ್ತು ಪ್ರಯೋಗ ಶಾಲಾ ತಂತ್ರಜ್ಞರು, ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನೆ ಮತ್ತು ಪರೀಕ್ಷೆ ಮಾಡುತ್ತಾ ಬಂದಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ನ್ಯಾಕೋ (ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಜೇಷನ್) ಹಾಗೂ ರಾಜ್ಯದಲ್ಲಿ ಕೆಎಸ್‌ಎಪಿಎಸ್‌ಯಲ್ಲಿ ಯಾವುದೇ ಸ್ನಾತಕೋತ್ತರ ಪದವಿ ಪಡೆದವರು ಆಪ್ತ ಸಮಾಲೋಚಕರಾಗಿ ಹಾಗೂ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಯಲ್ಲಿ ಡಿಪ್ಲೊಮೊ ಪಡೆದವರು, ಪ್ರಯೋಗ ಶಾಲಾ ತಂತ್ರಜ್ಞರಾಗಿ ಎಚ್‌ಐವಿ/ಏಡ್ಸ್ ಬಗ್ಗೆ ಗರ್ಭಿಣಿ ಯರಿಗೆ ಕಡ್ಡಾಯವಾಗಿ ಹಾಗೂ ಇತರರಿಗೆ ಉಚಿತವಾಗಿ ಆಪ್ತ ಸಮಾಲೋಚನೆ ಮತ್ತು ಪರೀಕ್ಷೆ ಮಾಡುತ್ತಿದ್ದಾರೆ.

ತುಂಬಾ ಅಪಾಯಕಾರಿ ಕೆಲಸದೊಂದಿಗೆ ಕರ್ತವ್ಯ ನಿರ್ವಹಿಸುವ ಈ ಇಬ್ಬರು ಸುಮಾರು ಇಪ್ಪತ್ತು ವರ್ಷಗಳಿಂದ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ೨೬ ಸಾವಿರ ರು. ವೇತನ ನೀಡುತ್ತಿದ್ದು, ಈಗಿನ ಕಾಲದಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸರಕಾರದ ಗಮನಕ್ಕೆ ತಂದರೂ
ಪ್ರಯೋಜನವಾಗಿಲ್ಲ. ಪ್ರತಿ ವರ್ಷವೂ ಈ ನೌಕರರಿಂದ ಒಂದು ವರ್ಷದ ಅವಽಗೆ ಹೊಸದಾಗಿ ಕರಾರು ಮಾಡಿಸಿಕೊಳ್ಳುವ ಸರಕಾರ ನೌಕರರ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ. ಇದು ನೌಕರರ ಚಿಂತೆಗೆ ಕಾರಣವಾಗಿದೆ.

ಆದ್ದರಿಂದ ಸರಕಾರ ಕೂಡಲೇ ಹಲವಾರು ವರ್ಷಗಳಿಂದ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕರು ಮತ್ತು ಪ್ರಯೋಗ ಶಾಲಾ ತಂತ್ರಜ್ಞ ನೌಕರರನ್ನು ಕಾಯಂ ಮಾಡಬೇಕು.

– ಶ್ರೀಧರ್ ಡಿ.ರಾಮಚಂದ್ರಪ್ಪ ಚಿತ್ರದುರ್ಗ

ಶಾಲೆಯಿಂದ ಮಕ್ಕಳು ದೂರಾಗದಿರಲಿ
ಕರೋನಾ ಮಹಾಮಾರಿಯ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳು ಸರಿಯಾಗಿ ನಡೆಯದೇ ಇರುವ ಕಾರಣದಿಂದಾಗಿ ಮಕ್ಕಳ ಮೇಲೆ ದೊಡ್ಡದಾದ ಪರಿಣಾಮವನ್ನು ಬೀರಿದೆ. ಎರಡು ವರ್ಷಗಳಲ್ಲಿ ಮಕ್ಕಳು ದೈಹಿಕ-ಮಾನಸಿಕ ಚಟುವಟಿಕೆಗಳು ಇರಲಾರದೇ ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಿzರೆ. ಅವರು ಶಾಲೆಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಪಾಲಕರ ಜತೆ ಸರಿಯಾದ ವರ್ತನೆಗಳು ಇಲ್ಲದ ಪರಿಸ್ಥಿತಿಯಾಗಿದೆ. ಆದರೂ ಸರಕಾರ ಈ ವರ್ಷದ ಶೈಕ್ಷಣಿಕ ವರ್ಷ ಜುಲೈನಲ್ಲಿ ಪ್ರಾರಂಭಿಸಲು ನಿರ್ಧರಿಸಿರುವುದರಿಂದ ಪಾಲಕರು ಮತ್ತು ಪೋಷಕರಾದವರು ಮಕ್ಕಳನ್ನು ಶಾಲೆಗೆ ದಾಖಲು
ಮಾಡಿಸಲು ಹಿಂಜರಿದಿದ್ದಾರೆ.

ಕಾರಣ ಆರ್ಥಿಕ ಸಂಕಷ್ಟ, ಕರೋನಾ ಭಯ. ಮಕ್ಕಳ, ಮಕ್ಕಳು ಶಾಲೆಗೆ ಹೋಗಲು ನಿರಾಸಕ್ತಿ ತೋರಿಸುವುದು ಇಂಥ ಹಲವಾರು ಕಾರಣಗಳಿಂದಾಗಿ ದಾಖಲಾತಿಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಮಕ್ಕಳು ಶಾಲೆಗೆ ದಾಖಲಾತಿಯಾದರೆ ಅವರನ್ನು ಮುಂದಿನ ತರಗತಿಗೆ ಅಥವಾ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅವನನ್ನು ಮನವೊಲಿಸಿ ಸೇರಿಸಬಹುದಾಗಿದೆ ದಾಖಲಾತಿ ಆಗದಿದ್ದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸರಕಾರವು ಈಗಲೇ ಎಚ್ಚೆತ್ತು ದಾಖಲಾತಿಯ ಪ್ರಮಾಣವನ್ನು ನೂರಕ್ಕೆ ನೂರು ಮಾಡಿಸಬೇಕು ಮತ್ತು ಯಾವ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವಂತೆ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಇದು ಪಾಲಕರು ಪೋಷಕರು ಮಕ್ಕಳಿಗೆ ಮಾತ್ರ ತೊಂದರೆ ಕೊಡುವುದಿಲ್ಲ. ಇದು ಒಂದು ಸಾಮಾಜಿಕ ಸಮಸ್ಯೆಗೆ ಅವಕಾಶವಾಗುತ್ತದೆ ಆದ್ದರಿಂದ ಸರಕಾರವು ಶೈಕ್ಷಣಿಕ ಚಟುವಟಿಕೆಗಳ ಮೇಲೆ ಮುತುವರ್ಜಿವಹಿಸಿ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಂಡು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಮಕ್ಕಳು ದಾಖಲಾತಿಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ.

– ಶಿವನಗೌಡ ಪೊಲೀಸ್ ಪಾಟೀಲ್ ಕೊಪ್ಪಳ

ಲೀನ
ಪ್ರೀತಿಯೆಂದರೆ ಮೌನ, ಮಾತು ನೋಟದಲಿ ಲೀನ
ಜೀವವೆಂದರೆ ಮೌನ, ಮಾತು ದೇಹದಲಿ ಲೀನ
ಧ್ಯಾನವೆಂದರೆ ಮೌನ,ಮಾತು ಮನಸಿನಲಿ ಲೀನ,
eನವೆಂದರೆ ಮೌನ, ಮಾತು ಬುದ್ದಿಯಲಿ ಲೀನ.
ನಿzಯೆಂದರೆ ಮೌನ,ಮಾತು ಪ್ರಜ್ಞೆಯಲಿ ಲೀನ,
ಸಾವೆಂದರೆ ಮೌನ, ಮಾತು ಅನಂತದಲಿ ಲೀನ.
ಮಾತು ಮೌನದ ಅಧೀನ,
ಮಾತಾಗಲಿ ಮೌನದಲಿ ಲೀನ.
-ವಾಣಿ

ಜಾತಿಯೇ ಮಾನದಂಡ ಆಗಬಾರದು
ಕರ್ನಾಟಕದಲ್ಲಿ ಜಾತಿ ಒಂದು ಮಾನದಂಡವಾಗಿ ವಿಜೃಂಭಿಸಿರುವುದು ಪ್ರತಿಕ್ಷೇತ್ರದಲ್ಲೂ ಎದ್ದು ಕಣ್ಣಿಗೆ ರಾಚುವಂತೆ ಕಾಣುತ್ತದೆ. ಇಲ್ಲಿ ಪ್ರಮುಖ ಜಾತಿಗಳು ಎಂದರೆ ಯಾವ ಜಾತಿಯಲ್ಲಿ ಮತದಾರ ಸಂಖೆ ಹೆಚ್ಚಿದೆಯೋ ಆ ಜಾತಿಯ ಸಾಹಿತಿಗಳು ಕಲಾವಿದರು ಊರು ಊರುಗಳಲ್ಲಿ ಬೀದಿಯ ಹೆಸರಾಗಿ ಸರಕಾರಿ ಭವನಗಳ ನಾಮಪಲಕದಲ್ಲಿ ಪ್ರತಿಮೆಗಳಾಗಿ ವೃತ್ತಗಳಲ್ಲೂ ಮಿಂಚುತ್ತಾರೆ. ಅದು ಕೇವಲ ಒಂದು ವೃತ್ತಕ್ಕೆ ಒಂದು ಬಡಾವಣೆಗೆ ಸೀಮಿತವಲ್ಲ. ಒಂದು ನಗರದ ಹತ್ತು ಬಡಾವಣೆಗೆ ನೂರು ಬೀದಿಗಳಿಗೆ ಆ ಹೆಸರಿಡುತ್ತಾರೆ.

ಒಂದು ಊರಲ್ಲಿ ಆಂಜನೇಯ ಬಹಳ ಪ್ರಸಿದ್ಧ ದೇವರು. ಅಲ್ಲಿ ಬಹು ಜನರ ಹೆಸರು ಅದೇ ಆಗಿದೆ. ಮನೆಯಿಂದ ಹೊರಬಂದು ಆ ಹೆಸರನ್ನು ಕರೆದರೆ ಹತ್ತು ಮನೆಯಿಂದ ನನ್ನ ಕರೆದಿರಾ ಎಂದು ಬರುತ್ತಾರಂತೆ. ಇಲ್ಲಿಯೂ ಒಬ್ಬ ಪ್ರಸಿದ್ಧನ ಹೆಸರೇ ಹತ್ತು ಬೀದಿಗೆ ಹತ್ತು ಬಡಾವಣೆಗಳಿಗೆ ಇಟ್ಟು ವಿಳಾಸ ಹುಡುಕುವವರ -ಜೀತಿ ದೇವರಿಗೆ ಪ್ರೀತಿ.

ಪ್ರಧಾನಿಯಾಗಿ ಪಿ.ವಿ ನರಸಿಂಹರಾವ್ ಅವರು ಮನಮೋಹನ್ ಸಿಂಗ್ ಅವರ ಪ್ರಚಂಡ ಪ್ರಾವೀಣ್ಯ ಬಳಸಿಕೊಂಡು ಭಾರತದ ಭಾಗ್ಯದ ಬಾಗಿಲನ್ನೇ ತೆಗೆಯುವ ಆರ್ಥಿಕ ಪ್ರಗತಿ ತಂದ ಮಹಾನಾಯಕ. ಆದರೆ ಅವರ ಹೆಸರನ್ನು ಬೆಂಗಳೂರಿನ ಬಡಾವಣೆಯಲ್ಲ ಒಂದು ಬೀದಿಗೂ ಇಟ್ಟಿಲ್ಲ ಎನ್ನುವುದು ತಲೆ ತಗ್ಗಿಸುವಂತೆ ಅಲ್ಲವೇ? ಮಾಸ್ತಿಯವರು ಕನ್ನಡಿಗರಿಗೆ ಕಥೆ ಬರೆಯಲು ಕಲಿಸಿದ ಸಣ್ಣ ಕತೆಯ ಜನಕ. ಆದರೆ ಅವರ ಹೆಸರು ಇರುವುದು ಒಂದು ಚಿಕ್ಕ ರಸ್ತೆಗೆ. ತಮ್ಮ ಜಾತಿಯವನೆಂದು ಒಬ್ಬನನ್ನೆ ಜಾಹೀರು ಮಾಡುವುದು ಕುಬ್ಜ ಮನೋಭಾವ ಮಾತ್ರವಲ್ಲ. ಪ್ರತಿಭೆಯ ಬರವನ್ನು ತೋರಿಸುತ್ತದೆ.

ನಿಜದಲ್ಲಿ ಕನ್ನಡಕ್ಕಾಗಿ ದುಡಿದವರೇ ಮರೆಯಾಗಿ ಒಬ್ಬ ಅನಾಮದೇಯ ಪ್ರಸಿದ್ಧತೆ ಪಡೆಯುವುದು ವಿಷಾದಕರ. ರಾಜ್ ಕುಮಾರ್ ಕನ್ನಡ ಮಾತಾಡುವುದನ್ನು ಕಲಿಸಿದರು ಅವರಿಗೆ ಸಮವಾಗಿ ಕಲ್ಯಾಣ ಕುಮಾರ್, ಉದಯಕುಮಾರ್, ಅಶ್ವತ್ಥ ಅವರ ನಟನೆಯೇನೂ ಕಡಿಮೆಯಿಲ್ಲ. ಪ್ರತಿಭೆ ಗುರುತಿಸಿ ಗೌರವಿಸುವ ವಿವೇಕ ನಮಗೆ ಬೇಕು. ಕನ್ನಡಕ್ಕಾಗಿ ದುಡಿಯವವ ನಮ್ಮವ ಎನ್ನುವ ಗುಣ ನಾಡನ್ನು ಬೆಳಗೀತು.
– ಸತ್ಯಬೋಧ ಬೆಂಗಳೂರು

Leave a Reply

Your email address will not be published. Required fields are marked *

error: Content is protected !!