Tuesday, 20th February 2024

ಪರೀಕ್ಷೆಗಿಂತ ಆರೋಗ್ಯದ ಸುರಕ್ಷೆಯೇ ಮುಖ್ಯ

ಕೋವಿಡ್ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕೆ ಬರತೊಡಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೆಲವು ನಿರ್ಬಂಧಗಳ ಹೊರತಾಗಿ, ಬಹುತೇಕ ವಾಣಿಜ್ಯ ಚಟುವಟಿಕೆಗಳು ಜನ ಜೀವನ ಸಹಜ ಸ್ಥಿತಿಗೆ ಬರತೊಡಗಿದೆ. ಇದರ ನಡುವೆ ೧೮ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕರೋನಾ ಲಸಿಕೆ ನೀಡಿಕೆ ಪ್ರಕ್ರಿಯೆಯು ಸಾಗಿದೆ. ಕಳೆದ ಎರಡು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಜನರು ಲಸಿಕೆಯನ್ನು ಪಡೆದುಕೊಂಡಿzರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ರಾಜ್ಯ ಸರಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸಜ್ಜಾಗಿದೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಹೇಳಿಕೆಯಂತೆ ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಯಲಿದೆ. ಈ ಸಂಬಂಧ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿ ಸಲ್ಲಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಪರೀಕ್ಷಾ ಕೇಂದ್ರಗಳು ಮುಖ್ಯಸ್ಥರು ಸಿದ್ಧತೆ ನಡೆಸುವಂತೆ ತಿಳಿಸಲಾಗಿದೆ. ಈ ಬಾರಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿಭಿನ್ನ ಮಾದರಿಯಲ್ಲಿ ನಡೆಸಲು ನಿರ್ಧಾರಿಸಲಾಗಿದ್ದು, ಆರು ಪರೀಕ್ಷೆಗಳ ಬದಲಾಗಿ ಕೇವಲ ಎರಡು ಪರೀಕ್ಷೆಗಳು ನಡೆಯಲಿವೆ. ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ ಡೆಗೆ ಒಬ್ಬರಂತೆ ತಲಾ ೧೨ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಪರೀಕ್ಷೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಽಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕರೋನಾ ಲಸಿಕೆ ಕನಿಷ್ಠ ಒಂದು ಡೋಸ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಸ್ವಚ್ಛತೆಗೆ ಆದ್ಯತೆ, ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿಯೂ ಆರೋಗ್ಯ ತಪಾಸಣೆ ಕೌಂಟರ್, ಥರ್ಮಲ್ ಸ್ಕ್ಯಾನರ್ ಪಲ್ಸ ಆಕ್ಸಿಮೀಟರ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಪ್ರತಿ ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನ, ಕರೋನಾ ಲಕ್ಷಣಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಎರಡು ಕೊಠಡಿ ಮೀಸಲು ಮತ್ತಿತರ ಮಾರ್ಗಸೂಚಿಗಳನ್ನು ಪರೀಕ್ಷಾ ಮಂಡಳಿ ಹೊಂದಿದೆ.

ಸದ್ಯಕ್ಕೆ ೧೮ ವರ್ಷಕ್ಕಿಂತ ಕೆಳಗಿರುವವರಿಗೆ ಲಸಿಕೆ ನೀಡಿಕೆ ಇನ್ನೂ ಆರಂಭಗೊಂಡಿಲ್ಲ, ಆದ್ದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗು ವುದನ್ನು ಖಾತ್ರಿ ಪಡಿಸುವ ಹೊಣೆಗಾರಿಕೆ ಸರಕಾರದ ಮೇಲಿದೆ. ಪರೀಕ್ಷೆಗಿಂತಲೂ ವಿದ್ಯಾರ್ಥಿಗಳ ಸುರಕ್ಷೆಯೇ ಮೊದಲ ಆದ್ಯತೆಯಾಗಿರುವುದರಿಂದ, ಇದು ಸರಕಾರದ ಪಾಲಿಗೆ ಬಲುದೊಡ್ಡ ಸವಾಲು ಆಗಿದೆ. ಈ ನಿಟ್ಟಿನಲ್ಲಿ ಪೋಷಕರು ಶಿಕ್ಷಕರು ಮನವೊಲಿಸುವ ಮತ್ತು ಅವರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು.
– ಗಾಯತ್ರಿ ಮಾಲಿಪಾಟೀಲ್ ಸಿಂಧನೂರು

ಸಮಸ್ಯೆಯನ್ನು ಬಗೆಹರಿಸಿ
ಮಂಗಳೂರು ತಾಲೂಕಿನಲ್ಲಿರುವ ಪಡುಪಣಂಬೂರು ಗ್ರಾಮ ಪಂಚಾಯಿತಿಗೆ ಸೇರಿರುವ ೧೦ನೇ ತೋಕೂರು ಗ್ರಾಮದ ‘ಅಮ್ಮ ಎಂಜಿನಿಯರಿಂಗ್ ವರ್ಕ್ ಶಾಪ್’
ಬಳಿ ಇರುವ ಮುಖ್ಯರಸ್ತೆಯ ಸಂಕವು ಸಂಪೂರ್ಣ ಕುಸಿದು ಬಿದ್ದು ಹಲವು ವರ್ಷಗಳು ಸಂದಿವೆ. ಜನಪ್ರತಿನಿಧಿಗಳ ಬಳಿ ಈ ಸಮಸ್ಯೆಯನ್ನು ಹೇಳಿಕೊಂಡರೂ ಸ್ಪಂದನೆ ನೀಡಲಿಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ತುಂಬಿ ಹರಿಯುವ ಈ ತೊರೆಗೆ ಸಂಕವನ್ನು ಪುನರ್ ನಿರ್ಮಾಣ ಮಾಡದಿರುವುದರಿಂದ ಇಲ್ಲಿ ಓಡಾಡುವ ವಾಹನಗಳಿಗೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇದೆ.

ಜತೆಗೆ ಶಾಲೆಗೆ ಹೋಗುವ ಪುಟಾಣಿಗಳು ಈ ತೊರೆಯ ನಡುವೆ ಇರುವ ರಸ್ತೆಯ ಮೇಲೆ ಸಾಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳು ತೊರೆಯಲ್ಲಿ ಈಜುವ ಮೀನುಗಳನ್ನು ನೋಡುವ ಉತ್ಸಾಹದಿಂದ ಅದರ ಬಳಿ ಹೋಗುತ್ತಾರೆ. ಸಂಕ ಇಲ್ಲದ ಕಾರಣ ಇದರ ಬಳಿಯಲ್ಲಿ ಮಕ್ಕಳ ಓಡಾಟ ಮನೆಯವರಲ್ಲಿ ಭಯವನ್ನು ಉಂಟುಮಾಡಿದೆ. ಪ್ರತಿವರ್ಷ ಗ್ರಾಮ ಪಂಚಾಯತ್ ಚುನಾವಣೆ ಬಂದಾಗ ಈ ಸಮಸ್ಯೆಯನ್ನು ಆಸುಪಾಸಿನ ಜನರು ಹೇಳಿದರೂ, ‘ನಮ್ಮನ್ನು ಗೆಲ್ಲಿಸಿದರೆ, ನಾವು ಪುನರ್ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಾರೆಯೇ ಹೊರತು, ಯಾರು ಇಷ್ಟರವರೆಗೂ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಲಿಲ್ಲ.’ ಆದ್ದರಿಂದ ಈಗಲಾದರೂ ಸಂಬಂಧಪಟ್ಟವರು ೧೦ನೇ ತೋಕೂರು ಗ್ರಾಮದಲ್ಲಿ ಬರುವ ಈ ತೊರೆಗೆ ಸಂಕವನ್ನು ನಿರ್ಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು.
– ಪೂಜಶ್ರೀ ತೋಕೂರು

ನೀಚ ಬುದ್ಧಿಯ ಬಿಡು
‘ಆಚಾರವಿಲ್ಲದ ನಾಲಿಗೆ, ನೀಚ ಬುದ್ಧಿಯ ಬಿಡು’ ಪುರಂದರ ಕೀರ್ತನೆ, ‘ಅಯ್ಯಾ ಎಂದೊಡೆ ಸ್ವರ್ಗ, ಎಲವೋ ಎಂದೊಡೆ ನರಕ’ ಶರಣರ ವಚನ ಮನುಷ್ಯನಿಗೆ ಮಾತು ಎಷ್ಟು ಮುಖ್ಯ ಎನ್ನುವುದನ್ನು ಸಾರುತ್ತವೆ. ನುಡಿದರೆ ಶಿವ ಮೆಚ್ಚಿ ಅಹುದೆನ್ನಬೇಕು ಎನ್ನುವ ವಚನ ‘ಮಾತು ಹೇಗಿರಬೇಕು’ ಎನ್ನುವುದಕ್ಕೆ ಮಾರ್ಗ ಸೂಚಿ. ಇಂತಹ ವಚನ ಓದುವ, ಕೇಳುವ ವ್ಯವಧಾನ ನಮ್ಮ ರಾಜಕೀಯ ನಾಯಕರಿಗಿರಬೇಕು. ಅವರ ಮಾತುಗಳು ಆಗ ಮುತ್ತಾಗುತ್ತವೆ. ಕೇಳಿದವರು ರೂಢಿಸಿಕೊಂಡು ಉತ್ತಮ ಸಂಸ್ಕ ತಿ ವಿಜೃಂಭಿಸುತ್ತದೆ.

‘ಹೊಡಿ ಬಡಿ, ಭಂಡ ಮೋಸಗಾರ ಸುಳ್ಳ’ ಎನ್ನುವ ಮಾತುಗಳೇ ಪುಂಖಾನುಪುಂಖವಾಗಿ ಉದುರುವುದಿಲ್ಲ. ಕೆಲವರಿಗೆ ಪ್ರಿಯವಾಗುವ ಕೆಟ್ಟ ಮಾತುಗಳು ತಮ್ಮ
ವ್ಯಕ್ತಿತ್ವವನ್ನೆ ಬೆತ್ತಲು ಮಾಡಿ ಸಮಾಜದಲ್ಲಿ ಅನೇಕರಿಗೆ ಅಸಹ್ಯಬರಿಸುತ್ತವೆ. ಇತ್ತೀಚಿಗೆ ಅಧಿಕಾರಿ ತಮ್ಮ ವಿಷಯದಲ್ಲಿ ತಪ್ಪಾಗಿ ನಡೆದುಕೊಂಡರು ಎಂದು ಶಾಸಕರೊಬ್ಬರು ಅವರ ವಿರುದ್ಧ ಉಪಯೋಗಿಸಿದ ವಿಶೇಷಣಗಳು ಮರ್ಯಾದೆ ಮರೆತು ಮಹಿಳೆಯರನ್ನು ಒಟ್ಟಾಗಿ ಅಪಹಾಸ್ಯ ಮಾಡಿದಂತಿದೆ. ಇದುವರೆಗೂ ರಾಜಕೀಯದಲ್ಲಿ ಒಬ್ಬರೊನ್ನೊಬ್ಬರು ಹಳಿಯುವುದಕ್ಕೆ ಮಾತ್ರ ಚಾಲನೆಯಲ್ಲಿದ್ದ ಈ ಮಾತಿನ ವೈಖರಿ ಸರಕಾರದ ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧವೂ ಚಲಾವಣೆಗೆ ಆರಂಭವಾಗಿರುವುದು ವಿಷಾದಕರ.

ರಾಜಕಾರಣಿಗಳ ಮಾತಿಗೆ ತಾಳ ಹಾಕಿದರೆ ಅದು ಒಂದು ದಿನ ಬಹಿರಂಗವಾಗಿ ಇದಕ್ಕೆ ಬಲಿ ಪಶು ನಿಯಮ ಬಾಹಿರ ಆದೇಶ ಪಾಲಿಸಿದ ಅಧಿಕಾರಿ. ಮೈಸೂರು ಡಿಸಿ ಮತ್ತು ಶಾಸಕ ಪ್ರಕರಣ ಏನೇ ಇರಲಿ ಡಿಸಿ ವಿರುದ್ಧ ಶಾಸಕರು ವೈಯಕ್ತಿಕ ನಿಂದನೆ ಮಾಡಿರುವುದಾಗಿ ಪ್ರಸಾರವಾಗಿದೆ. ಈ ವೈಯಕ್ತಿಕ ನಿಂದನೆ ಆವೇಶದಲ್ಲಿ ವಿವೇಕ ಮರೆತು ಹೆಣ್ಣು ಜಾತಿಗೆ ಅಪಮಾನವಾಗುವಂತೆ ‘ಮಹಿಳೆಯರು ದೊಡ್ಡ ಅಧಿಕಾರ ನಿಭಾಯಿಸಲು ಶಕ್ತರಲ್ಲ. ಏನಿದ್ದರೂ ಅವರ ಕರ್ತವ್ಯ ಎಂದರೆ ಅಡಿಗೆ ಮಾಡುವುದು, ಮಕ್ಕಳನ್ನು ಪೋಷಿಸುವುದು’ ಎನ್ನುವ ಟೀಕೆಯಿಂದ ಮಹಿಳೆಯರು ನೊಂದಿದ್ದಾರೆ.

ರಾಜಕಾರಣಿಗಳು ರಾಜ ಕಾರಣ ಮಾಡುವುದು ಹೊಟ್ಟೆ ತುಂಬಲು. ಎಲ್ಲಾರೂ ಮಾಡೋದು ಹೊಟ್ಟೆಗಾಗಿ. ದಾಸರು ನಾಲ್ಕು ಶತಮಾನದ ಹಿಂದಿಯೇ ಇದನ್ನು ಹೇಳಿದ್ದಾರೆ. ಈ ಹೊಟ್ಟೆ ತುಂಬುವವರು ತಾಯಂದಿರು. ಅವರ ಕರ್ತವ್ಯ ಸದಾ ಬಡಿದು ಕೊಳ್ಳುವ ಹೃದಯದಂತೆ. ಏನೇ ಕಷ್ಟ, ನಷ್ಟ, ಆಘಾತ ಇರಲಿ ದಿನಕ್ಕೆ ಎರಡು ಹೊತ್ತು ಕೂಳು ದೊರಕುವುದು ಹೆಣ್ಣಿಂದ. ಸುಸಂಸ್ಕ ತರಾಗಿ ಗೌರವ ತರುವಂತೆ ಮಕ್ಕಳನ್ನು ಪೋಷಿಸಿ, ಬೆಳೆಸಿ, ಸಂಸ್ಕಾರ ತುಂಬುವವರು ತಾಯಿಯಾಗಿ ಮಹಿಳೆ.

ಇದರಿಂದಾಗಿಯೇ ವೇದಗಳು ತಾಯಿಯನ್ನು ಮಾತೃದೇವೋಭವ ಎಂದು ಪರಮ ಸತ್ಯ ಸಾರಿವೆ. ಆದರೆ, ತಾಯಿಯನ್ನು ಮರೆತವರು ಹೆಂಡತಿಯನ್ನು
ಕೇವಲವಾಗಿ ಕಾಣುವವರು ಮಾತ್ರ ‘ಹೆಣ್ಣು ಹೊರಗೆ ದುಡಿಯಲು ಸಮರ್ಥಳಲ್ಲ. ಏನಿದ್ದರು ಅವಳ ಕೆಲಸ ಅಡಿಗೆ ಮತ್ತು ಮಕ್ಕಳ ಪೋಷಣೆ’ ಎಂದು ಹೀಯಾ ಳಿಸುತ್ತಾರೆ. ಇದು ಅವರ ಅನಾರ್ಯ ಸ್ಥಿತಿ ತೋರಿಸುತ್ತದೆ. ವಾಹಿನಿಗಳಲ್ಲಿ ಈ ಘಟನೆ ನೇರ ಸೆರೆಹಿಡಿದ ತುಣುಕುಗಳು ಪ್ರಸಾರವಾಗಿ ಟೀಕೆಗೆ ಒಳಗಾಗಿವೆ ಎನ್ನುವುದನ್ನು ಅರಿತು, ಆವೇಶದಲ್ಲಿ ತಪ್ಪಾಗಿ ನಾಲಿಕೆ ನೀಚವಾಗಿ ಮಾತಾಡಿದೆ ಎಂದು ಕ್ಷಮೆ ಕೇಳಿದರೆ ಅದು ದೊಡ್ಡಸ್ಥಿಕೆ ಆಗುತ್ತದೆ. ತಪ್ಪು ಅರಿತು ಒಪ್ಪಿಕೊಳ್ಳುವುದಕ್ಕಿಂತಲೂ ದೊಡ್ಡಸ್ಥಿಕೆ ಮತ್ತೊಂದಿಲ್ಲ.
– ಸತ್ಯಬೋಧ

Leave a Reply

Your email address will not be published. Required fields are marked *

error: Content is protected !!