Saturday, 27th July 2024

ಪ್ರಧಾನಿ ನಿರ್ಧಾರ ಸ್ವಾಗತಾರ್ಹ

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಆರ್‌ಸಿಇಪಿ)ಕ್ಕೆೆ ಭಾರತ ಸಹಿ ಹಾಕುವುದಿಲ್ಲ ಎಂಬ ನಿರ್ಧಾರ ಸ್ವಾಾಗತಾರ್ಹ. ರೆತರು ಹೈನುಗಾರಿಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲಿ ತೊಡಗಿಸಿಕೊಂಡವರು ಹಿತಾಸಕ್ತಿಿ ವಿಚಾರದಲ್ಲಿ ರಾಜಿ ಇಲ್ಲ ಎಂದು ಘೋಷಿಸುವ ಮೂಲಕ ಸದರಿ ಒಪ್ಪಂದಕ್ಕೆೆ ಸಹಿ ಹಾಕಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಈ ಹಿಂದಿನ ನಮ್ಮ ನಾಯಕರು ಗಳಂತೆ ಜಗತ್ತಿಿನ ಹೊಗಳಿಕೆಯಲ್ಲಿ ಕೊಚ್ಚಿಿ ಹೋಗದ ಪ್ರಧಾನಿ ನರೇಂದ್ರ ಮೋದಿಯವರು ಈ ಅಭಿನಂದನೆಗೆ ಅರ್ಹರು.

ಆರ್‌ಸಿಇಪಿ ಒಪ್ಪಂದ ಇಂದು ನಿನ್ನೆೆಯದಲ್ಲ. ಯುಪಿಎ ಸರಕಾರ 2012ರ ತನ್ನ ಅಧಿಕಾರಾವಧಿಯಲ್ಲಿ ಈ ಒಪ್ಪಂದದ ಮಾತುಕತೆ
ಆರಂಭಗೊಂಡಿತ್ತು. ಏಳು ದೇಶಗಳ ಮುಕ್ತ ವ್ಯಾಾಪಾರ ಒಪ್ಪಂದಕೂಟಕ್ಕೆೆ ಸೇರಲು ಒಪ್ಪಿಿಗೆ ನೀಡಿದ್ದರು. ಆಗ ಭಾರತದ ಆರ್ಥಿಕತೆ ಸಂಪನ್ನವಾಗಿತ್ತು. ಆದ ಕಾರಣ ನಾವು ಸೇರಿಕೊಂಡಿದ್ದೆವು ಎಂಬುದಾಗಿ ಹೇಳಿಕೊಳ್ಳುತ್ತಿಿರುವ ಕಾಂಗ್ರೆೆಸ್, ಮೋದಿಯವರು ಈ ಒಪ್ಪಂದದಿಂದ ಹಿಂದೆ ಸರಿಯಲು ತಾನೇ ಕಾರಣ ಎಂದು ಬೀಗುತ್ತಿಿದೆ.

ಈಗ ಮೋದಿಯವರು ಆರ್‌ಸಿಇಪಿ ಒಪ್ಪಂದಕ್ಕೆೆ ಸಹಿ ಮಾಡಿದ್ದರೆ ನಮ್ಮ ರೈತರು, ಉತ್ಪಾಾದಕರು ವಿದೇಶಿ ಆಮದಿನ ಎದುರು ನಿಲ್ಲಲಾಗದೆ ಸೋತು ಹೋಗುತ್ತಾಾನೆ ಎಂಬ ಮಾತೇ ನಮ್ಮ ಮನಸ್ಥಿಿತಿ ಎಂಥದ್ದು ಎಂಬುದನ್ನು ತೋರಿಸುತ್ತದೆ. ಈ ಒಪ್ಪಂದಕ್ಕೆೆ ಸಹಿ ಮಾಡಿ ಮೋದಿ ದೇಶ ಮಾಡುತ್ತಿಿದ್ದಾರೆಂದು ಇಲ್ಲ ಸಲ್ಲದ ಸುದ್ದಿ ಹಬ್ಬಿಿಸುತ್ತಿಿರುವವರು ನಮ್ಮ ಉತ್ಪಾಾದಕರ ದೀನಸ್ಥಿಿತಿಗೆ 60 ವರ್ಷದ ತಮ್ಮ ಆಡಳಿತವೇ ಕಾರಣ ಎಂಬುದನ್ನು ಆತ್ಮಾಾವಲೋಕನ ಮಾಡಿಕೊಳ್ಳಲಿ .
ಪ್ರಧಾನಿ ಮೋದಿಯವರ ಈ ನಿರ್ಧಾರ ದೇಶವಾಸಿಗಳಲ್ಲಿ ತೀವ್ರ ಸಂತೋಷಕ್ಕೆೆ ಕಾರಣವಾಗಿದೆ. ಎಲ್ಲಿ ಒಪ್ಪಂದಕ್ಕೆೆ ಸಹಿಹಾಕಿ ರೈತರು ಮತ್ತು ಇತರೆ ಪೂರಕ ಉದ್ಯಮಗಳಿಗೆ ಕಂಟಕವಾಗುತ್ತಾಾರೆ ಎಂದು ಹೆದರಿರುವವರೆಲ್ಲರೂ ಈಗ ನಿರಾಳವಾಗಿದ್ದಾರೆ .
*ಮಣಿಕಂಠ ಪಾ ಹಿರೇಮಠ, ಬಾಗಲಕೋಟೆ

Leave a Reply

Your email address will not be published. Required fields are marked *

error: Content is protected !!