Thursday, 12th December 2024

ಮುದ್ರಣಾಲಯ ತೆರೆಯಲು ಅನುಮತಿ ಕೊಡಿ

ದಿನನಿತ್ಯದ ಬಳಿಕೆಯ ದಿನಸಿ ಅಂಗಡಿಗಳು ತರಕಾರಿ ಮತ್ತು ಮದ್ಯ ಇವುಗಳನ್ನು ಕೊಳ್ಳಲು ಸಾರ್ವಜನಕರಿಗೆ ಅನುಕೂಲವಾಗ ಲೆಂದು ಸರಕಾರ ಲಾಕ್‌ಡೌನ್ ಸಮಯದಲ್ಲಿ ನಾಲ್ಕು ಗಂಟೆ ಅವಕಾಶ ಕಲ್ಪಿಸಿರುವುದು ಸರಿ.

ಔಷಧ ಅಂಗಡಿಗಳಂತೂ ಸದಾ ತೆಗೆದಿರುತ್ತದೆ. ಆದರೆ ಮುದ್ರಣಾಲಯಗಳನ್ನು ತೆಗೆಯಲು ಮಾತ್ರ ಪರವಾನಿಗೆ ಇಲ್ಲ. ಇಲ್ಲಿ ಮುದ್ರಣಕ್ಕೆ ಬರುವವರು ಬೆರಳೆಣಿಕೆಯಷ್ಟು. ಈಗೀಗ ಇ ಮೇಲ್ ಇರುವುದರಿಂದ ಪುಸ್ತಕದ ಡಿಟಿಪಿ ಪ್ರತಿಯನ್ನೆ ಮೇಲ್ ಮಾಡಿದರೆ ಆಯ್ತು. ಅದು ಮುದ್ರಣಗೊಂಡು ಮಾಲಿಕರು ಮಟ್ಟಸವಾಗಿ ಪ್ಯಾಕ್ ಮಾಡಿ ಗಾಡಿಯಲ್ಲಿ ಮನೆಗೆ ತಂದು ಮುಟ್ಟಿಸುತ್ತಾರೆ.

ಮುದ್ರಣಾಲಯದಲ್ಲಿ ಎಷ್ಟೋ ಕಡೆ ಮೂವರು ನಾಲ್ವರು ಮಾತ್ರ ನೌಕರರಿರುತ್ತಾರೆ. ಇಲ್ಲಿ ಸೋಂಕು ಹರಡುವ ಸಂಭವವೇ ಇಲ್ಲ.
ಮುದ್ರಣಾಲಯಗಳೇ ಜ್ಞಾನ ಭಂಡಾರವಾದ ಪುಸ್ತಕಗಳ ತಾಯಂದಿರು. ಇನ್ನೂ ಪುಸ್ತಕ್ದ ಅಂಗಡಿಗಳು. ಮದ್ಯದ ಅಂಗಡಿ ಮುಂದೆ ಸಾಲು ಸಾಲು ಆದರೆ ದಿನವೆಲ್ಲ ಪುಸ್ತಕದ ಅಂಗಡಿ ತೆಗೆದರೂ ಬರುವವರೂ ಎಪ್ಪತ್ತು ಮೂವತ್ತೂ ಆಸು ಪಾಸು ಇರಬಹುದು. ಇಲ್ಲಿ ಕೇವಲ ಕತೆ ಕವನ ವಿಚಾರ ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳು ಮಾತ್ರ ಇರುತ್ತವೆ.

ಆದ್ದರಿಂದ ನೂಕು ನುಗ್ಗಲು ಕಲ್ಪಿಸಲೂ ಸಾಧ್ಯವಿಲ್ಲ. ಆದರೆ ಪುಸ್ತಕಗಳು ಅದೂ ಈ ಲಾಕ್‌ಡೌನ್ ಸಮಯವನ್ನು ಲವಲವಿಕೆ ಯಿಂದ ಕಳೆಯಲು ಜ್ಞಾನರ್ಜನೆಗೆ ಅತಿ ಮುಖ್ಯ. ಇದನ್ನು ಪರಿಗಣಿಸಿ ತಜ್ಞರೊಂದಿಗೆ ಚರ್ಚಿಸಿ ಮುದ್ರಣಾಲಯ ಮತ್ತು ಪುಸ್ತಕದಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು.

– ಸತ್ಯಬೋಧ ಬೆಂಗಳೂರು