ರಾಜ್ಯ ಸರಕಾರವು ಸಾಮಾನ್ಯ ಜನರಿಗೆ ಯಾವುದೇ ತೂಂದರೆಯಾಗದಂತೆ ಮತ್ತು ದಿನದ ದುಡಿಮೆಯನ್ನು ನೆಚ್ಚಿಕೊಂಡ
ಜನ ಸಾಮಾನ್ಯರನ್ನು ಸಂಕಟಕ್ಕೆ ದೂಡುವ ಲಾಕ್ಡೌನ್ ಅಥವಾ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಕಠಿಣ ನಿರ್ಧಾರದ
ಬದಲಿಗೆ, ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಕರೋನಾ ಸೋಂಕಿನ ನಿಯಂತ್ರಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ.
ಕರೋನಾ ನಿಯಮಗಳನ್ನು ಮೀರಿದಾಗ ಜನಸಾಮಾನ್ಯರು ಜನಪ್ರತಿನಿಧಿ ಎನ್ನುವ ತಾರತಮ್ಯ ಮಾಡದೆ ತಪ್ಪಿತಸ್ಥರ ಮೇಲೆ
ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಆಗಲೇ ಬಡವರ ಮೇಲೆ ತಾರತಮ್ಯ ತಪ್ಪುತ್ತದೆ. ಈ ಹಿಂದೆ ಲಾಕಡೌನ್ ನಿಯಮ
ಗಳು ಕೇವಲ ಸಾಮಾನ್ಯ ಜನರಿಗೆ ಸೀಮಿತವಿದಂತೆ ಇತ್ತು. ಏಕೆಂದರೆ ಸಾಮಾನ್ಯರ ಜನರು ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಸಾಮಾನ್ಯ ಜನರ ಹತ್ತಿರವೇ ಹೆಚ್ಚು ದಂಡ ವಸೂಲಿ ಮಾಡಿದಾರೆ.
ಆದರೆ ಯಾವ ಪ್ರಭಾವಿ ವ್ಯಕ್ತಿಯಾಗಲಿ ಜನಪ್ರತಿನಿಧಿಯಾಗಲಿ ದಂಡ ವಸೂಲಿ ಮಾಡಿರುವ ಉದಾಹರಣೆಗಳಿಲ್ಲ. ಕರೋನಾ ಉಲ್ಬಣವಾಗದಂತೆ ವರ್ತಿಸುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ. ಆರ್ಥಿಕತೆಗಿಂತ ಆರೋಗ್ಯ ಮುಖ್ಯ ಆದರೆ ಸಾಮಾನ್ಯರಿಗೆ ಬದುಕುವುದಕ್ಕೆ ಆರ್ಥಿಕತೆ ಮತ್ತು ದುಡಿಮೆಗೆ ತೊಂದರೆಯಾಗದಂತೆ ಕಠಿಣ ನಿಯಮ ರೂಪಿಸಬೇಕು. ಈಗ ಶಾಲೆಗಳಿಗೆ ಸಂಬಂಧಿಸಿದಂತೆಯೂ ಸರಕಾರ ಸ್ಪಷ್ಟವಾದ ತೀರ್ಮಾನಕ್ಕೆ ಬರಬೇಕಾಗಿದೆ.
ಒಂದರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಉತೀರ್ಣ ಮಾಡಲು ಪರೀಕ್ಷೆ ನಡೆಸಬೇಕೋ ಬೇಡವೋ ಎನ್ನುವ ಗೊಂದಲ ಇನ್ನೂ ಬಗೆಹರಿದಿಲ್ಲ. ಪರೀಕ್ಷೆ ಮತ್ತು ಫಲಿತಾಂಶಕ್ಕೆ ಸಂಬಂಧಿಸಿದ ಗೊಂದಲಗಳನ್ನು ಆದಷ್ಟು ಬೇಗ ಪರಿಹರಿಸಿಕೊಂಡು, ಶಾಲೆಗಳಿಗೆ ಅಲ್ಪಕಾಲದ ಬೇಸಿಗೆ ರಜೆ ನೀಡುವುದು ಸಹ ಅನಿವಾರ್ಯ. ಈ ಬಿರು ಬಿಸಿಲಿನಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮಕ್ಕಳ ಆರೋಗ್ಯ ಹದಗೇಡದಂತೆ ನೋಡಿಕೊಳ್ಳುವುದು ಸರಕಾರದ ಮುಖ್ಯ ಜವಬ್ದಾರಿಯಾಗಿದೆ.
-ಸಂತೋಷ್, ಜಾಬೀನ್ ಸುಲೇಪೇಟ್, ಕಲಬುರಗಿ