Friday, 21st June 2024

ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಯ ಸರ್ವ ಹಕ್ಕಿದೆ

ಭವ್ಯ ಭಾರತದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ವಿಶ್ವಖ್ಯಾತ ಸಂಸ್ಕೃತಿಯ ಸಂಸ್ಕಾರ ಸಿಂಧುವಾಗಿದೆ. ಈ ದೇಶ ದಲ್ಲಿ ಲಾರ್ಡ್ ಮೆಕಾಲೆ ಪ್ರಣೀತವಾದ ಶಿಕ್ಷಣ ಪದ್ಧತಿಚಾಲ್ತಿಯಲ್ಲಿದ್ದು ನಿರುಪಯುಕ್ತವಾಗಿದೆ. ಈ ಕಾರಣದಿಂದ ಭಾರತೀಯ ಶಿಕ್ಷಣ ಪದ್ಧತಿಯ ಮೂಲಕ ಸ್ವತಂತ್ರ ಸಮರ್ಥ ಭಾರತ ನಿರ್ಮಾಣದ, ಕೌಶಲ್ಯಾಭಿವೃದ್ಧಿಯ ಅಭಿನವ ಸಶಕ್ತ ದೇಶ ನಿರ್ಮಾಣದ
ಸದುದ್ದೇಶದಿಂದ ನಮ್ಮ ಹೆಮ್ಮೆಯ ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಯವರ ದಕ್ಷ ನೇತೃತ್ವದಲ್ಲಿ ನೂತನ ಶಿಕ್ಷಣ ನೀತಿಯನ್ನು ದೇಶದಲ್ಲಿ ಜಾರಿಗೆ ತರಲು ತಯಾರಿ ನಡೆಸುತ್ತಿದೆ.

ವಿದ್ಯಾರ್ಥಿಯು ಪದವಿ ಪೂರ್ವ ಹಂತದವರೆಗೆ ಸಂಸ್ಕೃತ, ಹಿಂದಿ, ಉರ್ದು ಇತ್ಯಾದಿ ಭಾಷೆಗಳನ್ನು ಅಧ್ಯಯನ ಮಾಡಿದ್ದು, ಅವರಿಗೆ ಕನ್ನಡವನ್ನು ಕಡ್ಡಾಯ ಮಾಡಿರುವು ದಾದರೂ ಯಾವ ಪುರುಷಾರ್ಥಕ್ಕೆ? ಅವರೀಗ ಕನ್ನಡದೊಂದಿಗೆ ಇಂಗ್ಲೀಷ್ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಮೂಲಕ ಎಲ್ಲಾ ಅಲ್ಪಸಂಖ್ಯಾತ ಭಾಷೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಕ್ಕೆ ವಿರುದ್ಧವಾಗಿ ಸಾಯಿಸಲಾಗುತ್ತಿದೆ. ವಿದ್ಯಾರ್ಥಿಗಳನ್ನು ಕೂಪ ಮಂಡೂಕಗಳನ್ನಾಗಿ ಮಾಡಲಾಗುತ್ತಿದೆ.

ಬಹು ಭಾಷೆಗಳ ಕಲಿಕೆಯ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಸಬ್ ಕಾ ಸಾಥ್ ಸಬ್ ಕಾ ಕಾಸ್ ಎಂಬ ತಮ್ಮದೇ ಪ್ರಧಾನಿಯ ಆಶಯಕ್ಕೆ ಕೊಡಲಿ ಪೆಟ್ಟು ನೀಡಿ ದ್ದಾರೆ. ನ್ಯಾಯಾಲಯ ಸಲಹೆ ನೀಡಿದ ಮೇಲಾದರೂ ತಪ್ಪನ್ನು ತಿದ್ದಿಕೊಂಡು ವಿದ್ಯಾರ್ಥಿ ಗಳಿಗೆ ಅವರು ಅಧ್ಯಯನ ಮಾಡಲು ಬಯಸುವ ಭಾಷೆ ಅಧ್ಯಯನಕ್ಕೆ ಅವಕಾಶ ನೀಡಬೇಕು.

-ಪ್ರೊ.ಕೆ.ಕೃಷ್ಣಮೂರ್ತಿ ಮಯ್ಯ, ಬೆಂಗಳೂರು

ವಿಜಯಪುರಕ್ಕೆ ಸಚಿವ ಸ್ಥಾನ ಕೊಡಿ
ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸಲು ಮುಖ್ಯ ಕಾರಣ ಸ್ಥಳೀಯ ಶಾಸಕರು, ಮಂತ್ರಿಗಳು ಮತ್ತು ಪ್ರಮುಖವಾಗಿ ಕಾರ್ಯ ಕರ್ತರು. ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಮುದ್ದೇಬಿಹಾಳ ಶಾಸಕರಾದ ಎ ಎಸ್ ನಡಹಳ್ಳಿ ಮತ್ತು ದೇವರ ಹಿಪ್ಪರಗಿ ಶಾಸಕರಾದ ಸೋಮನಗೌಡ ಪಾಟೀಲ ಮೂವರು ಶಾಸಕರು ಹಗಲಿರುಳು ಸಿಂದಗಿ ಕ್ಷೇತ್ರದ್ಯಾಂತ ಪ್ರತಿಹಳ್ಳಿ ಹಳ್ಳಿಯೂ ಸಂಚರಿಸಿ ಮತದಾರರಲ್ಲಿ ಬಿಜೆಪಿ ಸರಕಾರ ಮಾಡಿರುವ ಕೆಲಸ ಗಳು ಕುರಿತು ಅರಿವು ಮೂಡಿಸಿದರು.

ಇವರೊಟ್ಟಿಗೆ ಸಿಂದಗಿ ಹಾಲಿ ಶಾಸಕರಾದ ರಮೇಶ ಭೂಸನೂರ ಸೇವಾ ಕಾರ್ಯಗಳು, ಕ್ಷೇತ್ರದ ಜನತೆಯೊಂದಿಗಿನ ಒಡನಟ ಜೊತೆಗೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಆರ್ ಎಸ್ ಪಾಟೀಲ ಸ್ಥಳೀಯ ಕಾರ್ಯ ಕರ್ತರು ಸಹ ಪ್ರಚಾರ ಮಾಡಿದ್ದರ ಪರಿಣಾಮವಾಗಿ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯು ಮೂವತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲು ಸಾಧ್ಯವಾ ಯಿತು. ಈ ಮೂಲಕ ವಿಜಯಪುರ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಪಾಲಾಗಿವೆ.

ಹಾನಗಲ್ ಕ್ಷೇತ್ರದಲ್ಲಿ ಸೋತರು ಸಿಂದಗಿ ಕ್ಷೇತ್ರದಲ್ಲಿ ಗೆಲವು ಸಾಧಿಸಿದ ಸಮಾಧಾನ ಬಿಜೆಪಿ ಪಾಳೆಯದಲ್ಲಿದೆ. ಹೀಗಿದ್ದರೂ ಜಿಲ್ಲೆಗೆ ಒಂದು ಸಚಿವ ಸ್ಥಾನವನ್ನು ಸರಕಾರ ಕೊಡದಿರು ವುದು ನಿಜಕ್ಕೂ ಬೇಸರ ಸಂಗತಿಯಾಗಿದೆ. ಜಿಲ್ಲೆಯವರೆಯಾದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯ ಹಿರಿಯ ನಾಯಕರು, ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಕೇಂದ್ರ ಮಂತ್ರಿಯಾಗಿದ್ದವರು. ಹಾಗೆ ನೋಡಿದರೆ ಸರಕಾರ ಯತ್ನಾಳರಿಗೆ ಪ್ರಥಮ ಪ್ರಾಶಸ್ತ್ಯ ಕೊಡಬೇಕಾಗಿತ್ತು, ಕೊಡುತ್ತಿಲ್ಲ ಇದು ಬೇಸರದ ಸಂಗತಿ. ಈ ಉಪಚುಣಾವಣೆಯಲ್ಲಿ ಬಿಜೆಪಿಯನ್ನು ಉಳಿಸಿದ್ದು ಸಿಂದಗಿ ಕ್ಷೇತ್ರ. ಜಿಗೆ ಒಂದಾದರು ಸಚಿವ ಸ್ಥಾನ ಸಿಗಲಿ ಎಂಬ ಆಶಯದಿಂದ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಅದರಲ್ಲು ಯತ್ನಾಳರಿಗೆ ಸಚಿವ ಸ್ಥಾನ ಕೊಡಬೇಕೆಂದು ಕೂಗು ಗಟ್ಟಿಯಾಗಿದೆ.
-ಶ್ರೀರಂಗ ಪುರಾಣಿಕ, ವಿಜಯಪುರ

ಬೆಲೆ ಇಳಿಕೆ ಸ್ವಾಗತಾರ್ಹ

ಕಳೆದ ಮೂರ್ನಾಲ್ಕು ತಿಂಗಳಿನಿಂದ ತೈಲಗಳ ಬೆಲೆ ಏರಿಕೆಯಿಂದಾಗಿ ಬಳಲಿ ಬೆಂಡಾಗಿದ್ದ ದೇಶದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೈಲಗಳ ಮೇಲಿನ ಸುಂಕ ಇಳಿಸಿರುವುದು ಜನತೆಗೆ ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ. ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶದ ಪರಿಣಾಮವೋ, ಅಥವಾ ವಿರೋಧ ಪಕ್ಷಗಳ ಒತ್ತಡವೋ, ಒಟ್ಟಿನಲ್ಲಿ ಬೆಲೆ ಇಳಿಸಿರುವುದು ನಿಜಕ್ಕೂ ಸ್ವಾಗತಾರ್ಹ ಕ್ರಮ.

ನಿರಂತರ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಸರಕು ಸಾಗಾಣಿಕೆ ವೆಚ್ಚ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳೂ ಏರಿಕೆಯಾಗಿ ಬಡ ಮತ್ತು ಮಧ್ಯಮ ವರ್ಗದವರ ಬದುಕು ಬೆಂಕಿಯಲ್ಲಿ ಬಿದ್ದ ಬಾಣಲೆಯಂತಾಗಿತ್ತು. ಸರಕಾರವೇನೋ ತೈಲಗಳ ಮೇಲಿನ ಸುಂಕವನ್ನು ಕಡಿತಗೊಳಿಸಿ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ, ಆದರೆ ತೈಲ ಬೆಲೆ ಏರಿಕೆಯ ನೆಪವನ್ನಿಟ್ಟುಕೊಂಡು ದುಬಾರಿಯಾಗಿದ್ದ ಸರಕು ಸಾಗಾಣಿಕೆ ವೆಚ್ಚ, ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳು, ದಿನಸಿ ಪದಾರ್ಥಗಳು, ಸಿಲಿಂಡರ್, ಕಟ್ಟಡ ಸಾಮಗ್ರಿಗಳು, ಟ್ಯಾಕ್ಸಿ ಬಾಡಿಗೆ, ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಇಳಿಕೆಗೆ ಶೀಘ್ರವೇ ಕ್ರಮ ಕೈಗೊಳ್ಳುವ ಮೂಲಕ ಜನರ ಮೇಲಿನ
ಹೊರೆಯನ್ನು ಇನ್ನಷ್ಟು ತಗ್ಗಿಸಬೇಕಾಗಿದೆ.

-ಮುರುಗೇಶ.ಡಿ ದಾವಣಗೆರೆ

ಕಾಶಿಯ ಆಟೋಗಳು

ಇತ್ತೀಚೆಗೆ ನಾವು ೨೫ ಜನರ ದಂಡು ಕಾಶಿ, ಪ್ರಯಾಗ ಯಾತ್ರೆಗೆ ಹೋಗಿದ್ದೆವು. ಕಾಶಿಯ ಇಕ್ಕಟ್ಟಾದ ರಸ್ತೆಗಳು, ಎಲ್ಲೆಡೆ ಅರ್ಚಕರ ದಕ್ಷಿಣಾ ದೇವ್‌ಗಳು, ಸಿಗ್ನಲ್ಲುಗಳಿಲ್ಲದ ಹೊಂಡದ ರಸ್ತೆಗಳಲ್ಲಿ ಬೇಕಾಬಿಟ್ಟಿ ಸಂಚರಿಸುವ ವಾಹನಗಳು, ಅವರನ್ನು ನಿಯಂತ್ರಿ ಸದೇ ಜನರಿಗೆ ಒಂದೆಡೆ ನಿಲ್ಲಲು ಬಿಡದೇ ಎಲ್ಲೆಡೆ ಜಾವ್ ಜಾವ್ ಎಂದು ಲಾಠಿ ತೋರಿಸುವ ಪೋಲೀಸರು, ಗಲ್ಲಿಗಳೊಳಗಿನ ಗಬ್ಬು ನಾತ, ಇದೆಲ್ಲವನ್ನೂ ಮರೆಸುವಂತಹ ವಿಶ್ವನಾಥನ ದಿವ್ಯ ರೂಪ ದರ್ಶನ, ಜತೆಗೆ ನಮ್ಮನ್ನು ಆಕರ್ಷಿಸಿದ್ದು ಇಲ್ಲಿನ ಅಸಂಖ್ಯ ಬ್ಯಾಟರಿ ಚಾಲಿತ ಆಟೋಗಳು!

6. ಜನ ಕೆಲವೊಮ್ಮೆ ಚಾಲಕನ ಪಕ್ಕ ಒಬ್ಬ ಒಟ್ಟು 7 ಜನ ಆರಾಮವಾಗಿ ಪಯಣಿಸಬಹುದಾದ ಆಟೋಗಳು. ಪರಿಸರ ಮಾಲಿನ್ಯ ವಿಲ್ಲ. ಚೌಕಾಸಿಯಿಲ್ಲ. ಚಾಲಕರ ಸೌಜನ್ಯಪೂರಿತ ನಡವಳಿಕೆ. ನಾವು 25 ಜನ ಕೇವಲ 4 ಆಟೋಗಳಲ್ಲಿ ಹಲವು ದೇಗುಲ ಸಂದರ್ಶಿಸಿದೆವು. ಇದೇ ಬೆಂಗಳೂರಿನಲ್ಲಾದರೆ ನಮಗೆ 9 ಆಟೋಗಳು ಬೇಕಾಗುತ್ತಿತ್ತು.

ಅಲ್ಲಿಗೂ ಆ ಚಾಲಕ ಹೋಗುವ ದಿಕ್ಕಿಗೇ ನಾವು ಹೋಗಬೇಕಾಗುತ್ತಿತ್ತು. ಜತೆಗೆ ಅವರ ಸೌಜನ್ಯರಹಿತ ವರ್ತನೆ ಬೇರೆ. ನಮ್ಮ ಮಾನ್ಯ ಮುಖ್ಯಮಂತ್ರಿಗಳಲ್ಲಿ ಒಂದು ಮನವಿ. ದಯವಿಟ್ಟು ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸಲು ಈ ಬ್ಯಾಟರಿ ಚಾಲಿತ ವಾಹನಗಳಿಗೆ ಪರವಾನಗಿ ನೀಡಿ ಜನತೆಗೆ ಸುಖಾನುಭೂತಿ ನೀಡಬಾರದೇಕೆ?

-ಕೆ.ಲೀಲಾ ಶ್ರೀನಿವಾಸ್. ಪಂಚವಟಿ

Leave a Reply

Your email address will not be published. Required fields are marked *

error: Content is protected !!