ಆರೋಗ್ಯ ಸಂಸ್ಥೆಯ ವರದಿ ಸಮಾಧಾನ ತಂದಿದೆ

ಆರೋಗ್ಯ ಸಂಸ್ಥೆಯ ವರದಿ ಸಮಾಧಾನ ತಂದಿದೆ

image-d139c7b8-8398-4c90-86d5-0f58be11e55e.jpg
Profile Vishwavani News Dec 8, 2021 1:41 PM
image-7ddac28b-4b96-4bd3-a5d0-bda071e2b9da.jpg
ವಿಶ್ವದೆಡೆ ತಾಂಡವವಾಡುತ್ತಿರುವ ಕರೋನಾ ವೈರಸಿನ ರೂಪಾಂತರ ತಳಿ ಒಮೈಕ್ರಾನ್‌ನಿಂದ ಇದುವರೆಗೆ ಜೀವಹಾನಿಯಾಗಿಲ್ಲ ವೆಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿರುವುದು ಸಮಾಧಾನದ ಸಂಗತಿಯಾಗಿದೆ. ಈಗಾಗಲೇ ವಿಶ್ವದ ಐವತ್ತಕ್ಕೂ ಹೆಚ್ಚಿನ ದೇಶಗಳಲ್ಲಿ ಒಮೈಕ್ರಾನ್ ವೈರಾಣುವಿನ ಸಾಂಕ್ರಾ ಮಿಕ ರೋಗವು ಹರಡುತ್ತಿದ್ದು, ಎಡೆ ಭಯದ ವಾತಾವರಣ ಸೃಷ್ಟಿಸಿದೆ. ಈ ಹೊಸ ರೂಪಾಂತರ ತಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ. ಎಲ್ಲ ದೇಶಗಳೂ ಸರ್ವಸನ್ನದ್ಧವಾಗಿ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು. ಈ ಒಮೈಕ್ರಾನ್ ತಳಿಯ ರೋಗ ಲಕ್ಷಣದ, ಸೂಕ್ಷ್ಮತೆಯ ವರದಿಗಳನ್ನು ಪರಸ್ಪರ ಹಂಚಿಕೊಂಡು, ವೈದ್ಯಕೀಯ ವಿಜ್ಞಾನಿಗಳ, ಸಂಶೋಧನಾ ತಜ್ಞರ ಸಲಹೆ, ಮಾರ್ಗಸೂಚಿಗಳ ವರದಿ ಪಡೆದು ಒಮೈಕ್ರಾನ್ ನಿಯಂತ್ರ ಣಕ್ಕೆ ಸತತ ಶ್ರಮ ಪಡುತ್ತಿರುವುದು ಶ್ಲಾಘನೀಯವಾಗಿದೆ. ದೇಶದಲ್ಲಿ ಈ ಹೊಸರೋಗದ ರೂಪಾಂತರಿ ತಳಿಯನ್ನು ನಿಯಂತ್ರಿಸಲು ಸರ್ವ ರೀತಿಯ ಸಿದ್ಧತೆಯಲ್ಲಿ. ಎಚ್ಚರಿಕೆಯ ಕ್ರಮ ತೆಗೆದುಕೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಶ್ರಮ ಸ್ವಾಗತಾರ್ಹವಾಗಿದೆ. ಹಾಗೇ ಒಮೈಕ್ರಾನ್ ರೋಗದಿಂದ ಇದುವರೆಗೆ ವಿಶ್ವದ ಯಾವುದೇ ದೇಶದಲ್ಲಿ ಜೀವಹಾನಿಯಾದ ಪ್ರಕರಣಗಳು ಕಂಡುಬಂದಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದ್ದರೂ ಸದಾ ಜಾಗೃತರಾಗಿ, ಎಚ್ಚರಿಕೆಯಿಂದ ನಮ್ಮ ಆರೋಗ್ಯದೊಂದಿಗೆ, ಸಮಾಜದ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ. ಸರಕಾರದ, ತಜ್ಞರ, ವೈದ್ಯರ ಸಲಹೆ ಮಾರ್ಗಸೂಚಿಗಳನ್ನು ಪರಿಪಾಲಿಸಿಕೊಂಡು ಮಾ ಧರಿಸಿ, ಸಾಮಾಜಿಕ ಅಂತರ ಕಾಯ್ದು ಕೊಂಡು. ಶುಚಿತ್ವದೊಂದಿಗೆ ಈ ರೋಗ ಹರಡದಂತೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಗುರುತರ ಜವಾಬ್ದಾರಿ ಸದ್ಯ ಪ್ರತಿಯೊಬ್ಬ ರದ್ದಾಗಿದೆ. - ಆರ್. ಬಿ.ಜಿ.ಘಂಟಿ ಅಮೀನಗಡ, ಬಾಗಲಕೋಟೆ ಚಿಂತಕರ ಚಾವಡಿಗೆ ಯೋಗ್ಯರ ಆಯ್ಕೆಯಾಗಲಿ ರಾಜ್ಯದ ಮೇಲ್ಮನೆ ವಿಧಾನಪರಿಷತ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. eನಿಗಳ, ಸಾಹಿತಿಗಳ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಳಿಯಾಡಳಿತ, ಸಹಕಾರ ಹೀಗೆ ನಾನಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದ ವ್ಯಕ್ತಿಗಳು ವಿಧಾನಪರಿಷತ್ತಿನಲ್ಲಿದ್ದರೆ ಆ ಮನೆಗೊಂದುನಿಜಾರ್ಥದಲ್ಲಿ ರಾಜಕೀಯ ನಾಯಕರು ನ್ಯಾಯ ಒದಗಿಸಿದಂತೆಯೇ ಸರಿ. ವಿವಿಧ ಕ್ಷೇತ್ರಗಳ ಅವ್ಯವಸ್ಥೆಗಳ ಬಗ್ಗೆ ಧ್ವನಿಯೆತ್ತಲು ಆ ಕ್ಷೇತ್ರಗಳ ಕಲ್ಯಾಣಕ್ಕೆ ಅಭಿವೃದ್ಧಿಗೆ ಶ್ರಮಿಸಲು ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲು ಆಯಾಯ ಕ್ಷೇತ್ರದಲ್ಲಿ ಅನುಭವ ಹೊಂದಿದವರಿದ್ದರೆ ಬಹಳಷ್ಟು ಅನುಕೂಲವಾಗುವುದರೊಂದಿಗೆ ಪರಿಷತ್‌ಗೆ ಒಂದು ರೀತಿಯ ತೂಕ ಬರುತ್ತದೆ. ಆದರೆ ಈ ಬಾರಿ ೨-೩ ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳು ಕೋಟಿಗೆ ತೂಗುವ ಕುಬೇರರೇ ಎನ್ನುವುದು ಅಭ್ಯರ್ಥಿಗಳ ಆಸ್ತಿ ವಿವರ ಘೋಷಣೆ ವೇಳೆ ಬಹಿರಂಗಗೊಂಡಿದೆ. ಸ್ವಂತ ಬಲದಲ್ಲಿ ಗೆಲ್ಲಬಲ್ಲ, ಹಣ ಖರ್ಚು ಮಾಡ ಬಲ್ಲ, ತಾಕತ್ತುಳ್ಳವರಿಗೆ, ಉದ್ಯಮಿಗಳಿಗೆ ಮಣೆ ಹಾಕಿ ಚುನಾಯಿತರಾದ ಸದಸ್ಯರಿಂದ ವಿಧಾನಪರಿಷತ್ತಿನ ಪಾವಿತ್ರ್ಯತೆ ಉಳಿಯ ಬಹುದೇ? ಎನ್ನುವುದೀಗ ಪ್ರಶ್ನೆಯಾಗಿದೆ. ವಿಧಾನಪರಿಷತ್ ಹಣ ಖರ್ಚು ಮಾಡಿ ಹಣ ಗಳಿಸು ವಂತಹ ಉದ್ಯಮವಾಗದೇ ದೊಡ್ಡ ದೊಡ್ಡ ಉದ್ಯಮಿಗಳಿಗೆ ಪ್ರತಿಷ್ಠೆಗಾಗಿ, ಬೋರ್ಡ್‌ಗಾಗಿ ವಿಧಾನ ಪರಿಷತ್ ಟಿಕೆಟ್ ಭಿಕಾರಿಯಾದರೆ ಆ ಕ್ಷೇತ್ರದಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತುವ ಬದಲು ವ್ಯವಹಾರಗಳಿಗೆ ಮಾತ್ರ ಸ್ಥಾನ ಬಳಕೆಯಾಗುವುದರಲ್ಲಿ ಯಾವುದೇ ಅನುಮಾನಗಳು ಬೇಡ. ವಿಧಾನಪರಿಷತ್‌ನಲ್ಲಿ ಉತ್ತಮ ಸಂಸದೀಯ ಪಟು ಗಳು, ಸಚ್ಚಾರಿತ್ರ್ಯವಂತರು ಇರಬೇಕಾದ ದೇಗುಲ. ಈ ಮನೆಯಲ್ಲಿ ಹಿಂದೆ ಹಲವಾರು ಹಿರಿಯ ಮುತ್ಸದ್ಧಿಗಳು  ವಿಧಾನ ಪರಿಷತ್ತಿ ನಲ್ಲಿ ವಿಷಯಾಧಾರಿತವಾಗಿ ಗುಡುಗುತ್ತಿದ್ದರೆ ಅಲ್ಲಿ ಪ್ರತಿಪಕ್ಷ, ಆಡಳಿತ ಪಕ್ಷಗಳು ನಡುಗುತ್ತಿದ್ದ ಆ ದಿನಗಳಿದ್ದವು. ಹಲವಾರು ವಿಧೇಯಕಗಳು, ಬಿಲ್‌ಗಳು ರಾಜಕೀಯ ರಹಿತವಾಗಿ ನ್ಯಾಯ ಯುತವಾಗಿ ಮಂಡನೆಯಾಗುತ್ತಿದ್ದವು. ಸುಖಾಸುಮ್ಮನೆ ಸದನ, ಕಲಾಪಗಳು ಪೋಲಾಗುತ್ತಿರಲಿಲ್ಲ. ಪ್ರಸ್ತುತ ಗದ್ದಲ, ಕಾಲರ್ ಪಟ್ಟಿ ಹಿಡಿದೆಳೆಯುವ, ಸಭಾಧ್ಯಕ್ಷರಿಗೆ ಅಗೌರವ ತೋರಿದ ಘಟನೆಗಳು ನಡೆದು ವಿಧಾನಪರಿಷತ್ತಿನ ಮಾನ ಹರಾಜು ಆದ ಘಟನೆಗಳು ಸಭಾಪತಿ ಆಯ್ಕೆಯ ವೇಳೆ ನಡೆದಿತ್ತು. ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿರುವುದು ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಷತ್ತಿನಲ್ಲಿ ಧ್ವನಿಯೆತ್ತುವ ಬಗ್ಗೆ ವಿಧಾನಪರಿಷತ್ ಸದಸ್ಯರು ಹೆಚ್ಚು ಮುತುವರ್ಜಿ ವಹಿಸುವಂತಾಗಬೇಕು. - ಆದರ್ಶ್ ಶೆಟ್ಟಿ ಉಪ್ಪಿನಂಗಡಿ. ಕನ್ನಡ ವಿವಿಯಲ್ಲಿ ತಾಲಿಬಾನ್ ಆಡಳಿತ ಕನ್ನಡ ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣ ಊಹೆಗೂ ನಿಲುಕದಷ್ಟು ಕಲುಷಿತಗೊಂಡಿದೆ. ಅಸಮರ್ಥ ಆಡಳಿತ ವ್ಯವಸ್ಥೆ ತನ್ನ ಲೋಪಗಳಿಗೆ ತೇಪೆ ಹಚ್ಚಲು ಮತ್ತು ಮುಚ್ಚಿಡಲು ತಾಲಿಬಾನ್ ರೀತಿಯ ದಬ್ಬಾಳಿಕೆಯ ನೀತಿಯನ್ನು ಅನುಸರಿಸುತ್ತಿದೆ. ಸಿಬ್ಬಂದಿಗಳನ್ನು, ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿಡಲು ಪೋಲಿಸ್ ವ್ಯವಸ್ಥೆಯನ್ನು ಅನಧಕೃತವಾಗಿ ಬಳಸಿಕೊಳ್ಳುತ್ತಿದೆ. ಇಂತಹ ಕ್ರಮ ವಿಶ್ವವಿದ್ಯಾಲಯದ ಎಲ್ಲರಲ್ಲಿಯೂ ಭೀತಿಯನ್ನು ಉಂಟುಮಾಡಿದೆ. ಇಂತಹ ಭಯದ ವಾತಾವರಣದಲ್ಲಿಯೇ ವಿದ್ಯಾರ್ಥಿ ವಿದ್ಯಾರ್ಥಿನಿಯರು ದಿನಗಳನ್ನು ದೂಡುತ್ತಿದ್ದಾರೆ. ಒಂದು ಕಾಲದಲ್ಲಿ ವಿಶ್ವವಿದ್ಯಾಲಯವನ್ನು ಜ್ಞಾನ ಸೃಷ್ಟಿಯ ಕೇಂದ್ರೆವೆಂದು ಕರೆಯಲಾಗುತ್ತಿತ್ತು. ಆದರೆ ಇಂದು ವಿಶ್ವ ವಿದ್ಯಾ ಲಯವು ಆಕ್ರಮ, ಅನೀತಿ, ದಬ್ಬಾಳಿಕೆ, ಶೋಷಣೆಯ ಕೇಂದ್ರವಾಗಿ ಪರಿಣಮಿಸಿದೆ. ವಿಶ್ವವಿದ್ಯಾಲಯದ ಸ್ಥಿತಿ ಸದ್ಯ ಮುಚ್ಚಿದ ಕೆಂಡದಂತಿದ್ದು, ಭುಗಿಲೇಳುವ ಮೊದಲು ಸರಕಾರ ಮಧ್ಯಪ್ರವೇಶಿಸಲಿ. ಕಳೆದ ಮೂರು ವರ್ಷದಿಂದ ವಿಶ್ವವಿದ್ಯಾಲಯ ದಲ್ಲಿ ಕಾಣಿಸಿ ಕೊಂಡ ಭ್ರಷ್ಟಾಚಾರ, ಅರಾಜಕತೆ, ಆಡಳಿತದ ವೈಫಲ್ಯ, ನೌಕರರಿಗೆ ಅನಗತ್ಯ ಕಿರುಕುಳ, ಕಾನೂನಿನ ಬೆದರಿಕೆ, ವಿದ್ಯಾರ್ಥಿಗಳ ಮೇಲೆ ಆಡಳಿತಾಂಗದ ಹ ಯತ್ನದಂದಹ ಕಾನೂನುಬಾಹಿರ ಚಟುವಟಿಕೆಗಳು ವಿವಿಯಲ್ಲಿ ಮತ್ತೇ ಕಾಣಿಸಿಕೊಳ್ಳ ಬಾರದೆಂದರೆ ಸರಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಸದ್ಯದ ಕುಲಪತಿಗಳು ಆಡಳಿತದ ನಿರ್ವಹಣೆಯಲ್ಲಿ ಸಂಪೂರ್ಣ ವಿ-ಲವಾಗಿದ್ದು, ತಮ್ಮದೇ ಸಿಬ್ಬಂದಿಗಳ ಮೇಲೆ, ವಿದ್ಯಾರ್ಥಿಗಳ ಮೇಲೆ ದ್ವೇಷಕ್ರಮವನ್ನು ಕೈಗೊಳ್ಳುವಲ್ಲಿ ಸಂಪೂರ್ಣ ನಿರತರಾಗಿzರೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಆಡಳಿತದ ದಾದಾಗಿರಿಯನ್ನು ಗಂಭೀರವಾಗಿ ಪರಿಗಣಿಸಲಿ. ವಿಶ್ವವಿದ್ಯಾಲಯದ ಭವಿಷ್ಯದ ದೃಷ್ಟಿಯಿಂದ ಅವಽಗೂ ಮೊದಲೇ ಭ್ರಷ್ಟ ಆಡಳಿತಾಂಗವನ್ನು ವಿಸರ್ಜಿಸಿ. ಹೊಸ ವರ್ಷಕ್ಕೆ ಹೊಸ ಕುಲಪತಿ ನೇಮಕವಾಗಲಿ. - ಶರಣಪ್ಪ ಬೇವಿನಕಟ್ಟಿ ಸಂಶೋಧನಾ ವಿದ್ಯಾರ್ಥಿ
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?