ಕರೋನದ ಎರಡನೇ ಅಲೆಯ ವಿರುದ್ಧ ಸಮರದಲ್ಲಿ ಯುವಕರ ಪಾತ್ರ ಬಹಳ ಮಹತ್ವವಾಗಿದೆ. ಯುವಕರಿಗೆ ಸರಕಾರವೇ ಅಥವಾ ಹಿರಿಯರು ಜವಾಬ್ದಾರಿ ನೀಡಬೇಕು. ಬಡಾವಣೆಯ ಲೆಕ್ಕಾಚಾರವಿಟ್ಟು ತಮ್ಮ ಬಡಾವಣೆಯನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿಕೊಳ್ಳಬೇಕು. ಬಡಾವಣೆಯ ಮುಖಂಡರು, ಹಿರಿಯರು ಅಥವಾ ವಾರ್ಡ್ ಸದಸ್ಯರು ಈ ಹೊಣೆಯನ್ನು ಹೆರಿಕೊಳ್ಳಬೇಕು.
ಬಡಾವಣೆಯಲ್ಲಿ ಇರುವ ಸಕ್ರಿಯ ಸೋಂಕಿತರ ಮನೆಯನ್ನು 14 ದಿನಗಳ ಕಾಲ ಸೀಲ್‌ಡೌನ್ ಮಾಡಬೇಕು. ಜನರು ಅಲೆದಾಡ ದಂತೆ ಮತ್ತು ಸೋಂಕಿತರ ಸಂಬಂಧಿಕರು, ಸಂಪರ್ಕದಲ್ಲಿದ್ದವರು ಹೊರಗೆ ಕಾಣದಂತೆ ಆಯಾ ಬಡಾವಣೆಯ ಯುವಕರೇ ನೋಡಿಕೊಳ್ಳಬೇಕು. ಹೆಚ್ಚಿನ ಸಹಾಯ ಬೇಕಾದವರಿಗೆ ತಕ್ಷಣ ಸ್ಪಂದಿಸುವ ಸಂಪರ್ಕ ಹೊಂದಬೇಕು. ಕರೋನಾ, ಇತರ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ, ತಿಳವಳಿಕೆ ನೀಡಬೇಕು. ಲಸಿಕೆ ವಿಚಾರದಲ್ಲೂ ಜಾಗೃತಿ ಮೂಡಿಸಬೇಕು. ಈ ರೀತಿಯಲ್ಲಿ ಯುವಕರಿಗೆ ಜವಾಬ್ದಾರಿ ನೀಡಿದರೆ ಸೋಂಕಿನ ಜತೆಗೆ ಹೋರಾಡಲು ಸಮರ್ಥರಾಗುತ್ತಾರೆ ಮತ್ತು ಪೊಲೀಸ್ ಸೇರಿದಂತೆ ಇತರ ಕರೋನಾ ವಾರಿಯರ್ಸ್‌ಗಳಿಗೂ ಇದರಿಂದ ಸಹಾಯವಾಗುತ್ತದೆ.
– ಪೃಥ್ವಿರಾಜ ಕುಲಕರ್ಣಿ ಇಂಡಿ