ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಸಂದೇಶವೊಂದು ವ್ಯಾಪಕ ಪ್ರಮಾಣದಲ್ಲಿ ವೈರಲ್ ಆಗಿತ್ತು. ಬೆಳ್ತಂಗಡಿ ತಾಲೂಕಿನ ಉಜಿರೆಯ ಉದ್ಯಮಿಯೋರ್ವರ ಪುತ್ರ ಅನುಭವ್ ಎಂಬ ಪುಟ್ಟ ಬಾಲಕನನ್ನು ಅಂಗಳದಲ್ಲಿ ಆಟವಾಡುತ್ತಿದ್ದಾಗಲೇ ಅಪಹರಿಸಲಾಗಿದೆ.
ಬಾಲಕನ ಬಿಡುಗಡೆಗೆ 17 ಕೋಟಿ ಬೇಡಿಕೆಯಿದೆ ಎಂಬ ಸುದ್ದಿ ಅದಾಗಿತ್ತು. ಸುಳಿವು ಸಿಕ್ಕವರು ತಕ್ಷಣ ಸ್ಥಳೀಯ ಠಾಣೆ ವಿಷಯ ಮುಟ್ಟಿಸಿ ಜತೆಗೆ ಎಲ್ಲರಿಗೂ ಶೇರ್ ಮಾಡಿ ಎಂಬ ಒಕ್ಕಣೆಯೂ ಆ ಸಂದೇಶದಲ್ಲಿತ್ತು. ಅಸಲಿಗೆ ವಾಟ್ಸಾಪ್‌ನಲ್ಲಿ ಬರುವ ವಿವಿಧ
ಸುದ್ದಿಗಳ ಪೈಕಿ ಇದೊಂದು ಗಂಭೀರ, ವಾಸ್ತವ ಮತ್ತು ಸಿನಿಮೀಯ ಶೈಲಿಯನ್ನು ಹೋಲುವ ಪ್ರಕರಣವಲ್ಲದೆ ಪೊಲೀಸ್ ಇಲಾಖೆಗೂ ಈ ಬಾಲಕನನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿತ್ತು.
ಆಗ ತನಿಖೆ ಕೈಗೆತ್ತಿಕೊಂಡ ದ.ಕ ಜಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್ ನೇತೃತ್ವದಲ್ಲಿ ಜಿಯ 4-5 ಠಾಣೆಯ ಠಾಣಾಽಕಾರಿಗಳ ಜತೆ ಡಿವೈಎಸ್‌ಪಿ, ಎಸಿಪಿ, ಡಿಸಿಪಿ ಸೇರಿದಂತೆ ವಿಶೇಷ ತಂಡ ರಚಿಸಿ ನಾಲ್ಕೇ ದಿನಗಳಲ್ಲಿ ಬಾಲಕನನ್ನು ಕೋಲಾರ ಪೊಲೀಸರ ಸಹಕಾರದಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ಹೆತ್ತವರ ಕೈಗೊಪ್ಪಿಸಿದ್ದರು.
ಇದಕ್ಕೂ ಮುನ್ನ ಕರಾವಳಿಯಲ್ಲಿ ಸುಮಾರು ಒಂದು ತಿಂಗಳ ಅಂತರದಲ್ಲಿ ಗ್ಯಾಂಗ್ ವಾರ್, ಗಾಂಜಾ ಮತ್ತು ಹಣಕಾಸಿನ ವಿಚಾರದಲ್ಲಿ ಸರಣಿ 5 ಕೊಲೆಗಳ ಜತೆ ಕೊಲೆಯತ್ನ ಪ್ರಕರಣಗಳು ನಡೆದುಹೋದವು. ಈ ಎಲ್ಲ ಅಪರಾಧಗಳಿಂದ ಇಲಾಖೆ ಮೇಲೆ ಒತ್ತಡ ಹೆಚ್ಚಿತ್ತು. ಎಲ್ಲಾ ಪ್ರಕರಣಗಳನ್ನು ಒಂದು ವಾರದ ಕರಾವಳಿ ಪೊಲೀಸ್ ಇಲಾಖೆ ಬೇಧಿಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದರು.
ಜತೆಗೆ ಕೊಕ್ಕಡ ಸೌತಡ್ಕ ಬಳಿಯ ಸಾಮಾಜಿಕ ಮುಖಂಡರೋರ್ವರ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ದರೋಡೆಕೋರರ ತಂಡ ಮನೆಯೊಡತಿಯ ಮೇಲೆ ಮಾರಣಾಂತಿಕ ಹ ನಡೆಸಿ ಪರಾರಿಯಾಗಿವೆ. ಈ ಪ್ರಕರಣವು ಕೂಡ ಪೊಲೀಸ್ ಇಲಾಖೆಗೆ ತಲೆನೋವಿನ ಜತೆಗೆ ನಿದ್ದೆಗೆಡಿಸಿದೆ. ಇನ್ನು ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾ ಚಾರದ ಬಗ್ಗೆ ವರ್ಗಾವಣೆ ದಂಧೆಯ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಅಬಕಾರಿ ಇಲಾಖಾಧಿಕಾರಿಯೋರ್ವರ ಪುತ್ರಿ ಇಲಾಖೆಯ ಅವ್ಯವಸ್ಥೆಯನ್ನು ಹೊರಹಾಕಿದ್ದಾರೆ.
ಪ್ರಸ್ತುತ ಯಾವುದೇ ಒಂದು ಇಲಾಖೆಗೆ ನೇಮಕ ಹೊಂದಬೇಕಿದ್ದರೂ ಹಣ ನೀಡಬೇಕು. ಮುಂಭಡ್ತಿ ಹೊಂದಬೇಕಿದ್ದರೂ ಹಣ ನೀಡಬೇಕು ಮತ್ತೊಂದೆಡೆ ವರ್ಗಾವಣೆ, ಆಯಕಟ್ಟಿನ ಜಾಗಕ್ಕೆ ಕೋಟ್ಯಂತರ ರುಪಾಯಿ ಬೇಡಿಕೆಯು ಬಲು ಜೋರಾಗಿಯೇ ಇದೆ. ಒಬ್ಬ ಒಂದು ಇಲಾಖೆಯಲ್ಲಿ ವರ್ಗಾವಣೆ ಬಯಸುವುದು ಒಂದು ವೈಯುಕ್ತಿಕ ಸಮಸ್ಯೆಗಾಗಿ, ಕೌಟುಂಬಿಕ ಕಾರಣಕ್ಕಾಗಿ, ಅನಾರೋಗ್ಯ ಕಾರಣಕ್ಕಾಗಿ, ದೂರದ ಪ್ರಯಾಣದ ಕಾರಣಕ್ಕಾಗಿ ಅಥವಾ ಅದರಿಂದಾಚೆಗೆ ಅಡ್ಡ ದಾರಿಯ ಮೂಲಕ ಅತಿ ಹೆಚ್ಚು ಆದಾಯ ಗಳಿಸುವ ಸ್ಥಾನಕ್ಕೆ ವರ್ಗಾವಣೆ ಬಯಸುತ್ತಾನೆ.
ಪ್ರಸ್ತುತ ಕೆಲ ಭಾಗಗಳಲ್ಲಿ ಬಿ.ಪಿ, ಶುಗರ್ ಹೊಂದಿರುವ ಅನಾರೋಗ್ಯ ಪೀಡಿತ ಅಽಕಾರಿಗಳ ಅರ್ಹರ ವರ್ಗಾವಣೆಗೂ ಹಣಕಾಸಿನ
ಬೇಡಿಕೆಯಿಡುವ ಅಽಕಾರಿಗಳು ಮಾನವೀಯತೆ ಮರೆತಿರುವುದಕ್ಕೆ ಹಿಡಿದಿರುವ ಕೈಗನ್ನಡಿಯಂತಿದೆ. ಹಣದ ಆಸೆಗೆ ಮಾನವೀಯತೆ ಮರೆಯುವ ಕೆಲ ಅಽಕಾರಿಗಳ ಪರಾಕಾಷ್ಠೆಗೆ, ಪ್ರಾಮಾಣಿಕ, ನ್ಯಾಯದ ಹಾದಿಯಲ್ಲಿ ಬಂದ ಅಭ್ಯರ್ಥಿಗಳು, ಅಧಿಕಾರಿಗಳು, ಉದ್ಯೋಗಿಗಳು ಬಲಿಪಶುವಾಗುತ್ತಿರುವುದು ಕೂಡ ಕಟು ವಾಸ್ತವ.
ಯಾವುದೇ ಒಂದು ಇಲಾಖೆಯಲ್ಲಿ ಶೇ.60 ಮಂದಿ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದ್ದರೆ ಶೇ.40 ಮಂದಿ ನಡೆಸುವ ಭ್ರಷ್ಟಾಚಾರ, ಅಡ್ಡ ಹಾದಿ, ಕಳ್ಳ ಹಾದಿಗೆ ಇಡೀ ಅಧಿಕಾರಿಗಳನ್ನೇ ಅಪರಾಧಿ ಸ್ಥಾನದಲ್ಲಿ ಕಾಣುವ, ಭ್ರಷ್ಟರನ್ನಾಗಿ ಕಾಣುವಂತೆ ಮಾಡುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರಿ ಇಲಾಖೆಗಳಲ್ಲಿ ಉದ್ಯೋಗಿಗಳು
ಸಾರ್ವಜನಿಕರೊಡನೆ ಸೌಜನ್ಯಯುತವಾಗಿ ವರ್ತಿಸಬೇಕು, ಉತ್ತಮ ಸೇವೆ ನೀಡಬೇಕೆಂಬ ಸುತ್ತೋಲೆ ಹೊರಡಿಸಿರುವುದು ಉತ್ತಮ ಬೆಳವಣಿಗೆ ಸರಿ. ಅದೇ ರೀತಿ ಇಲಾಖೆಗಳಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದ ಹೊಣೆಗಾರಿಕೆಯ ಜತೆ ರಾಜಕೀಯದಲ್ಲಿ ಕಳಂಕ ರಹಿತರಿಗೆ ಟಿಕೆಟ್ ನೀಡುವ ಬೆಳೆಸುವ ಕಾರ್ಯ ನಡೆಸಬೇಕಾಗಿದೆ.