Wednesday, 11th December 2024

ದಕ್ಷರು ಕುಲಪತಿಯಾಗಲಿ

ಅಭಿಮತ

ಡಾ.ರಾಜಶೇಖರ ಹತಗುಂದಿ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, (ಕಲಬುರಗಿ) ದಶಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ೨೦೦೯ರಲ್ಲಿ ಸ್ಥಾಪಿತವಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಇಲ್ಲಿಯವರೆಗೆ ಮೂರು ಜನ ಕುಲಪತಿಗಳನ್ನು ಕಂಡಿದೆ.

ಈ ಮೂವರಲ್ಲಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಮಾತ್ರ ಪೂರ್ಣಾವಧಿ ( ವರ್ಷಗಳ ಕಾಲ) ಕುಲಪತಿಯಾಗಿ ಕಾರ್ಯ ನಿರ್ವಹಿಸಿ ದ್ದಾರೆ. ಉಳಿದಂತೆ ಎ.ಎಂ. ಪಠಾಣ್ ಮೂರು ವರ್ಷಗಳ ಕಾಲ, ಎಸ್. ಶ್ರೀನಿವಾಸ್ ಮೂರ್ತಿ ಒಂದು ವರ್ಷ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಎ.ಎಂ. ಪಠಾಣ್ ಕಾಲಾವಧಿಯಲ್ಲಿ ವಿಶ್ವವಿದ್ಯಾಲಯ ಭೌತಿಕವಾಗಿ ಅಭಿವೃದ್ಧಿ ಹೊಂದಿತೆ ವಿನಃ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಿಲ್ಲ. ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿದವು.

ಮೂಲ ಸೌಕರ್ಯಗಳನ್ನು ಒದಗಿಸಲಾಯಿತು. ಆದರೆ ಬೋಧಕ ಮತ್ತು ಬೋಧಕೇತರ ನೇಮಕಾತಿಯಲ್ಲಿ ಪಠಾಣ್ ಅವರು ತನ್ನ ಸಮುದಾಯದವರಿಗೆ ಮೊದಲ ಆದ್ಯತೆ ಕಲ್ಪಿಸಿದರು. ಅತಿ ಹೆಚ್ಚಿನ ಬೋಧಕೇತರ ಸಿಬ್ಬಂದಿ ಒಂದೇ ಸಮುದಾಯಕ್ಕೆ ಸೇರಿದವ ರಾಗಿದ್ದರಿಂದ ನಂತರ ಬಂದ ಕುಲಪತಿಗಳಿಗೆ ಆಡಳಿತದ ಮೇಲೆ ಹಿಡಿತ ಸಾಧಿಸುವುದೇ ಕಷ್ಟವಾಗಿದೆ. ಪಠಾಣ್ ಅವಧಿಯಲ್ಲಿ ನೇಮಕವಾದ ಬಹುತೇಕ ಬೋಧಕ ಸಿಬ್ಬಂದಿಗಳಲ್ಲಿಆಂಧ್ರಪ್ರದೇಶದವರೆ ಜಾಸ್ತಿ ಇzರೆ. ಪಠಾಣ್ ಅವರೊಂದಿಗೆ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹುಸಿ ಬುದ್ಧಿಜೀವಿ ಪ್ರೊ.ಚಂದ್ರಶೇಖರ್ ಇಡೀ ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣವನ್ನೇ ಹಾಳುಗೆಡವಿದರು.

ಪ್ರೊ.ಎಸ್. ಶ್ರೀನಿವಾಸ್ ಮೂರ್ತಿಯವರು ಕೇವಲ ಒಂದು ವರ್ಷದ ಅವಽಗೆ ಕುಲಪತಿಯಾಗಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಾಧಿಸಲಾಗಲಿಲ್ಲ. ದಕ್ಷ ಪ್ರಾಮಾಣಿಕ ವ್ಯಕ್ತಿಯಾಗಿದ್ದ ಪ್ರೊ. ಶ್ರೀನಿವಾಸ್ ಮೂರ್ತಿಯವರು ಸೀಮಿತ ಕಾಲಾವಽಯಲ್ಲಿ ವಿಶ್ವವಿದ್ಯಾಲಯದ ಘನತೆ ಗೌರವಗಳನ್ನು ಹೆಚ್ಚಿಸಿದರು. ೨೦೧೫ರಲ್ಲಿ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡ ಪ್ರೊ.ಎಚ್.ಎಂ.ಮಹೇಶ್ವರಯ್ಯ ಅವರು ಪ್ರಾಮಾಣಿಕರು ಎಂದು ಹೆಸರು ಮಾಡಿದರೆ ಹೊರತು ಕ್ರಿಯಾಶೀಲತೆ ಮೆರೆಯಲಿಲ್ಲ.

ಸಂಕೀರ್ಣ ವ್ಯಕ್ತಿತ್ವದ ಮಹೇಶ್ವರಯ್ಯ ಬೋಧಕ ಬೋಧಕೇತರ ಸಿಬ್ಬಂದಿಗಳೊಂದಿಗೆ ಗುzಡು ವುದರ ಸಮಯ ವ್ಯಯ ಮಾಡಿದರು. ಜಾಣತನದಿಂದ ಆಡಳಿತ ನಡೆಸಲಿಲ್ಲ. ಹೊಗಳಿಕೆ ಪ್ರಿಯರಾದ ಮಹೇಶ್ವರಯ್ಯ ಅವರನ್ನು ಕೆಲವರು ಹೊಗಳಿ ಹೊಗಳಿಯೇ ಹೊನ್ನ ಶೂಲಕ್ಕೇರಿಸಿದರು. ಅವರ ಅವಽಯಲ್ಲಿ ನಡೆದ ನೇಮಕಾತಿಯಲ್ಲಿ ಹಣದ ವ್ಯವಹಾರಕ್ಕೆ ಅವಕಾಶ ಇರಲಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಕನ್ನಡದ ಅಸಂಖ್ಯಾತ ಪ್ರತಿಭಾವಂತರನ್ನು ಹೊರಗಿಟ್ಟು ಹೊರಗಿನವರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದರು. ಮಹೇಶ್ವರಯ್ಯ ಅವರ ಪ್ರಾಮಾಣಿಕತೆ ಅತಿರೇಕದಿಂದ ಕೂಡಿತ್ತು. ಕೇಂದ್ರ ಸರಕಾರ ನೀಡಿದ ಅನುದಾನ ವನ್ನು ಶೈಕ್ಷಣಿಕ ಪ್ರಗತಿಗೆ, ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಬಳಸದೆ ಹಿಂದಿರುಗಿಸಿದರು. ಅವರ ವ್ಯಕ್ತಿತ್ವದ ಸಿನಿಕತನ ಮನೆ ಮಾಡಿದ್ದರಿಂದ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ವಿಶ್ವವಿದ್ಯಾಲಯವನ್ನು ಕಟ್ಟಲು ಆಗಲಿಲ್ಲ.

ಪ್ರೊ.ಎಚ್.ಎಂ. ಮಹೇಶ್ವರಯ್ಯ ಅವರು ೨೦೨೦ರ ನವೆಂಬರ್ ೧೩ರಂದು ಕುಲಪತಿ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಅವರ ಅಧಿಕಾರವಧಿ ಆರು ತಿಂಗಳ ಹಿಂದೆಯೇ ಮುಗಿದಿತ್ತು. ಹೊಸ ಕುಲಪತಿಯ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ನಿಯಮಾನುಸಾರ ಎಪ್ಪತ್ತು ವರ್ಷ ಪೊರೈಸುವವರೆಗೆ ಆ ಹುದ್ದೆಯಲ್ಲಿ ಅವರನ್ನು ಮುಂದುವರಿಸಲಾಗಿತ್ತು. ಈಗ ಹೊಸ ಕುಲಪತಿಯನ್ನು ನೇಮಕ ಮಾಡಲೇಬೇಕಾಗಿದೆ. ಹೊಸ ಕುಲಪತಿ ನೇಮಕಾತಿಗಾಗಿ ರಚಿಸಿದ ಶೋಧನಾ ಸಮಿತಿ ಐದು ಜನರ ಹೆಸರನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಂತ್ರಿಗಳು ಒಬ್ಬರ ಹೆಸರನ್ನು ಶಿಫಾರಸ್ಸು ಮಾಡಿ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿಕೊಡಬೇಕಿದೆ. ಕಡತ ಕೇಂದ್ರ ಮಂತ್ರಿಗಳ ಟೇಬಲ್ ಮೇಲಿದೆ. ಶೋಧನಾ ಸಮಿತಿ ಶಿಫಾರಸ್ಸು ಮಾಡಿದ ಪಟ್ಟಿಯಲ್ಲಿ ಕರ್ನಾಟಕದ ಮೂರು ಜನರ ಹೆಸರಿವೆ.

ಆಂಧ್ರಪ್ರದೇಶದ ಇಬ್ಬರು ಈ ಪಟ್ಟಿಯಲ್ಲಿದ್ದಾರೆ. ಕರ್ನಾಟಕದ ಮೂವರಲ್ಲಿ ಮೈಸೂರು ವಿ.ವಿ.ಯ ಪ್ರೊ.ನಿರಂಜನ ವಾನಳ್ಳಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ.ಬಸವರಾಜು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಪುಷ್ಪಾ. ಎಂ. ಸವದತ್ತಿಯವರ ಹೆಸರುಗಳಿವೆ. ಇನ್ನು ಆಂಧ್ರಪ್ರದೇಶದ ಪ್ರೊ.ಮೀರಾ ಹರಿಹರನ್, ಪ್ರೊ.ಸತ್ಯನಾರಾಯಣ ಭಟ್ಟ ಕುಲಪತಿ ಹುದ್ದೆಯ ರೇಸ್ ನಲ್ಲಿದ್ದಾರೆ.

ಪ್ರಗತಿಯ ಹಂತದಲ್ಲಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಸದ್ಯ ಪ್ರಾಮಾಣಿಕ ಮತ್ತು ಕ್ರಿಯಾಶೀಲ ಕುಲಪತಿಯ ಅಗತ್ಯವಿದೆ. ವಿಶ್ವವಿದ್ಯಾಲಯವನ್ನು ಅಪ್ಟಟ ಜ್ಞಾನದ ಕೇಂದ್ರವನ್ನಾಗಿಸುವ ಕನಸುಗಾರ ಬರಬೇಕಿದೆ. ಉತ್ತಮ ಹಾಗೂ ಕನ್ನಡಿ ಗರನ್ನು ನೇಮಕ ಮಾಡುವ ಅಗತ್ಯವಿದೆ.