ಅಭಿಮತ
ಡಾ.ಆನಂದ ಕುಮಾರ್
ಜನಪದರ ಪುರಾಣಗಳು ಬರೀ ಕಟ್ಟು ಕಥೆ ಅಲ್ಲ. ಒಂದರ್ಥದಲ್ಲಿ ಅವು ಬಹುಸಂಖ್ಯಾತರ ಬದುಕನ್ನು ತೆರೆದಿಟ್ಟಿರುವ ಪುರಾತನ ಐತಿಹ್ಯಗಳಾಗಿವೆ. ಪುರಾಣಗಳನ್ನು ಅತ್ಯಂತ ಕ್ರಿಯಾಶೀಲವಾದ ಸಾಂಸ್ಕೃತಿಕ ಶಕ್ತಿಗಳೆಂದು ವಿದ್ವಾಂಸ ಮ್ಯಾಲಿನೋವಸ್ಕಿ ಅಭಿಪ್ರಾಯಿಸಿರುತ್ತಾರೆ.
ಪ್ರಾಚೀನ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಹನುಮಂತನನ್ನು ಎದುರುಗೊಳ್ಳಲು ನಾಗರಿಕರು ಮುಂದಾಗಿದ್ದಾರೆ. ವಾಲ್ಮೀಕಿ ರಾಮಾಯಣದ ಕಿಷ್ಕಿಂಧ ಕಾಂಡದ ಶಕ್ತಿಶಾಲಿ ಚಿರಂಜೀವಿ ಹನುಮಂತ ಬಲ ಮತ್ತು ಬುದ್ಧಿಯಲ್ಲಿ ಅಪ್ರತಿಮನೇ ಸರಿ. ಜನರೆಲ್ಲರೂ ತಮ್ಮ ಯಶಸ್ಸು, ಧೈರ್ಯ ಮತ್ತು ಆರೋಗ್ಯಕ್ಕಾಗಿ ಹನುಮಂತನನ್ನು ಪ್ರಾರ್ಥಿಸುತ್ತಾರೆ.
ಹನುಮಂತ ನಿಷ್ಠೆ ಹಾಗೂ ಭಕ್ತಿ ಮತ್ತು ಶ್ರದ್ಧೆಯ ಸಂಕೇತವಾಗಿರುತ್ತಾನೆ. ಇತ್ತೀಚಿನ ಕೆಲವರು ಈ ನಂಬಿಕೆಗಳ ಬಗ್ಗೆ ಒಂದಷ್ಟು ಗೊಂದಲ ಮೂಡಿಸುತ್ತಿದ್ದಾರೆ. ಸಾಮಾಜೋಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಯುಳ್ಳ ಸಿಂದ್ ಕಥೆ ಅಥವಾ ಜಾಂಬವ ಪುರಾಣ ಹಾಗೂ ಮಾದಿಗ ಆಟ ಅಥವಾ ಎಲ್ಲಮ್ಮಕಥೆ ಯ ಭಾಗವಾಗಿರುವ ಮಾದಿಗರನ್ನು ಹನುಮನ ನೆಂಟು ಮಾಡಿ ಅಣಕಿಸಲಾಗುತ್ತಿದೆ.
ಅಸಾಧಾರಣ ಬಾಲಕನ ಶೌರ್ಯದ ಭೀತಿಗೆ ಕಂಗೆಟ್ಟು ಶಾಪಕೊಟ್ಟಿರುವ ಪ್ರಸಂಗ ಪುರಾಣದಲ್ಲಿದೆ.
ಬಾಲ್ಯದ ಹನುಮಂತ ಸೂರ್ಯನನ್ನು ನುಂಗಲು ಮಂದಾಗುವನು. ಬಾಲ್ಯದ ಈ ಸಾಹಸ ಹರೆಯದಲ್ಲಿ ಮತ್ತಷ್ಟು
ಅಪಾಯಕಾರಿಯಾಗಬಹುದು. ಸೂರ್ಯನಿಲ್ಲದೇ ಭೂಮಿಯಲ್ಲಿ ಕತ್ತಲೆ ಅವರಿಸಬಹುದು. ಹನುಮನಿಗೆ, ಈ ನಿನ್ನ ಶೌರ್ಯ ನಿನಗೆ ತಿಳಿಯದಿರಲೆಂದು ಶಪಿಸುವರು. ನನ್ನ ಎಳೇ ಕಂದ ಏನು ಅರಿಯದವ, ಬಾಲಕ ಅನ್ನುವ ಕ್ಷಮೆ ಇಲ್ಲದೆ ಹೀಗೆ ಶಪಿಸ ಬಹುದೇ? ತಾಯಿ ಅಂಜನಾ ವ್ಯಾಕುಲಳಾಗಿ ಪರಿಹಾರ ಬಯಸುವಳು.
ದೈವಸೇವೆ ಫಲದಿಂದ ಶಾಪ ವಿಮೋಚನೆಗೊಳ್ಳುವುದೆಂದು ತಾಯಿ ಅಂಜನಾಳಿಗೆ ತಿಳಿಸಿದ ವೃತ್ತಾಂತದ ಬಗ್ಗೆ ಜಾಂಬವಂತ ಪ್ರೌಢ ಹನುಮಂತನಿಗೆ ಸಮಯೋಚಿತವಾದ ಘಳಿಗೆಯಲ್ಲಿ ನೆನಪಿಸುತ್ತಾರೆ. ಸ್ವಯಂ ದೈವಾಂಶನಾದ ರಾಮ ಹಾಗೂ ವಿಭೀಷಣರ ಸಹಿತ ಅನೇಕರು ಹನುಮಂತನಿಗೆ ತಾಯಿ ಅಂಜನಾಳ ಈ ಪ್ರಸಂಗ ತಿಳಿಸಿ ಶೌರ್ಯತ್ವ ಮರಳಿಸಲಿಲ್ಲ. ಸ್ವಯಂ ಜಾಂಬವಂತನಿಂದ ಈ ಕೈಂಕರ್ಯವಾಯಿತು. ಅಂಜನಾ ಮತ್ತು ಜಾಂಬವಂತರ ಸಂಬಂಧಗಳಿಂದಿಷ್ಟೇ ಪೂರ್ವದ ಮಾಹಿತಿ ತಿಳಿಯಲು ಸಾಧ್ಯ.
ಹನುಮ ಹಾಗೂ ಜಾಂಬವರ ನೆಂಟತನವನ್ನು, ಶಮಂತಕಮಣಿ ಪ್ರಸಂಗದ ಮುನ್ನ ಸುರದ್ರೂಪಿಯಾದ ಜಾಂಬವಂತಿಗೆ ವೈವಾಹಿಕ ಸಂಬಂಧ ಹುಡುಕಾಟದಲ್ಲಿಯೂ ಪ್ರಸ್ತಾಪಿಸಲಾಗಿದೆ. ಅಪ್ರತಿಮ ಶೌರ್ಯವಂತಿಕೆ ಜಾಂಬವರಲ್ಲಿ ಸಹಜವಾದದ್ದು. ಅದರ ಮುಂದುವರಿಕೆ ಪುರಾಣದಿಂದ ಪ್ರಾಚೀನ ಇತಿಹಾಸಕಾಲದಲ್ಲೂ ಕಂಡುಕೊಳ್ಳಬಹುದು. ಶಸಗಳಿಲ್ಲದೆ ಹೋರಾಡುವ ಕಾಲದಲ್ಲಿ ಹನುಮಂತನನ್ನು ಸದಾ ದೈವೀಭಾವವಾಗಿ ಸ್ಮರಣೆ ಮಾಡಲಾಗುತಿತ್ತು. ಶೌರ್ಯವಂತರ ಸ್ಥಳವಾದ ಗರಡಿಮನೆ ಗಳಲ್ಲಿ ಹನುಮ ಬ್ರಹ್ಮಚಾರಿಗಳಿಗೆ ಅಖಂಡ ಬ್ರಹ್ಮಚಾರಿಯಾಗಿದ್ದನು.
ಅರ್ಥಾತ್ ಶೌರ್ಯದ ಪ್ರತೀಕವಾಗಿದ್ದನು. ಹಿಂದಿನ ಗರಡಿಮನೆಯ ಮಾದಿಗರ ಪೈಲ್ವಾನ್‌ಗಳು ಜಾತಿ ಮೀರಿ ಮನ್ನಣೆ ಪಡೆದಿದ್ದರು. ಶ್ರೀರಾಮ ಮತ್ತು ಸೀತಾಮಾತೆಯರನ್ನು ತನ್ನ ಎಡ ಬಲ ಹೆಗಲ ಮೇಲೆ ಕೂಡಿಸಿಕೊಂಡು ಅವರ ಸಂಕಷ್ಟ ದೂರಮಾಡಿ ದೈವಸೇವೆಯಿಂದ ಶಾಪ ವಿಮೋಚನೆ ಮಾಡಿಕೊಂಡ ಹನುಮಂತ ಮತ್ತೆ ಅವನ ವಿನಯ ಶೌರ್ಯದ ಪ್ರತಿರೂಪ ವಿನ ಗೊಂದಲಿಗರು ತಿಳಿಸುವಂತೆ ದಾಸ್ಯದ ಪ್ರತೀಕ ಅಲ್ಲ.
ಇತಿಹಾಸವನ್ನು ತಿರುಚಿ ಹನುಮಂತನನ್ನು ಅವಮಾನಿಸುವುದರಿಂದ ಆದಿಜಾಂಬವ ಸಂಕುಲವನ್ನು ಅವಮಾನಿಸಿದಂತಾಗುತ್ತದೆ ಎಂಬ ಅರಿವಿರಬೇಕು.