ಅಭಿಮತ
ಸಿದ್ದು ಯಾಪಲಪರವಿ
ಈಗ ಜಗತ್ತು ಅಂಗೈಯಲ್ಲಿ ಇದೆ. ಹಾಗಂತ ಇದು ಪೂರ್ಣ ಪ್ರಮಾಣದ ಒಳ್ಳೆಯ ಬೆಳವಣಿಗೆ ಅಲ್ಲ. ಸೋಷಿಯಲ್ ಮೀಡಿಯಾ ಬಂದ ಮೇಲೆ ಜನ ಪುಸ್ತಕ ಓದುವುದನ್ನು ಕಡಿಮೆಗೊಳಿಸಿದ್ದಾರೆ.
ಯುವಕರಂತೂ ಅಕ್ಷರ ದ್ವೇಷಿಗಳ ಹಾಗೆ ವರ್ತಿಸುತ್ತಾರೆ. ಇಂತಹ ಸಾಧನಗಳು ಬೆಂಕಿ ಇದ್ದ ಹಾಗೆ ನೋಡಿ ಬಳಸಬೇಕು. ಮೈಮನಗಳು ಸುಟ್ಟು ಹೋಗದಂತೆ ಎಚ್ಚರ ವಹಿಸಬೇಕು. ಇದೊಂದು ಮಾಯಾಲೋಕಇಲ್ಲಿ ಎಲ್ಲವೂ ಸುಂದರವಾಗಿ ಕಾಣುತ್ತದೆ. ಇಲ್ಲಿ ಇರುವ ಫೋಟೋಗಳು ವ್ಯಕ್ತಿಯ ನಿಜವಾದ ಮುಖ ಮರೆಮಾಚಿ ಕೇವಲ ಮುಖವಾಡ ತೋರಿಸುತ್ತವೆ. ಒದಗಿಸುವ ಮಾಹಿತಿಯೂ ಅಷ್ಟಕ್ಕಷ್ಟೇ, ಎಲ್ಲವೂ ಅರ್ಧ ಸತ್ಯ. ಜನರನ್ನು ಎಲ್ಲಾ ರೀತಿಯಿಂದ ಯಾಮಾರಿಸಿ ಕೆಲವರು ಬಹಳ ದೊಡ್ಡ ಸೆಲೆಬ್ರಿಟಿಗಳಾಗಿದ್ದಾರೆ.
ಕೆಲವರು ಎಷ್ಟೊಂದು ದೊಡ್ಡವರಾಗಿzರೆಂದರೆ ತುಂಬಾ ಹೈಟೆಕ್ ಸುಳ್ಳು ಹೇಳುವ ಮಟ್ಟದ ಮಹಾ ದೊಡ್ಡವರಾಗಿzರೆ. ಅವರು ಹೇಳುವ ಅತಿ ರಂಜನೀಯ ಕತೆಗಳು ಅದಕ್ಕೆ ಪೂರಕವಾಗಿ ಹೇಳುವ ವಿಷಯಗಳನ್ನು ಜನ ಮಹಾ ಸುಳ್ಳು ಎಂದು ಗೊತ್ತಿದ್ದರೂ ತಮಾಷೆಗಾಗಿ ನೋಡಿ ಪುಂಗಿ ದಾಸರನ್ನು ವಿನಾಕಾರಣ ದೊಡ್ಡವರನ್ನಾಗಿ ಮಾಡುತ್ತಾರೆ. ನೆಗೆಟಿವ್ ಪಬ್ಲಿಸಿಟಿ ಕೂಡ ಕೆಲವರಿಗೆ ವರದಾನವಾಗಲು ಈ ಸೋಷಿಯಲ್ ಮೀಡಿಯ ಕಾರಣವಾಗಿದೆ. ಹಾಗೆ ಹುಟ್ಟಿಕೊಳ್ಳುವ ಅಭಿಮಾನಿಗಳು, ಗೆಳೆಯರು, ಕೆಟ್ಟ ಭಾಷೆಯ ಜಗಳಗಳು, ಒಂದೇ ಎರಡೇ! ಹಾಗಂತ ಎಲ್ಲವೂ ನಕಾರಾತ್ಮಕ ಅಲ್ಲ, ಒಳ್ಳೆಯ ಗೆಳೆಯರು, ಅವರು ತೋಡಿಕೊಳ್ಳುವ ಒಳ್ಳೆಯ ವಿಚಾರಗಳು ಸಿಗುತ್ತವೆ.
ಹೆಣ್ಣುಮಕ್ಕಳು ಹೆಚ್ಚು ಹುಷಾರಾಗಿರುವ ವೇದಿಕೆ ಇದು. ಕೆಲವರು ಅಮಾಯಕರಂತೆ ಏನೇನೊ ಹಾಕಿ ಹುಚ್ಚು ಮನಸುಗಳಿಗೆ ಹೆಂಡ ಕುಡಿಸಿ
ತೊಂದರೆಗೆ ಒಳಗಾಗುತ್ತಾರೆ. ಸೂಕ್ಷ್ಮ ಮನಸಿನ ಜಾಣರು ತಾಳ್ಮೆ ಮತ್ತು ಲೆಕ್ಕಾಚಾರದಿಂದ ಬಚಾವಾಗುತ್ತಾರೆ. ಅನೇಕ ವಾಹಿನಿಗಳು ಈಗ ಸೋಷಿಯಲ್ ಮೀಡಿಯಾ ಮೂಲಕ ಜನರನ್ನು ಬೇಗ ತಲುಪುವ ಧಾವಂತದಲ್ಲಿವೆ. ಮೊಬೈಲ್ ಪ್ರಾಬಲ್ಯ ಹೆಚ್ಚಾದ ಮೇಲೆ ಜನ ಟಿವಿ ಮುಂದೆ ಕುಳಿತು ಕೊಳ್ಳುವುದನ್ನು ಮಿತಗೊಳಿಸಿರುವುದು ಟಿ.ಆರ್.ಪಿ. ನೆಲ ಕಚ್ಚಿದೆ.
ಎಷ್ಟು ಅಂತ ನೋಡಿದ್ದನ್ನೇ ನೋಡಲಾಗುತ್ತದೆ. ಅಮೆರಿಕಾದ ಅಧ್ಯಕ್ಷನಿಂದ ಹಿಡಿದು ನಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರು ಕೂಡ ಈಗ ಈ ಫೇಸ್‌ಬುಕ್, ವಾಟ್ಸಾಪ್ ಮೂಲಕ ತಮ್ಮ ಅಭಿಮಾನಿಗಳನ್ನು ತಲುಪುತ್ತಾರೆ. ಕರೋನ ಸಂದರ್ಭದಲ್ಲಿ ಪುಟ್ಟ ಮಕ್ಕಳು ಈ ಮೊಬೈಲ್ ಮಾಯಾವಿಗೆ ಶರಣಾಗಬೇಕಾಯಿತು. ಇದರ ಅಪಾಯವಂತೂ ಹೇಳಲಾಗದು. ಕೊಳಕು ಸೈಟುಗಳಿಗೆ ಮಕ್ಕಳು ಪ್ರವೇಶಿಸಿದ್ದನ್ನು ಕಂಡು ಕಾಣದಂತೆ ಇರಬೇಕಾಯಿತು. ಮುಖಾಮುಖಿಯಾಗಿ ವ್ಯಕ್ತಿಗಳು ಪರಿಚಯ ಆಗುವವರೆಗೆ ಫೇಸ್‌ಬುಕ್ ಮೂಲಕ ಸ್ನೇಹ ಮಾಡಬಾರದು ಎನ್ನುವಷ್ಟು ಮುಖಹೀನ ಸ್ಥಿತಿಯನ್ನು ತಲುಪಿಬಿಟ್ಟಿದೆ.
ಬೇಗ ಮೇಲೇರಿದವರು ಅಷ್ಟೇ ಬೇಗ ಕೆಳಗಿಳಿಯುತ್ತಾರೆ. ಏಳಬೇಕಾದರೆ ತುಂಬಾ ಆಲೋಚನೆ ಮಾಡಿ ಏರೋಣ. ಅಂದಾಗ ಮಾತ್ರ ಕೆಳಗೆ ಬೀಳುವ ಅಪಾಯ ಕಡಿಮೆ. ಸಂಗಾತಿಯೊಬ್ಬರು ನನಗೆ ‘ನೀವು ಲೈಕ್, ಕಮೆಂಟ್ ಡುವಾಗ ಕೊಂಚ ಹುಷಾರಾಗಿ ಇರಿ’ ಎಂದಾಗ ನಕ್ಕು ಸುಮ್ಮನಾದೆ. ಆದರೆ ಅಲ್ಲಿ ಇರಬಹುದಾದ ಒಳ ರ್ಮಗಳನ್ನೂ ಅರ್ಥ ಮಾಡಿಕೊಂಡೆ. ಮುಖಗಳು, ಮುಖವಾಡಗಳು, ಅದರ ಒಳಗೆ ಇರುವ ಕೊಳಕು ಭಾವನೆಗಳಿಗೆ ನಾವು ಹೊಣೆಗಾರರು. ಅಲ್ಲವಾದರೂ ಅದರ ಭಾರ ಹೊತ್ತು ಒದ್ದಾಡಬೇಕಾಗುತ್ತದೆ; ಕೆಲವೊಮ್ಮೆ ದಂಡ ತೆರಬೇಕಾಗುತ್ತದೆ.
‘ಬೆಂಕಿಯ ಜತೆಗೆ ಸರಸ ಸಲ್ಲದು’ ಎಂದು ಹೇಳಿಕೊಳ್ಳುತ್ತಲೇ ಬೆಂಕಿ ಜತೆಗೆ ಬದುಕುವ ಅನಿವಾರ್ಯತೆ ಇದೆ. ಆರು ವರ್ಷಗಳ ಹಾದಿಯಲ್ಲಿ
ಅನೇಕರು ಭೇಟಿ ಆಗಿದ್ದಾರೆ, ಪ್ರೀತಿ ಕೊಟ್ಟಿದ್ದಾರೆ, ಪಡೆದಿದ್ದಾರೆ ಮತ್ತೆ ಕೆಲವರು ನಿಜ ಮುಖ ಅನಾವರಣವಾದ ಮೇಲೆ ಮಾಯವಾಗಿದ್ದಾರೆ.