Saturday, 14th December 2024

ರುಚಿಕರ ಆಹಾರ ಸೇವನೆಗೆ ಜಾಗೃತಿ ಅವಶ್ಯ

ಅಭಿಮತ

ಶ್ವೇತಾ ಮುಂಡ್ರುಪ್ಪಾಡಿ

ಎರಡು ನಿಮಿಷದಲ್ಲಿ ಮ್ಯಾಗಿ ರೆಡಿ ಎಂಬ ಜಾಹಿರಾತು, ಟಿವಿ ಆನ್ ಮಾಡಿದ ಕೂಡಲೇ ಕಾಣಸಿಗುತ್ತದೆ.

ಕೇವಲ ೧೦ ರುಪಾಯಿ, ಮಾಡಲು ಸುಲಭ, ಸಮಯ ಉಳಿತಾಯ, ರುಚಿಯೂ ಎನ್ನುವ ಕಾರಣಕ್ಕೆ ಮ್ಯಾಗಿ ಎಲ್ಲರಿಗೂ ಆಪ್ತ. ಈಗ ಮ್ಯಾಗಿ ಬೇರೆಯದ್ದೇ ಕಾರಣಕ್ಕೆ ಸುದ್ದಿಯಾಗಿದೆ. ಹಿಂದೊಮ್ಮೆ ಬಹುದೊಡ್ಡ ಆರೋಪ ಕೇಳಿ ಬಂದಿತ್ತು. ಮ್ಯಾಗಿಯಲ್ಲಿ ಸೀಸ
ಮತ್ತು ಮೋನೊಸೋಡಿಯಂ ಗ್ಲುಟಮೇಟ್ ಅಂಶ ಇದೆ ಎನ್ನುವ ಸಂಗತಿ ವರದಿಯಾಗಿತ್ತು.

ನಮ್ಮ ದೇಶದ ಕೆಲವು ರಾಜ್ಯಗಳಲ್ಲಿ ಇದನ್ನು ನಿಷೇಧಿಸಲಾಗಿತ್ತು. ಉತ್ತರ ಪ್ರದೇಶದಲ್ಲಿ ಟನ್ ಗಟ್ಟಲೆ ಮ್ಯಾಗಿಯನ್ನು ಸುಟ್ಟು ಹಾಕಲಾಗಿತ್ತು. ಆದರೆ ಮ್ಯಾಗಿ ಕೆಲ ಸಮಯದ ನಂತರ ಮತ್ತೆ ಮಾರುಕಟ್ಟೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಅದೇ
ಮ್ಯಾಗಿಯ ಗುಟ್ಟನ್ನು ಈಗ ಕಂಪನಿಯೇ ರದ್ದು ಮಾಡಿದೆ. ನೆಸ್ಲೆ ಕಂಪನಿಯ ಇಂಟರ್‌ನ್ಯಾಷನಲ್ ಡಾಕ್ಯುಮೆಂಟ್‌ನಲ್ಲಿ ಶೇ.೬೦ ರಷ್ಟು ಆಹಾರ ಉತ್ಪನ್ನಗಳು ಆರೋಗ್ಯದ ದೃಷ್ಟಿಯಿಂದ ಸೇವನೆಗೆ ಅರ್ಹವಲ್ಲವೆಂದು ಬಹಿರಂಗವಾಗಿ ಹೇಳಿಕೆ ನೀಡಿದೆ. ಅವರೇ ಹೇಳುವಂತೆ ಏನೇ ಆದರೂ ಉತ್ತಮ ಗುಣಮಟ್ಟದ ಆಹಾರ ತಯಾರಿಸಲು ಸಾಧ್ಯವಿಲ್ಲ ಎಂದಿದೆ.

ಒಬ್ಬ ವ್ಯಕ್ತಿ ದೈಹಿಕ, ಮಾನಸಿಕ, ಬೌದ್ಧಿಕ ಸೇರಿದಂತೆ ಸರ್ವತೋಮುಖ ಬೆಳವಣಿಗೆಗೆ ಸುರಕ್ಷಿತ ಆಹಾರ ಅತಿ ಅಗತ್ಯ. ಟುನ್, ಪ್ರೋಟೀನ್, ಲವಣಾಂಶ ಸೇರಿದಂತೆ ಸಮತೋಲಿತ ಆಹಾರ ಒಬ್ಬ ವ್ಯಕ್ತಿಗೆ ಅತ್ಯಗತ್ಯ. ಜಾಗತೀಕರಣ ಕಾಲಘಟ್ಟದಲ್ಲಿ ಆಹಾರದ ಸರಪಳಿಯಲ್ಲಿ ವಿಪರೀತ ವ್ಯತ್ಯಾಸ ಉಂಟಾಗಿದೆ. ಪೋಷಕಾಂಶಯುಕ್ತ ಆಹಾರದ ಬದಲು ಫಾಸ್ಟ್ ಫುಡ್‌ನ ನೆಪದಲ್ಲಿ ನಾಲಿಗೆಗೆ
ರುಚಿ ಕೊಡುವ ಆಹಾರಗಳು ಜನರಿಗೆ ಹೆಚ್ಚು ಪ್ರಿಯವಾಗಿವೆ. ಇದಕ್ಕೆ ಮುಖ್ಯ ಕಾರಣ ಆಹಾರಗಳಲ್ಲಿ ಕೃತಕ ಬಣ್ಣ, ಕೃತಕ ಸಕ್ಕರೆಯಂಥ ರಾಸಾಯನಿಕಗಳಿರುತ್ತವೆ.

ಇವೆಲ್ಲವೂ ಬಣ್ಣ, ವಾಸನೆ ಮತ್ತು ರುಚಿಗೆ ಸಂಬಂಧಿಸಿದ್ದಾಗಿದೆ. ನೆಸ್ಲೆಯಂಥ ದೊಡ್ಡ ಕಂಪನಿ ಸತ್ಯ ಒಪ್ಪಿಕೊಂಡಿದೆ. ಆದರೆ ಆಹಾರದ ಗುಣಮಟ್ಟದ ಪರೀಕ್ಷೆಗೆ ಸರಕಾರದ ಮಟ್ಟದಲ್ಲಿ ಪ್ರತ್ಯೇಕ ಇಲಾಖೆಗಳಿವೆ. ಯಾವುದೇ ಉತ್ಪನ್ನವನ್ನು ಮಾರುಕಟ್ಟೆ ಯಲ್ಲಿ ಮಾರಾಟ ಮಾಡಬೇಕಾದರೆ, ಅದಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಅಡಿಯಲ್ಲಿ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯ. ಒಂದು ಆಹಾರವನ್ನು ಮಾರಾಟ ಮಾಡಬೇಕಾದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರೀಕ್ಷಾ ಪ್ರಾಽಕಾರ ಆಹಾರದ ಸುರಕ್ಷತೆ ಮತ್ತು ಗುಣಮಟ್ಟ ಪರೀಕ್ಷಿಸಿದ ನಂತರ ಪರವಾನಗಿ ನೀಡುತ್ತದೆ.

ಹಾಗಾದರೆ ನೆಸ್ಲೆ ಕಂಪನಿಯ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡುವ ಮುನ್ನ, ಎಫ್ಎಸ್‌ಎಸ್‌ಎಐ ಪ್ರಾಧಿಕಾರ ಗುಣಮಟ್ಟ ಪರೀಕ್ಷೆ ಮಾಡಿಲ್ಲವೇ? ಮ್ಯಾಗಿ ಸೇರಿದಂತೆ ಸಂಸ್ಕರಿತ ಆಹಾರದಲ್ಲಿ ರಾಸಾಯನಿಕ ಪದಾರ್ಥಗಳನ್ನು ಹಾಕಲಾಗುತ್ತದೆ. ಇದರ ಮಾಹಿತಿ ಇದ್ದರೂ ಎಫ್ಎಸ್‌ಎಸ್‌ಎ ಐ ಏಕೆ ನಿರ್ಲಕ್ಷ್ಯವಹಿಸಿತು? ಹಾನಿಕಾರಕ ರಾಸಾಯನಿಕ ಬಳಕೆ ಆಗುತ್ತಿದ್ದಲ್ಲಿ ಅದು ಎಫ್ಎಸ್‌ಎಸ್‌ಎಐ ಗಮನಕ್ಕೆ ಬಂದಿಲ್ಲವೇ? ಅಥವಾ ಎ-ಎಸ್‌ಎಸ್‌ಎಐ ತನ್ನ ಮಾನದಂಡ ಬದಲಿಸಬೇಕಾದ ಅಗತ್ಯ ಇದೆಯೇ? ಎಂಬ ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.