ವಾಷಿಂಗ್ಟನ್:
ಮಹಾಮಾರಿ ಕರೋನಾ ವೈರಸ್ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ.
ಮೃತರ ಸಂಖ್ಯೆ 70 ಸಾವಿರ ಸಮೀಪದಲ್ಲಿದ್ದು. ಸೋಂಕಿತರ ಸಂಖ್ಯೆ 12 ಲಕ್ಷ ತಲುಪುತ್ತಿದೆ. ಸೋಮವಾರ ಒಂದೇ ದಿನ ಅಮೆರಿಕದ
ವಿವಿಧೆಡೆ 1.015 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ ಒಂದು ತಿಂಗಳಿನಿಂದ ಕರೋನಾ ವೈರಸ್ ಆರ್ಭಟಕ್ಕೆ ಹೋಲಿಸಿದಲ್ಲಿ ಕನಿಷ್ಟ ಸೋಂಕು ಪ್ರಕರಣ ಎಂದು ಪರಿಗಣಿಸಬಹುದಾಗಿದೆ.
ಕರೋನಾ ವೈರಸ್ ದಾಳಿಯಿಂದ ಅಮೆರಿಕದಲ್ಲಿ ಈವರೆಗೆ ಮೃತರ ಸಂಖ್ಯೆ 69 ಸಾವಿರ ದಾಟಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ
ಇನ್ನೊೊಂದು ನಾಲ್ಕೈದು ದಿನಗಳಲ್ಲಿಅಮೆರಿಕದಲ್ಲಿ ಮರಣ ಪ್ರಮಾಣ ಒಂದು ಲಕ್ಷ ತಲುಪುವ ಆತಂಕವಿದೆ.
ಅಮೆರಿಕದಲ್ಲಿ ಕರೋನಾ ವೈರಸ್‌ನಿಂದಾಗಿ 1 ಲಕ್ಷದಿಂದ 2.5 ಲಕ್ಷ ಮಂದಿ ಬಲಿಯಾಗುವ ಸಾಧ್ಯತೆ ಇದೆ ಎಂದು ಅಧ್ಯಕ್ಷ ರೋನಾಲ್‌ಡ್ ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಸುಮಾರು ಒಂದು ಲಕ್ಷ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.