Sunday, 15th December 2024

ಸಂಪೂರ್ಣ ರಾಜ್ಯ ಲಾಕ್‌ಡೌನ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಕರೋನಾದಿಂದ ಇಡೀ ರಾಜ್ಯವನ್ನು ತಪ್ಪಿಿಸಲು ಸಂಪೂರ್ಣ ರಾಜ್ಯವನ್ನು ಲಾಕ್‌ಡೌನ್ ಮಾಡುವುದಕ್ಕೆೆ ಮೀನಾಮೇಷ ಎಣಿಸಿದ್ದ ಸರಕಾರ, ಕೊನೆಗೂ ಲಾಕ್‌ಡೌನ್ ಮಾಡಿದೆ.
ದಿನದಿಂದ ದಿನಕ್ಕೆೆ ಕರೋನಾ ಸೋಂಕು ಹೆಚ್ಚಾಾಗುತ್ತಿಿದ್ದಂತೆ ಕೇವಲ ಒಂಬತ್ತು ಜಿಲ್ಲೆೆಗಳ ಬದಲಿಗೆ ಇಡೀ ರಾಜ್ಯವನ್ನು ಲಾಕ್‌ಡೌನ್ ಮಾಡಬೇಕು ಎನ್ನುವ ಆಗ್ರಹ ರಾಜ್ಯದೆಲ್ಲೆೆಡೆ ಕೇಳಿಬಂದಿತ್ತು. ಆದರೆ ಇದರಿಂದ ಆಗಬಹುದಾದ ಸಮಸ್ಯೆೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರಕಾರ ಇದಕ್ಕೆೆ ಅವಕಾಶ ನೀಡಿರಲಿಲ್ಲ. ಆದರೆ ಇದೀಗ ಲಾಕ್‌ಡೌನ್ ಆಗದಿದ್ದರೆ ಭಾರಿ ಸಮಸ್ಯೆೆ ಎದುರಾಗುವುದು ಖಚಿತವಾಗಿರುವುದರಿಂದ ಲಾಕ್‌ಡೌನ್ ಮಾಡುವುದಕ್ಕೆೆ ಅದೇಶ ಹೊರಡಿಸಿದೆ.
ಸೋಮವಾರ ಬೆಳಗ್ಗೆೆಯಿಂದ ಮುಖ್ಯಮಂತ್ರಿಿ ಯಡಿಯೂರಪ್ಪ ಅವರು ಸಾಲು ಸಾಲು ಸಭೆ ನಡೆಸಿದ್ದರು. ಆರೋಗ್ಯ ಕ್ಷೇತ್ರದ ತಜ್ಞರು, ಕೆಲ ಸಚಿವರು ರಾಜ್ಯವನ್ನು ಲಾಕ್‌ಡೌನ್ ಮಾಡುವುದು ಸೂಕ್ತ ಎನ್ನುವ ಮಾತನ್ನು ಹೇಳಿದ್ದರು. ಆದರೆ ಸಂಪೂರ್ಣ ಲಾಕ್‌ಡೌನ್ ಮಾಡುವುದಕ್ಕೆೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅಂತಿಮವಾಗಿ ಇದೀಗ ಮಾ.31ರವರೆಗೆ ಲಾಕ್‌ಡೌನ್ ಮಾಡಲು ಸರಕಾರ ಅದೇಶ ಹೊರಡಿಸಿದೆ.
ಜನರ ಪ್ರತಿಕ್ರಿಿಯಿಯೇ ಲಾಕ್‌ಡೌನ್‌ಗೆ ಕಾರಣ
ಭಾನುವಾರ 9 ಜಿಲ್ಲೆಗಳಲ್ಲಿ ಮಾತ್ರ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿತ್ತು. ಆದರೆ, ಈ ಬಗ್ಗೆೆ ಸಾರ್ವಜನಿಕರಿಂದ ಸರಿಯಾದ ಪ್ರತಿಕ್ರಿಿಯೆ ಹಾಗೂ ಎಚ್ಚೆೆತ್ತುಕೊಳ್ಳದ ಕಾರಣ ರಾಜ್ಯಾಾದ್ಯಂತ ವಿಸ್ತರಣೆ ಮಾಡಲು ಸರಕಾರ ನಿರ್ಧರಿಸಿದೆ. ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ತುರ್ತು ಸಭೆ ಸೇರಿ ರಾಜ್ಯಾಾದ್ಯಂತ ಲಾಕ್‌ಡೌನ್ ಮಾಡುವ ಸಂಬಂಧ ಸಂಪುಟದ ಸಹೋದ್ಯೋೋಗಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.
ಆನಾಹುತ ತಪ್ಪಿಿಸಲು ಈ ಕ್ರಮ
ಇಡೀ ರಾಜ್ಯವನ್ನು ವಾರದ ಕಾಲ ಬಂದ್ ಮಾಡುವುದರಿಂದ ಸಾಮಾಜಿಕ, ಆರ್ಥಿಕವಾಗಿ ಕರ್ನಾಟಕಕ್ಕೆೆ ಭಾರಿ ಹೊಡೆತ ಬೀಳುವುದು ಖಚಿತ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇಂದಿನ ಸಮಸ್ಯೆೆ ಅಥವಾ ಆರ್ಥಿಕ ಹಿಂಜರಿತಕ್ಕೆೆ ಬೆದರಿ ಲಾಕ್‌ಡೌನ್ ಮಾಡುವುದನ್ನು ಕೈಬಿಟ್ಟರೆ ಕರೋನಾ ಇಡೀ ರಾಜ್ಯಕ್ಕೆೆ ಹಬ್ಬಿಿದರೆ ಮುಂದಾಗುವ ಅನಾಹುತವನ್ನು ತಪ್ಪಿಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಕರೋನಾ ಒಬ್ಬರಿಂದ ಒಬ್ಬರಿಗೆ ಹಬ್ಬುವುದು ಸುಲಭವಾಗಿರುವುದರಿಂದ, ಜನತಾ ಕರ್ಫ್ಯೂೂ ಮಾದರಿಯಲ್ಲಿ ಇಡೀ ರಾಜ್ಯವನ್ನು ವಾರದ ಮಟ್ಟಿಿಗೆ ಮುಚ್ಚಿಿದಾಗ ಮಾತ್ರ ನಿಯಂತ್ರಣಕ್ಕೆೆ ಬರಲು ಸಾಧ್ಯವಾಗುತ್ತದೆ. ಅದಕ್ಕಾಾಗಿ ಈಗಾಗಲೇ ನೆರೆರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ತೆಲಂಗಾಣ, ತಮಿಳುನಾಡು ಸೇರಿದಂತೆ ರಾಷ್ಟ್ರ ರಾಜಧಾನಿ ದೆಹಲಿ, ರಾಜಸ್ಥಾಾನ, ಜಮ್ಮು ಕಾಶ್ಮೀರ ಸೇರಿದಂತೆ ಒಟ್ಟು 14 ರಾಜ್ಯಗಳು ಲಾಕ್‌ಡೌನ್ ಆಗಿವೆ. ಇದೀಗ ಈ ಸಾಲಿಗೆ ಕರ್ನಾಟಕವೂ ಸೇರಿದೆ.

ಬಾಕ್‌ಸ್‌
ಶೇ.1ರಷ್ಟು ಹಬ್ಬಿಿದರೂ ಆಪತ್ತು ಫಿಕ್‌ಸ್‌
ಈಗಾಗಲೇ ವಿದೇಶದಿಂದ ಕಳೆದೊಂದು ತಿಂಗಳಲ್ಲಿ ಕರ್ನಾಟಕಕ್ಕೆೆ ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿರುವ ಅಂದಾಜು ಇದೆ. ಇದಕ್ಕೆೆ ಪೂರಕ ಎನ್ನುವ ರೀತಿಯಲ್ಲಿ ಬೆಂಗಳೂರು ಒಂದರಲ್ಲೇ 22 ಸಾವಿರ ಮಂದಿಯನ್ನು ಹೋಂ ಕ್ವಾಾರೆಂಟೈನ್ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದ್ದಾಾರೆ. ಇದರಿಂದ ಒಂದು ವೇಳೆ ಶೇ.1ರಷ್ಟು ಸೋಂಕು ಹರಡಿದರೂ ಭಾರಿ ಅನಾಹುತವಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿವೆ. ಈ ಎಲ್ಲವನ್ನು ಗಮನದಲ್ಲಿಸಿಕೊಂಡು ಲಾಕ್‌ಡೌನ್ ಮಾಡಿದೆ.