Wednesday, 11th December 2024

ಸರಳವಾಗಿ ವೈವಾಹಿಕ ಜೀವನಕ್ಕೆೆ ಕಾಲಿಟ್ಟ ಅದ್ದೂರಿ ನಿರ್ದೇಶಕ ಎ.ಪಿ.ಅರ್ಜುನ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಕಿಸ್ ಸಿನಿಮಾ ನಿರ್ದೇಶಕ ಎ.ಪಿ.ಅರ್ಜುನ್ ಅನ್ನಪೂರ್ಣ ಅವರನ್ನು ವರಿಸಿದ್ದಾರೆ. ಕರೋನಾ ಹಾವಳಿಯ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಚಲನಚಿತ್ರ ನಿರ್ದೇಶಕ ಎ.ಪಿ.ಅರ್ಜುನ್ ಅನ್ನಪೂರ್ಣ ಅವರನ್ನು ವಿವಾಹವಾಗಿದ್ದಾರೆ.

05 ವರ್ಷದ ನಿರಂತರದ ಪ್ರೇಮದ ಫಲವಾಗಿ ಭಾನುವಾರ ನಾಗರಬಾವಿಯಲ್ಲಿರುವ ಅರ್ಜುನ್ ಅವರ ನಿವಾಸದ ಮುಂದೆ ಹಸಿರು ತೋರಣಗಳ ನಡುವೆ ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಲನಚಿತ್ರಗಳಿಗೆ ಚಿತ್ರಕಥೆ , ಸಾಹಿತ್ಯ ಬರೆಯುತ್ತಾ ಭದ್ರ ನೆಲೆಯನ್ನು ಕಂಡಂತ ಅರ್ಜುನ್ ಅಂಬಾರಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಯಶಸ್ಸನ್ನು ಕಂಡರು. ತದನಂತರ ಅದ್ಧೂರಿ, ರಾಟೆ, ಹಾಗೂ ದರ್ಶನ್ ಅಭಿನಯದ ಐರಾವತ ಚಿತ್ರವನ್ನು ನಿರ್ದೇಶಿಸಿ, ಇತ್ತೀಚೆಗಷ್ಟೇ ಕಿಸ್ ಎಂಬ ಯುವ ಜೋಡಿಯ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.

ಈ ಯಶಸ್ವಿಿ ನಿರ್ದೇಶಕನ ಮದುವೆ ಸಮಾರಂಭಕ್ಕೆ ಚಿತ್ರ ನಟರಾದ ನೀನಾಸಂ ಸತೀಶ್ , ಧೃವ ಸರ್ಜ, ನೆನಪಿರಲಿ ಪ್ರೇಮ್ , ವಿರಾಟ್ ನಿರ್ದೇಶಕರುಗಳಾದ ತರುಣ್ ಸುಧೀರ್, ಸಂತು, ನಟಿ ಶ್ರೀಲೀಲಾ , ಛಾಯಾಗ್ರಾಹಕರಾದ ಸತ್ಯ ಹೆಗಡೆ, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ ಸೇರಿದಂತೆ ಹಲವಾರು ಗೆಳೆಯರು ಆಗಮಿಸಿ ವಧು ವರರಿಗೆ ಶುಭ ಕೋರಿದ್ದಾರೆ.

Venkatesh R Das

Cheif Reporter
Vishwavani News Daily
9482912790