Sunday, 15th December 2024

ಹಂತ ಹಂತವಾಗಿ ರಸ್ತೆ ವೈಮಾನಿಕ ಸಾರಿಗೆ ಆರಂಭಕ್ಕೆ ಚಿದಂಬರಂ ಸಲಹೆ

ದೆಹಲಿ:

ಅಂತರರಾಜ್ಯ ಪ್ರಯಾಣಿಕ ರೈಲುಗಳ ಕಾರ್ಯಾಚರಣೆಯನ್ನು ಎಚ್ಚರವಹಿಸಿ ಆರಂಭಿಸುವ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಹಂತ ಹಂತವಾಗಿ ರಸ್ತೆ ಮತ್ತು ವೈಮಾನಿಕ ಸಾರಿಗೆ ಆರಂಭಿಸುವಂತೆ ಸಲಹೆ ನೀಡಿದ್ದಾರೆ.

ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳ ಆರಂಭಕ್ಕೆ ರಸ್ತೆ ಮತ್ತು ವೈಮಾನಿಕ ಸೇವೆಗಳ ಆರಂಭವೊಂದೇ ಇರುವ ಮಾರ್ಗ ಎಂದು ಚಿದಂಬರಂ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ. ಅಂತರರಾಜ್ಯ ಪ್ರಯಾಣಿಕ ರೈಲುಗಳ ಸಂಚಾರವನ್ನು ಎಚ್ಚರವಹಿಸಿ ಆರಂಭಿಸುವ ಸರಕಾದ ನಿರ್ಧಾರವನ್ನು ಸ್ವಾಗತಿಸುತ್ತೇವೆ.

ಇದೇ ರೀತಿ ರಸ್ತೆ ಮತ್ತು ವೈಮಾನಿಕ ಸಾರಿಗೆಯನ್ನು ಆರಂಭಿಸಬೇಕು. ಸರಕು ಮತ್ತು ಪ್ರಯಾಣಿಕರಿಗಾಗಿ ರಸ್ತೆ ಮತ್ತು ರೈಲು ಸೇವೆಗಳು ತೆರೆಯುವುದರಿಂದ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳು ಆರಂಭಗೊಳ್ಳಲು ಸಾಧ್ಯ ಎಂದು ತಿಳಿಸಿದ್ದಾರೆ.