Friday, 13th December 2024

ಕಿಶ್ತ್ವಾರ್: ಬೆಂಕಿ ಅವಘಡದಲ್ಲಿ 20 ಮನೆಗಳು ಆಹುತಿ

ವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಾಗ್ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 20 ಮನೆಗಳು ಬೆಂಕಿಗೆ ಆಹುತಿಯಾಗಿವೆ.

‘ಬೆಂಕಿಗೆ ಅವಘಡಕ್ಕೆ ನಿಖರವಾದ ಕಾರಣ ಕಂಡುಹಿಡಿಯಲಾಗಿಲ್ಲ. ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆಯೇ ಅಥವಾ ಇನ್ನೇನಾದರೂ ಎಂಬುದು ಘಟಿಸಿದೆಯೇ ಎಂಬುದು ತನಿಖೆಯ ವೇಳೆ ತಿಳಿಯಲಿದೆ” ಎಂದು ಕಿಶ್ತ್ವಾರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.

ಚಾಗ್ ಗ್ರಾಮಕ್ಕೆ ವಾಹನ ಓಡಾಡುವ ರಸ್ತೆಯೇ ಒಂಬತ್ತು ಕಿಮೀ ದೂರದಲ್ಲಿದೆ. ಗ್ರಾಮ ವನ್ನು ತಲುಪಲು ಮೂರು ಗಂಟೆಗಳ ಟ್ರಕ್ಕಿಂಗ್ ಮಾಡಬೇಕಾಗುತ್ತದೆ. ಹಾಗಾಗಿ ಅಗ್ನಿ ಶಾಮಕ ವಾಹನ ಕಳುಹಿಸಲು ಸಾಧ್ಯವಾಗಿಲ್ಲ. ಅಗ್ನಿಶಾಮಕ ಕಾರ್ಯಾಚರಣೆಗಾಗಿ ಪೊಲೀಸ್ ತಂಡಗಳು ಗ್ರಾಮಕ್ಕೆ ಬಂದಿವೆ. ಅಕ್ಕಪಕ್ಕದ ಪ್ರದೇಶಗಳ ಸ್ಥಳೀಯರು ಸಹ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ. ಆದರೆ, ಅಷ್ಟರಲ್ಲಿ 20 ಮನೆಗಳು ಸುಟ್ಟು ಹೋಗಿ ದ್ದವು ಎಂದು ಮಾಹಿತಿ ನೀಡಿದರು.

ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿನ ಮನೆಗಳು ಸಾಮಾನ್ಯವಾಗಿ ಮರದಿಂದ ಕಟ್ಟಲ್ಪಟ್ಟಿವೆ.