Thursday, 12th December 2024

ಕೋವಿಡ್‌-19: 3.38 ಕೋಟಿ ಪ್ರಕರಣ

#corona

ನವದೆಹಲಿ: ದೇಶದಲ್ಲಿ 24 ಗಂಟೆಗಳ ಅಂತರದಲ್ಲಿ ಕೋವಿಡ್‌-19 ದೃಢಪಟ್ಟ 20,799 ಹೊಸ ಪ್ರಕರಣಗಳು ದಾಖಲಾಗಿದೆ.

ಸೋಂಕಿನಿಂದ 180 ಮಂದಿ ಮೃತಪಟ್ಟು, 26,718 ಮಂದಿ ಚೇತರಿಸಿಕೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಕೇರಳದಲ್ಲಿ ಕಳೆದ ಭಾನುವಾರ 12,297 ಹೊಸ ಪ್ರಕರಣಗಳು ವರದಿಯಾಗಿವೆ ಹಾಗೂ 74 ಸೋಂಕಿತರು ಮೃತಪಟ್ಟಿದ್ದಾರೆ.

ಪ್ರಕರಣಗಳ ಸಂಖ್ಯೆ 3.38 ಕೋಟಿಗೆ ಏರಿಕೆಯಾಗಿದ್ದು, ಈ ಪೈಕಿ 3,31,21,247 ಮಂದಿ ಗುಣಮುಖರಾಗಿದ್ದಾರೆ ಹಾಗೂ 4,48,997 ಮಂದಿ ಮೃತಪಟ್ಟಿದ್ದಾರೆ. ಈವರೆಗೂ ದೇಶದಲ್ಲಿ ಒಟ್ಟು 90,79,32,861 ಡೋಸ್‌ ಕೋವಿಡ್‌ ಲಸಿಕೆ ಹಾಕಲಾಗಿದೆ.