Sunday, 15th December 2024

ಅಗ್ನಿ ದುರಂತ: 30 ಗುಡಿಸಲುಗಳು ಸುಟ್ಟು ಭಸ್ಮ

ಹೈದರಾಬಾದ್ : ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 30 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.

ವಿಜಯನಗರ ಜಿಲ್ಲೆಯ ಮೆಂಟಡಾ ಮಂಡಲದ ಜಕ್ಕುವಾ ಎಂಬ ಹಳ್ಳಿಯಲ್ಲಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಬರೋ ಬ್ಬರಿ 30 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.

ಗುಡಿಸಲುಗಳು ಕುರಕುಲಾ ರಸ್ತೆಯಲ್ಲಿ ನಿರ್ಮಾಣವಾಗಿದ್ದವು. ಮನೆಯೊಂದರಲ್ಲಿ ನಡೆದ ಅಡುಗೆ ಅನಿಲ ಸ್ಫೋಟವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಹೊತ್ತಿಕೊಂಡ ಬೆಂಕಿ ವೇಗವಾಗಿ ಒಂದಾದ ಬಳಿಕ ಒಂದು ಗುಡಿಸಲುಗಳಿಗೆ ಹಬ್ಬಿದೆ. ದುರ್ಘಟನೆ ಯಲ್ಲಿ ಜೀವ ಹಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ 30 ಗುಡಿಸಲುಗಳಲ್ಲಿ ವಾಸವಾಗಿದ್ದ ಜನರಿಗೆ ಮನೆ ನಾಶವಾದಂತಾಗಿದೆ. ಆಶ್ರಯ ಕಳೆದುಕೊಂಡವರಿಗೆ ಸಮೀಪದ ಶಾಲೆಯಲ್ಲಿ ಉಳಿದುಕೊಳ್ಳುವ, ಆಹಾರ ವ್ಯವಸ್ಥೆ ಮಾಡಲಾಗಿದೆ. ಸದ್ಯ ಸ್ಥಳದಲ್ಲಿ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.