Wednesday, 18th September 2024

4,270 ಹೊಸ ಕರೋನಾ ಪ್ರಕರಣ ಪತ್ತೆ

#corona

ನವದೆಹಲಿ: ಕಳೆದೊಂದು ದಿನದಲ್ಲಿ ದೇಶದಲ್ಲಿ 4,270 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ.

ಒಟ್ಟು ಸೋಂಕಿತರ ಸಂಖ್ಯೆ 43,176,817ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ  ನೀಡಿದೆ. ಜೂ.3 ರಂದು ದೇಶದಲ್ಲಿ 4,041 ಪ್ರಕರಣ ಪತ್ತೆಯಾಗುವ ಮೂಲಕ 4 ಸಾವಿರ ಗಡಿ ದಾಟಿದೆ. ದೇಶಾದ್ಯಂತ ಕಳೆದೊಂದು ದಿನದಲ್ಲಿ 15 ಮಂದಿ ಸೋಂಕಿಗೆ ಬಲಿಯಾಗಿದ್ದು,

ಇಲ್ಲಿಯವರೆಗೆ ಒಟ್ಟು 5,24,692 ಮಂದಿ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ 24,052 ಸಕ್ರಿಯ ಪ್ರಕರಣಗಳಿವೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ 194.09 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.