Thursday, 18th July 2024

ರಾಮನಗರ ಕ.ಸಾ.ಪ ಚುನಾವಣೆ: ಕಣದಲ್ಲಿ ಐವರು ಅಭ್ಯರ್ಥಿಗಳು, ಮತದಾನ ಚುರುಕು

ರಾಮನಗರ: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷ ಚುನಾವಣೆಯ ಮತದಾನ ಪ್ರಕ್ರಿಯೆ ಜಿಲ್ಲೆಯಾದ್ಯಂತ ಚುರುಕಾಗಿ ನಡೆದಿದೆ.

ರಾಮನಗರದ ತಾಲ್ಲೂಕು ಕಚೇರಿಯಲ್ಲಿನ ಎರಡು ಮತಗಟ್ಟೆ ಸೇರಿದಂತೆ ಜಿಲ್ಲೆಯಾದ್ಯಂತ ಹತ್ತು ಮತಗಟ್ಟೆಗಳನ್ನು ಸ್ಥಾಪಿಸ ಲಾಗಿದ್ದು, ಮತದಾನಕ್ಕೆ ಸಾಹಿತ್ಯಾಸಕ್ತರು ಉತ್ಸಾಹ ತೋರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 9680 ಮತದಾರರು, ಚನ್ನಪಟ್ಟಣ ತಾಲ್ಲೂಕು ಒಂದ ರಲ್ಲಿಯೇ 4342 ಮತದಾರರು ಇದ್ದಾರೆ.

ಕಸಾಪ ರಾಮನಗರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಬಿ.ಟಿ. ನಾಗೇಶ, ಯೋಗೀಶ ಚಕ್ಕೆರೆ, ಪಾರ್ವತೀಶ ಬಿಳಿದಾಳೆ, ವಿ. ಸಂದೇಶ, ಡಿ. ಕೃಷ್ಣಮೂರ್ತಿ ಸೇರಿದಂತೆ ಐವರು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ಇದೆ. ಮತಗಟ್ಟೆಗಳಲ್ಲೇ ಎಣಿಕೆ ಕಾರ್ಯ ನಡೆಯ ಲಿದೆ.

Leave a Reply

Your email address will not be published. Required fields are marked *

error: Content is protected !!