ವಿಶ್ವವಾಣಿ ಸುದ್ದಿಮನೆ ಬೆಂಗಳೂರು
15 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಒಟ್ಟು 355 ಅಭ್ಯರ್ಥಿಗಳು ಸಲ್ಲಿಸಲಾಗಿದ್ದ ನಾಮಪತ್ರಗಳ ಪೈಕಿ 54 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಈ ಹಿನ್ನೆೆಲೆಯಲ್ಲಿ 355 ಅಭ್ಯರ್ಥಿಗಳ ಪೈಕಿ 301 ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದುಕೊಂಡಂತಾಗಿದೆ. ಇದರಲ್ಲಿ ಬಹುಜನ ಸಮಾಜ ಪಕ್ಷದ ಎರಡು, ಬಿಜೆಪಿಯ 15, ಕಾಂಗ್ರೆೆಸ್ನ 15, ಎನ್ಸಿಪಿಯ 1, ಜನತಾದಳದ 14, ವಿವಿಧ ಪಕ್ಷದ 46 ಹಾಗೂ ಪಕ್ಷೇತರ ಅಭ್ಯರ್ಥಿಗಳು 125 ಇದ್ದು, ಒಟ್ಟಾಾರೆ 301 ಅಭ್ಯರ್ಥಿಗಳ ನಡುವೆ ಉಪ ಸಮರ ನಡೆಯಲಿದೆ.
ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಎಂಟು ಅಭ್ಯರ್ಥಿಗಳಿಂದ 15 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 13 ನಾಮಪತ್ರಗಳು ಕ್ರಮಬದ್ಧವಾಗಿವೆ. ‘ಎ’ ಮತ್ತು ‘ಬಿ’ಫಾರಂ ಸಲ್ಲಿಸದ ಕಾರಣದಿಂದ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆೆಸ್ ಪಕ್ಷದ ಎಲ್.ದೇವರಾಜು ಹಾಗೂ ಪಕ್ಷೇತರ ಅಭ್ಯರ್ಥಿ ದೇವೇಗೌಡ ಅವರು ಸಲ್ಲಿಸಿದ್ದ ಎರಡು ನಾಮಪತ್ರಗಳಲ್ಲಿ ಒಂದು ತಿರಸ್ಕೃತಗೊಂಡಿವೆ. ಇನ್ನು ಉಳಿದ 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ಗೋಕಾಕ ಕ್ಷೇತ್ರದಿಂದ ಕಾಂಗ್ರೆೆಸ್ಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಚಿಕ್ಕಬಳ್ಳಾಾಪುರ ಕ್ಷೇತ್ರದಿಂದ ಜೆಡಿಎಸ್ಗೆ ಕೆ.ಪಿ.ಬಚ್ಚೇಗೌಡ ಅವರು ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತಗೊಂಡಿವೆ. ಇಬ್ಬರೂ ಅಭ್ಯರ್ಥಿಗಳು ತಮ್ಮ ನಾಮಪತ್ರದೊಂದಿಗೆ ‘ಬಿ’ ಫಾರ್ಮ್ ಸಲ್ಲಿಸದ ಕಾರಣದಿಂದ ನಾಮಪತ್ರಗಳು ತಿರಸ್ಕೃತಗೊಂಡಿವೆ.
ತೀವ್ರ ಕುತೂಹಲ ಮೂಡಿಸಿದ್ದ ಹಾವೇರಿಯ ಹಿರೇಕೆರೂರು ಕ್ಷೇತ್ರದ ಅಭ್ಯರ್ಥಿ ಕಬ್ಬಿಣಕಂಥಿ ಮಠದ ಶಿವಲಿಂಗಶಿವಾಚಾರ್ಯ ಸ್ವಾಾಮೀಜಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾಾರೆ. ಮಠ ಹಾಗೂ ಧರ್ಮಕ್ಕೆ ಚುನಾವಣೆಯಿಂದ ಧಕ್ಕೆ ಬರಬಹುದೆಂದು ಅರಿತು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾಾರೆ ಎನ್ನಲಾಗಿದೆ.