Saturday, 14th December 2024

ರೈಲ್ವೇ ನಿಲ್ದಾಣದಲ್ಲಿ ಸ್ಫೋಟ: 6 ಸಿಆರ್​ಪಿಎಫ್​​ ಯೋಧರಿಗೆ ಗಾಯ

ರಾಯ್ಪುರ: ಛತ್ತೀಸ್​ಗಡ್​​ನ ರಾಯ್ಪುರ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿ ಸಿಆರ್​ಪಿಎಫ್​​ನ 6 ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಇದ್ದ ಸಿಆರ್​ಪಿಎಫ್​ ವಿಶೇಷ ರೈಲಿನಲ್ಲಿ, ಇಗ್ನಿಟರ್​ ಸೆಟ್​​ ಇರುವ ಪೆಟ್ಟಿಗೆ ಕೆಳಗೆ ಬಿದ್ದ ನಂತರ ಈ ಸ್ಫೋಟವುಂಟಾಗಿದೆ ಎಂದು ರಾಯ್ಪುರ ಪೊಲೀಸ್​ ಹೇಳಿದ್ದಾರೆ.

ರೈಲು ಪ್ಲಾಟ್​ಫಾರ್ಮ್​ ನಂಬರ್​ 2ರಲ್ಲಿ ನಿಂತಿತ್ತು, ಇಗ್ನಿಟೆರ್​ ಸೆಟ್​​ಗಳಿರುವ ಪೆಟ್ಟಿಗೆಯನ್ನು ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಸಾಗಿಸ ಲಾಗುತ್ತಿತ್ತು.

ಈ ವೇಳೆ ನೆಲದ ಮೇಲೆ ಬಿದ್ದಿದ್ದಾಗಿ ವರದಿಯಾಗಿದೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.