ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿಕೆ*
ಮಂಡ್ಯದಲ್ಲಿ ಐದನೇ ಕೊರೋನಾ ಸೋಂಕು ಪತ್ತೆ ಪ್ರಕರಣ
*ಐದನೇ ಸೋಂಕಿತ ವ್ಯಕ್ತಿ ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯವನು*
*ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಮೈಕ್ರೋ ಬಯಾಲಿಸ್ಟ್ ಆಗಿ ಕ್ವಾಲಿಟಿ ಕಂಟ್ರೋಲ್ ಟೀಂನಲ್ಲಿ ಕೆಲಸ ಮಾಡುತ್ತಿದ್ದರು*
ನಂಜನಗೂಡಿನ ಕಾರ್ಖಾನೆಯಲ್ಲಿ ಸೋಂಕು ಉಲ್ಭಣಿಸಿದಾಗ ಈತನನ್ನು ಫ್ರೈಮರಿ ಕಾಂಟೆಕ್ಟ್ ಎಂದು ಗುರುತಿಸಿ ಕೈ ಮೇಲೆ ಸೀಲ್ ಹಾಕಿ ಕಳುಹಿಸಿರುತ್ತಾರೆ
*ಮಾರ್ಚ್ 26 ರಂದು ಈತ ಮಂಡ್ಯಕ್ಕೆ ದ್ವಿ ಚಕ್ರ ವಾಹನದಲ್ಲಿ ವಾಪಸ್ ಆಗಿರ್ತಾನೆ*
26ರಿಂದ 30 ರವರೆಗೆ ಹೋಂ ಕ್ವಾರೆಂಟೈನ್ ನಲ್ಲಿದ್ದ ಈತನನ್ನು ಪಬ್ಲಿಕ್ ಕ್ವಾರೆಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು
ಏಪ್ರಿಲ್ 7 ರಂದು ಲ್ಯಾಬ್ ಗೆ ಈತನ ಕಫ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ ಕೋವಿಡ್ 19 ಪತ್ತೆಯಾಗಿದೆ
ಸದ್ಯ ಇವ್ರಿಗೆ ಮಂಡ್ಯ ಮಿಮ್ಸ್ ನ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ
*ಇವರಲ್ಲಿ ರೋಗ ಲಕ್ಷಣ ಇಲ್ಲದೇ ಡಿಸ್ಚಾರ್ಜ್ ಮಾಡುವ ಸಂದರ್ಭದಲ್ಲಿ ಟೆಸ್ಟ್ ಮಾಡಿಸಿದಾಗ ಕೊರೋನಾ ಸೋಂಕು ಪತ್ತೆಯಾಗಿದೆ*
ಸೋಂಕಿತ ನಿತ್ಯ ಮನೆಯಿಂದ ಮಂಡ್ಯ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೈಸೂರು ಬಸ್ ನಿಲ್ದಾಣಕ್ಕೆ ಬಸ್ ನಲ್ಲಿ ಹೋಗಿ, ಬಸ್ ನಿಲ್ದಾಣದಿಂದ ಕಂಪನಿ ಬಸ್ ನಲ್ಲಿ ಕಾರ್ಖಾನೆಗೆ ಹೋಗಿ ಅದೇ ಮಾದರಿಯಲ್ಲಿ ವಾಪಸ್ ಆಗ್ತಿದ್ದ
*ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ತಂದೆ, ತಾಯಿ, ತಂಗಿ, ತಂಗಿ ಮಗಳನ್ನು ಹೋಂ ಕ್ವಾರೆಂಟೈನ್ ಮಾಡಲಾಗಿದೆ*
ಮಂಡ್ಯ ನಗರದಲ್ಲಿ ಮೊದಲ ಪಾಸಿಟಿವ್ ಪತ್ತೆಯಾಗಿದೆ ಈ ನಿಟ್ಟಿನಲ್ಲಿ ಇಡೀ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ
*ಆತ ವಾಸವಿದ್ದ ಸ್ವರ್ಣಸಂದ್ರ ಬಡಾವಣೆಯ ಕೆಲ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ*