ಬೆ೦ಗಳೂರಿನಲ್ಲಿ ಹೊಸ ಡಿಜಿಟಲ್ ಕೇಪಬಿಲಿಟಿ ಸೆಂಟರ್
• ಡೆಲಾಯ್ಟ್ ಇಂಡಿಯಾದಿ೦ದ ಈ ಕೇಂದ್ರ ಪ್ರಾರಂಭ ಹಾಗೂ ವಿಸ್ತರಣೆಗೆ ಸಮಗ್ರ ಸೇವೆಗಳ ಪೂರೈಕೆ
• ವಿಶ್ವದಾದ್ಯಂತ ಕೃಷಿ ಯಂತ್ರ ಮತ್ತು ನಿಖರ ಕೃಷಿ ತಂತ್ರಜ್ಞಾನದ ಉತ್ಪಾದಕ ಮತ್ತು ವಿತರಕ ನಿಮ್ಮ ಕೃಷಿ ಕಂಪನಿ ಎಜಿಸಿಒ ಕಾರ್ಪೊರೇಷನ್(ಎನ್‌ವೈಎಸ್‌ಇ: ಎಜಿಸಿಒ) ಭಾರತದ ಬೆಂಗಳೂರಿನಲ್ಲಿ ಡಿಜಿಟಲ್ ಕೇಪಬಿಲಿಟಿ ಸೆಂಟರ್‌ಗೆ ಚಾಲನೆ ನೀಡಿದೆ.
ನವದೆಹಲಿ: ಎಜಿಸಿಒ ಕಂಪನಿಯು ಐಟಿ ಮತ್ತು ನಿಖರ ಕೃಷಿ ಮತ್ತು ಡಿಜಿಟಲ್ ಸಂಸ್ಥೆಗಳಿಗೆ ಪ್ರತಿಭಾವಂತ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲಿದೆ. ಈ ಡಿಜಿಟಲ್ ಕೇಪಬಿಲಿಟಿ ಸೆಂಟರ್(ಡಿಸಿಸಿ) ಭಾರತದ ಪ್ರತಿಭಾವಂತರ ತಂಡ ಮತ್ತು ಸ್ಟಾರ್ಟಪ್‌ಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ವಿಸ್ತಾರ ವ್ಯವಸ್ಥೆಯನ್ನು ತಂತ್ರಜ್ಞಾನ ಆಧುನೀಕರಣ ಹಾಗೂ ಡಿಜಿಟೈಸೇಷನ್ ಪ್ರಯಾಣದಲ್ಲಿ ವೇಗ ವರ್ಧಿಸಲು ಪರಿಕಲ್ಪನೆ, ಅಭಿವೃದ್ಧಿ ಮತ್ತು ಆವಿಷ್ಕಾರಕ ಸಾಮರ್ಥ್ಯ ಗಳನ್ನು ವರ್ಧಿಸುತ್ತದೆ.
ಮುಂಚೂಣಿಯ ಕನ್ಸಲ್ಟಿಂಗ್ ಸೇವೆಗಳ ಪೂರೈಕೆದಾರರಾದ ಡೆಲಾಯ್ಟ್ ಇಂಡಿಯಾ ಬೆಂಗ ಳೂರಿನಲ್ಲಿ ಈ ಕೇಂದ್ರವನ್ನು ಪ್ರಾರಂಭಿ ಸಲು ಸಮಗ್ರ ಬೆಂಬಲ ನೀಡಿದೆ.
“ಈ ಜಾಗತಿಕ ಡಿಜಿಟಲ್ ಕೇಪಬಿಲಿಟಿ ಸೆಂಟರ್‌ಗೆ ಭಾರತವು ಸೂಕ್ತವಾದ ಪ್ರತಿಭೆಗಳ ಇಕೊ ಸಿಸ್ಟಂ ಹೊಂದಿದೆ ಮತ್ತು ನಾವು ಇದು ಉದ್ಯಮದ ಮುಂಚೂಣಿಯ, ಸ್ಮಾರ್ಟ್ ಕೃಷಿ ಪರಿಹಾರಗಳಿಗೆ ವಿಶ್ವಾಸಾರ್ಹ ಪಾಲುದಾರರನ್ನಾಗಿ ಮುಂದುವರಿಯಲು ನೆರವಾಗಲಿದೆ ಎಂಬ ವಿಶ್ವಾಸ ನಮ್ಮದು” ಎಂದು ಉಪಾಧ್ಯಕ್ಷ, ಚೀಫ್ ಇನ್ಫರ್ಮೇಷನ್ ಆಫೀಸರ್ ಡೇನಿಯೆಲ್ ಝಪ್ ಹೇಳಿದರು. ಅವರು, “ಡೆಲಾಯ್ಟ್ ಇಂಡಿಯಾದೊAದಿಗೆ ನಮ್ಮ ಸಹಯೋಗವು ನಮ್ಮ ಡಿಜಿಟಲ್ ಕೇಪಬಿಲಿಟಿ ಸೆಂಟರ್‌ನ ಇನ್‌ಕ್ಯುಬೇಟ್ ಮಾಡಲು ಮತ್ತು ತೀವ್ರವಾಗಿ ವಿಸ್ತರಿಸಲು ನೆರವಾಗುತ್ತದೆ ಹಾಗೂ ಎಜಿಸಿಒಗೆ ಅತ್ಯುತ್ತಮ ಪ್ರತಿಭೆ ಯನ್ನು ಆಕರ್ಷಿಸಲಿದೆ. ಈ ಕಾರ್ಯತಂತ್ರವು ನಮಗೆ ಜಾಗತಿಕವಾಗಿ ಕೃಷಿಕ-ಕೇಂದ್ರಿತ ಪರಿವರ್ತನೆಯನ್ನು ವಿಸ್ತರಿಸಲು ನೆರವಾಗಲಿದೆ” ಎಂದರು.
ಡೆಲಾಯ್ಟ್ ಇಂಡಿಯಾ ಈ ಕೇಂದ್ರದ ಸಾಮರ್ಥ್ಯಗಳ ಕುರಿತು ಉತ್ಸುಕವಾಗಿದೆ. “ಜಾಗತಿಕ ಸಂಸ್ಥೆಗಳ ಜಾಗತಿಕ ಪ್ರತಿಭೆ ಮತ್ತು ಸೇವೆಗಳ ಪೂರೈಕೆ ಸರಣಿಯಲ್ಲಿ ಭಾರತವು ಪ್ರಮುಖ ಹಾಗೂ ನಿರ್ಣಾಯಕವಾಗಿದೆ. ಭಾರತದಲ್ಲಿ ಎಜಿಸಿಒ ಉಪಸ್ಥಿತಿಯು ಈ ಪ್ರತಿಭೆಗಳ ಮಾರುಕಟ್ಟೆಯಲ್ಲಿ ಕೃಷಿ-ತಂತ್ರಜ್ಞಾನ ಪ್ರತಿಭೆಯನ್ನು ಮತ್ತಷ್ಟು ಉತ್ತೇಜಿಸಲಿದೆ. ಎಜಿಸಿಒ ಜೊತೆಯಲ್ಲಿ ಈ ಪ್ರಯಾಣ ದಲ್ಲಿ ಸಹಯೋಗಕ್ಕೆ ಹಾಗೂ ಎಜಿಸಿಒಗೆ ಅವರ ಕಾರ್ಯತಂತ್ರೀಯ ಗುರಿಗಳು ಮತ್ತು ಉದ್ದೇಶಗಳನ್ನು ವಾಸ್ತವಗೊಳಿಸಿಕೊಳ್ಳಲು ಉತ್ಸುಕರಾಗಿದ್ದೇವೆ” ಡೆಲಾಯ್ಟ್ ಇಂಡಿಯಾ ಪಾಲುದಾರರಾದ ರವಿ ಮೆಹ್ತಾ ಹೇಳಿದರು.