Friday, 22nd November 2024

ಅನಾದಿ ಕಾಲಕ್ಕೆ ಹೊರಳಿದ ಕನ್ನಡ-ಸಂಸ್ಕೃತಿ ಇಲಾಖೆ

ಎಸ್‌ಸಿ, ಎಸ್‌ಟಿ ಧನಸಹಾಯಕ್ಕೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಆನ್‌ಲೈನ್ ಅರ್ಜಿ ಸಲ್ಲಿಸಲು ಬರಲ್ಲ ಎಂದು ಸಬೂಬು

ರಂಜಿತ್ ಎಚ್ ಅಶ್ವತ್ಥ ಬೆಂಗಳೂರು
ರಾಜ್ಯದ ಇಡೀ ಆಡಳಿತ ವ್ಯವಸ್ಥೆೆ ಡಿಜಿಟಲೀಕರಣದತ್ತ ತಿರುಗುತ್ತಿದ್ದು, ಇ-ಆಡಳಿತಕ್ಕೆ ಒತ್ತು ನೀಡುವ ಕೆಲಸದಲ್ಲಿ ರಾಜ್ಯ ಸರಕಾರ ಮಗ್ನವಾಗಿದ್ದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾತ್ರ ಡಿಜಿಟಲ್ ಯುಗದಿಂದ ಮತ್ತೆೆ ಅನಾದಿ ಕಾಲಕ್ಕೆ ಹೊರಳುತ್ತಿದೆ.

ಹೌದು, ಬಿಜೆಪಿ ಸರಕಾರ ಅಧಿಕಾರಕ್ಕೆೆ ಬಂದ ಬಳಿಕ ಮುಖ್ಯಮಂತ್ರಿಿ ಯಡಿಯೂರಪ್ಪ ಅವರ ಇ-ಆಡಳಿತ ಸಲಹೆಗಾರ ಎನ್ನುವ ಹೊಸ ಹುದ್ದೆೆ ಸೃಷ್ಟಿಿಸಿ, ಬೇಲೂರು ಸುದರ್ಶನ್ ಅವರನ್ನು ನೇಮಿಸಲಾಗಿದೆ. ಮುಖ್ಯಮಂತ್ರಿಿ ಕಚೇರಿಯನ್ನು ಇ-ಆಡಳಿತ ವ್ಯವಸ್ಥೆೆಯಡಿ ತರಲು ಎಲ್ಲ ಸಿದ್ಧತೆಗಳು ನಡೆದಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾತ್ರ ಆನ್‌ಲೈನ್ ಅರ್ಜಿ ವ್ಯವಸ್ಥೆೆ ಬದಲು, ಭೌತಿಕವಾಗಿ ಅರ್ಜಿ ಸಲ್ಲಿಸಬೇಕೆಂಬ ತಿದ್ದುಪಡಿ ಮಾಡಿಕೊಂಡಿದೆ.

ಎಸ್.ಸಿ, ಎಸ್.ಟಿ ಸಮುದಾಯದ ಧನಸಹಾಯಕ್ಕೆೆ ಅರ್ಜಿ ಆಹ್ವಾಾನಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆನ್‌ಲೈನ್ ಬದಲು ಆಫ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕೆಂಬ ಆದೇಶವನ್ನು ಹೊರಡಿಸಿದೆ. ಆನ್‌ಲೈನ್ ಬದಲು ಈ ರೀತಿ ಆಫ್‌ಲೈನ್ ಮಾಡಿದರೆ ಅರ್ಹರಿಗೆ ಸಿಗಬೇಕಾದ ಅನುದಾನವು ಅನರ್ಹರ ಕೈಗೆ ಸೇರುವ ಆತಂಕವನ್ನು ಕೆಲ ಅಧಿಕಾರಿಗಳು ಹೊರಹಾಕಿದ್ದಾಾರೆ.

ಕಳೆದ ವರ್ಷದವರೆಗೆ ಎಸ್.ಸಿ, ಎಸ್.ಟಿ ಸೇರಿದಂತೆ ಪ್ರತಿಯೊಂದು ವಿಭಾಗದ ಅನುದಾನಕ್ಕೆೆ ಅರ್ಜಿಯನ್ನು ಸೇವಾಸಿಂಧು ಮೂಲಕವೇ ಸಲ್ಲಿಸಬೇಕಿತ್ತು. ಆದರೆ ಈ ಬಾರಿ ಇದರಿಂದ ಕಲಾವಿದರಿಗೆ ಹಾಗೂ ಸಂಘ ಸಂಸ್ಥೆೆಗಳಿಗೆ ಅನಾನುಕೂಲವಾಗಲಿದೆ ಎನ್ನುವ ಕಾರಣಕ್ಕೆೆ ಭೌತಿಕವಾಗಿಯೇ ಅರ್ಜಿ ಸಲ್ಲಿಸಬೇಕೆಂಬ ಬದಲಾವಣೆಯನ್ನು ಇಲಾಖೆ ಮಾಡಿ ಅದೇಶ ಹೊರಡಿಸಿದೆ.

ಅರ್ಜಿ ಸಲ್ಲಿಸಲು ಸಮಸ್ಯೆೆ!
ಆನ್‌ಲೈನ್ ಬದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಬಗ್ಗೆೆ ಅಧಿಕಾರಿಗಳನ್ನು ಪ್ರಶ್ನಿಿಸಿದರೆ, ಎಸ್‌ಸಿ, ಎಸ್‌ಟಿ ಸಮುದಾಯದ ಅನೇಕರಿಗೆ ಹಾಗೂ ಸಂಘ-ಸಂಸ್ಥೆೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಿಲ್ಲ. ಯಾವ ರೀತಿ ಅರ್ಜಿ ಸಲ್ಲಿಸಬೇಕೆಂಬ ಮಾಹಿತಿಯಿಲ್ಲ. ಆದ್ದರಿಂದ ಅವರಿಗೆ ಮಾತ್ರ ಈ ರೀತಿ ಮಾರ್ಪಾಡು ಮಾಡಲಾಗಿದೆ. ಇನ್ನುಳಿದಂತೆ ಇತರೆ ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು ಎನ್ನುವ ಸಬೂಬು ಹೇಳುತ್ತಿಿದ್ದಾಾರೆ. ಆದರೆ ಸಂಘಟನೆಯೊಂದರಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವಷ್ಟು ಅನಕ್ಷರಸ್ಥರು ಇರುತ್ತಾಾರೆಯೇ? ಅಥವಾ ಇಡೀ ಸಂಘ-ಸಂಸ್ಥೆೆಯಲ್ಲಿ ಇರುವವರೆಲ್ಲರಿಗೆ ಕಂಪ್ಯೂೂಟರ್ ಜ್ಞಾಾನ ಇರುವುದಿಲ್ಲವೇ ಎನ್ನುವ ಪ್ರಶ್ನೆೆ ಇದೀಗ ಶುರುವಾಗಿದೆ.
ಒಂದು ವೇಳೆ ಎಸ್.ಸಿ, ಎಸ್.ಟಿ ಸಂಘದಲ್ಲಿರುವವರಿಗೆಲ್ಲ ಆನ್‌ಲೈನ್ ಅರ್ಜಿ ಸಲ್ಲಿಸಲು ಬರುವುದಿಲ್ಲ ಎನ್ನುವುದಾದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಾ ಕೇಂದ್ರದಲ್ಲಿ ಪ್ರತ್ಯೇಕ ಘಟಕವೊಂದನ್ನು ಆರಂಭಿಸಿ, ಅರ್ಜಿ ಸಲ್ಲಿಸಲು ಬಾರದವರಿಗೆ ತಜ್ಞರ ಸಹಾಯವನ್ನು ನೀಡಬಹುದಿತ್ತು. ಆನ್‌ಲೈನ್ ಬದಲಿಗೆ ಆಫ್‌ಲೈನ್ ಅರ್ಜಿಗೆ ಅವಕಾಶ ನೀಡಿದರೆ, ಧನಸಹಾಯದಲ್ಲಿ ಪಾರದರ್ಶಕತೆ ಉಳಿಯುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.

ಜಿಲ್ಲಾಾಮಟ್ಟದಲ್ಲಿ ಅಕ್ರಮಕ್ಕೆೆ ಅವಕಾಶ
ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಲ್ಲಿ ಧನ ಸಹಾಯಕ್ಕೆೆ ಅರ್ಜಿ ಸಲ್ಲಿಸುವವರು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಇಡೀ ಪ್ರಕ್ರಿಿಯೆ ಪಾರದರ್ಶಕವಾಗಿ ನಡೆಯಲಿದೆ. ಆದ್ದರಿಂದ ಯಾವುದೇ ಭ್ರಷ್ಟಾಾಚಾರಕ್ಕೆೆ ಅವಕಾಶವಿರುವುದಿಲ್ಲ. ಆದರೆ ಆಫ್‌ಲೈನ್ ಅರ್ಜಿ ಸಲ್ಲಿಕೆಯಿಂದ ‘ಕಾಣದ ಕೈ’ಗಳು ತಮಗೆ ಬೇಕಾದವರಿಗೆ, ಧನಸಹಾಯ ಕೊಡಿಸಬಹುದು ಎನ್ನುವ ಆರೋಪ ಕೇಳಿಬಂದಿದೆ. ಮಧ್ಯವರ್ತಿಗಳು ಲಾಭ ಪಡೆಯುವ ಉದ್ದೇಶದಿಂದಲೇ ನಿರ್ದೇಶಕರಿಗೆ ತಪ್ಪುು ಮಾಹಿತಿ ನೀಡಿ, ಭೌತಿಕವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಬದಲಾವಣೆ ಮಾಡಿಸಿದ್ದಾಾರೆ ಎನ್ನುವ ಮಾತುಗಳು ಕೇಳಿಬಂದಿದೆ.

20 ಸಾವಿರಕ್ಕೆೆ ಆನ್‌ಲೈನ್, ಲಕ್ಷಕ್ಕೆೆ ಆಫ್‌ಲೈನ್!
ಪ್ರಾಾಯೋಜಿಕ ಕಾರ್ಯಕ್ರಮಗಳಿಗೆ ಅನುದಾನ ಪಡೆಯಲು ಈಗಲೂ ಸೇವಾ ಸಿಂಧು ಮೂಲಕವೇ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಆದರೆ ಎರಡರಿಂದ 20 ಲಕ್ಷದವರೆಗೆ ಅನುದಾನ ಸಿಗುವ ಎಸ್.ಸಿ, ಎಸ್.ಟಿ ಧನಸಹಾಯದ ಅರ್ಜಿಗಳನ್ನು ಮಾತ್ರ ಭೌತಿಕವಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ರೀತಿ ಅರ್ಜಿ ಸಲ್ಲಿಸುವುದರಿಂದ ಮಧ್ಯವರ್ತಿಗಳು ಪ್ರಭಾವ ಬಳಸಿ ತಮಗೆ ಬೇಕಾದವರಿಗೆ ಧನಸಹಾಯ ಮಾಡಿಸಬಹುದು ಎನ್ನುವ ಆರೋಪವಿದೆ.

ಈ ಬಾರಿ 8.5 ಕೋಟಿ ಹಣವನ್ನು ಧನಸಹಾಯಕ್ಕೆೆ ಮೀಸಲಿಡಲಾಗಿದೆ. ಇದನ್ನು ನೀಡಲು ಅರ್ಜಿ ಆಹ್ವಾಾನಿಸಲಾಗಿದೆ. ದಲಿತ ಸಮುದಾಯದ ಅನೇಕರಿಗೆ ಆನ್‌ಲೈನ್ ಮೂಲಕ ಅರ್ಜಿ ಹಾಕುವುದು ಕಷ್ಟ ಎನ್ನುವ ಮಾತು ಕೇಳಿಬಂದಿರುವುದರಿಂದ, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ