ನವದೆಹಲಿ: ಕಪ್ಪು ಶಿಲೀಂದ್ರದ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ಗುರುವಾರ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 5190 ವಯಲ್ಸ್ ಎಂಫೊಟೆರಿಸಿನ್-ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿದೆ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಸಚಿವರು ರಾಜ್ಯಕ್ಕೆ ಮೇ26 ರವರೆಗೆ 5180 ವಯಲ್ಸ್ ಎಂಫೊಟೆರಿಸಿನ್-ಬಿ ರಾಜ್ಯಕ್ಕೆ ಹಂಚಿಕೆ ಮಾಡಲಾ ಗಿತ್ತು. ಇಂದು ರಾಜ್ಯದ ಬೇಡಿಕೆಯನ್ನು ಪರಿಗಣಿಸಿ ಹೆಚ್ಚುವರಿಯಾಗಿ 5190 ವಯಲ್ಸ್ ನೀಡಲಾಗಿದೆ.
ಇಲ್ಲಿಯ ತನಕ ರಾಜ್ಯಕ್ಕೆ ಒಟ್ಟು 10370 ವಯಲ್ಸ್ ಎಂಫೊಟೆರಿಸಿನ್-ಬಿ ಒದಗಿಸಿದಂತಾಯಿತು. ಇದಲ್ಲದೆ, ರಾಜ್ಯಕ್ಕೆ ಇದುವರೆಗೆ ಕರೋನಾ ಚಿಕಿತ್ಸೆಗಾಗಿ ಒಟ್ಟು 14,25,000 ವಯಲ್ಸ್ ಡೆಮ್ಡೆಸಿವಿರ್ ಹಂಚಿಕೆ ಮಾಡಲಾಗಿದೆ. ಹಾಗೆಯೇ ರಾಜ್ಯಕ್ಕೆ 13935 ವಯಲ್ಸ್ ಟೊಸಿಲಿಜುಮಾಬ್ ಚುಚ್ಚುಮದ್ದನ್ನು ಸಹ ವಿತರಿಸಲಾಗಿದೆ ಎಂದು ವಿವರಿಸಿದರು.