Sunday, 15th December 2024

ಏಥರ್ ತನ್ನ ನವೀಕರಿಸಿದ ಉತ್ಪನ್ನ ಪೋರ್ಟ್ ಫೋಲಿಯೊ ಬಿಡುಗಡೆ ಮತ್ತು ಸಂಪೂರ್ಣ ಹೊಚ್ಚಹೊಸ ವೇರಿಯೆಂಟ್ 450ಎಸ್ ಬಿಡುಗಡೆ

  • 450ಎಸ್ ಭಾರತದ ಮೊದಲ ಡೀಪ್ ವ್ಯೂ ಡಿಸ್ಪ್ಲೇ ಹೊಂದಿದೆ
  • ಹೊಸ 450ಎಸ್ ಗೆ ರೂ.129,999ರಿಂದ ಪ್ರಾರಂಭದ ಬೆಲೆ ಹೊಂದಿದ್ದು ಇದು ಈ ವರ್ಗದ ಮುಂಚೂಣಿಯ ಕಾರ್ಯಕ್ಷಮತೆ ಮತ್ತು ಇಂದು ಲಭ್ಯವಿರುವ ಪೆಟ್ರೋಲ್ ಸ್ಕೂಟರ್ ಗಳಿಗೆ ಹೋಲಿಸಿದರೆ ಅಂತರ್ಬೋಧೆಯ ಅನುಭವ ನೀಡುತ್ತದೆ
  • ಪ್ರಸ್ತುತವಿರುವ ಮಾದರಿಗಳು ಉನ್ನತೀಕರಿಸಿದ ಸುರಕ್ಷತೆ ಮತ್ತು ಕಾರ್ಯಕ್ಷಮತೆಗೆ ವಿಸ್ತಾರ ಫೀಚರ್ ಅಪ್ಡೇಟ್ ಆಗಿವೆ

ಬೆಂಗಳೂರು: ಭಾರತ ಮುಂಚೂಣಿಯ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಕ ಏಥರ್ ಎನರ್ಜಿ ಇಂದು ಸಂಪೂರ್ಣವಾಗಿ ನವೀಕರಿಸಿದ ಹೊಸ ಉತ್ಪನ್ನದ ಪೋರ್ಟ್ ಫೋಲಿಯೊ ಪ್ರಕಟಿಸಿದ್ದು ಅದನ್ನು ಕಂಪನಿಯ ಅತ್ಯುತ್ತಮ ಮಾರಾಟದ 450 ಪ್ಲಾಟ್ ಫಾರಂನಲ್ಲಿ ನಿರ್ಮಿಸಲಾಗಿದೆ. ಹೊಸದಾಗಿ ಬಿಡುಗಡೆಯಾದ 450ಎಸ್ ಮತ್ತು ನವೀಕರಿಸಿದ 450ಎಕ್ಸ್ ಈಗ ಹೊಸ ಸೇಫ್ಟಿ ಮತ್ತು ಪರ್ಫಾರ್ಮೆನ್ಸ್ ಫೀಚರ್ ಗಳೊಂದಿಗೆ ಸನ್ನದ್ಧವಾಗಿದ್ದು ಅದು ಇಂದಿನವರೆಗೆ ಉದ್ಯಮದಲ್ಲಿ ಕಂಡಿಲ್ಲದ ಭಾರತದ ಮೊದಲ ಡೀಪ್ ವ್ಯೂ ಡಿಸ್ಪ್ಲೇ ಹೊಂದಿದ್ದು ಅದು ಹೊಸ 450ಎಸ್ ಪ್ರವೇಶವನ್ನು ಗುರುತಿಸಿದೆ.

450ಎಸ್ 2.9ಕೆಡಬ್ಲ್ಯೂಎಚ್ ಬ್ಯಾಟರಿ ಸಾಮರ್ಥ್ಯದೊಂದಿಗೆ ಬಂದಿದ್ದು ಐಡಿಸಿ ಶ್ರೇಣಿ 115 ಕಿ.ಮೀ. ಇದ್ದು 3.9 ಸೆಕೆಂಡುಗಳಲ್ಲಿ 0-40 ಆಕ್ಸಲರೇಷನ್ ಮತ್ತು ಗಂಟೆಗೆ 90 ಕಿ.ಮೀ. ಟಾಪ್ ಸ್ಪೀಡ್ ನೀಡುತ್ತದೆ. ಈ ವಾಹನವು ಅಸಂಖ್ಯ ಹೊಸ ಬದಲಾವಣೆಗಳನ್ನು ಹೊಂದಿದ್ದು ಅದರಲ್ಲಿ ಡೀಪ್ ವ್ಯೂ ಡಿಸ್ಪ್ಲೇ, ಹೊಸ ಸ್ವಿಚ್ ಗೇರ್, ಫಾಲ್ ಸೇಫ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್(ಇ.ಎಸ್.ಎಸ್.) ಮತ್ತು ಕೋಸ್ಟಿಂಗ್ ರೆಗೆನ್ ಹೊಂದಿದ್ದು ಇದು ರೇಂಜ್ ಅನ್ನು ಶೇ.7ರವರೆಗೆ ಸುಧಾರಿಸುತ್ತದೆ. ಬಳಕೆದಾರರು ಏಥರ್ ಗ್ರಿಡ್ ಫಾಸ್ಟ್ ಚಾರ್ಜರ್ ಗಳನ್ನು 450ಎಸ್ ಅನ್ನು ನಿಮಿಷಕ್ಕೆ 1.5 ಕಿ.ಮೀ.ವರೆಗೆ ವೇಗದಲ್ಲಿ ಚಾರ್ಜ್ ಮಾಡಬಹುದು. ಪ್ರಸ್ತುತದ ಮಾದರಿ 450ಎಕ್ಸ್ ಒಟ್ಟಾರೆ ಎಲ್ಲ ಈ ಅಪ್ಗ್ರೇಡ್ ಗಳನ್ನು ಹೊಂದಿದೆ ಮತ್ತು ಈಗ 115 ಕಿ.ಮೀ. ಮತ್ತು 145 ಕಿ.ಮೀ. ರೇಂಜ್ ವೇರಿಯೆಂಟ್ ಗಳಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶದೊಂದಿಗೆ ಬಂದಿದೆ. 450ಎಸ್ ಮತ್ತು 450ಎಕ್ಸ್ ಎರಡರ ಬಳಕೆದಾರರಿಗೂ ಈ ಕೋರ್ ಕಾನ್ಫಿಗರೇಷನ್ ಮೇಲೆ ಪ್ರೊ ಪ್ಯಾಕ್ ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದು ಅದು ರೈಡ್ ಅಸಿಸ್ಟ್, ಏಥರ್ ಬ್ಯಾಟರಿ ಪ್ರೊಟೆಕ್ಟ್, ಏಥರ್ ಸ್ಟಾಕ್ ಅಪ್ಡೇಟ್ಸ್, ಮತ್ತು ಏಥರ್ ಕನೆಕ್ಟ್(3ವೈಗೆ ಉಚಿತ) ನೀಡುತ್ತದೆ.

ಏಥರ್ ಎನರ್ಜಿಯ ಸಹ-ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ, “ನಮ್ಮ ನವೀಕರಿಸಿದ ಪೋರ್ಟ್ ಫೋಲಿಯೊ ಇಂದು ಬಿಡುಗಡೆ ಮಾಡುವ ಮೂಲಕ ನಮ್ಮಲ್ಲಿ 450 ಪ್ಲಾಟ್ ಫಾರಂನಲ್ಲಿ ವಿವಿಧ ಬೆಲೆಯ ವರ್ಗಗಳಲ್ಲಿ ಮೂರು ಉತ್ಪನ್ನಗಳಿವೆ. ಇದು ನಮಗೆ ಹೆಚ್ಚಿನ ಪ್ರಮಾಣದ ಖರೀದಿದಾರರನ್ನು ತಲುಪಲು ಅವಕಾಶ ನೀಡಿದೆ. ನಮ್ಮ ಹೊಚ್ಚಹೊಸಪ್ರವೇಶ ಹಂತದ ವೇರಿಯೆಂಟ್- 450ಎಸ್ 125ಸಿಸಿ ಪರ್ಫಾರ್ಮೆನ್ಸ್ ಸ್ಕೂಟರ್ ವಲಯದಲ್ಲಿ ಹೊಸ ಎತ್ತರ ಸಾಧಿಸಿದ್ದು ವಿನೂತನ ಬಗೆಯ ಡೀಪ್ ವ್ಯೂ ಡಿಸ್ಪ್ಲೇ ಡ್ಯಾಶ್ ಬೋರ್ಡ್ ಮತ್ತು ಹಿಂದೆಂದೂ ಕಾಣದ ಅಸಂಖ್ಯ ಆವಿಷ್ಕಾರಕ ಫೀಚರ್ ಗಳನ್ನು ಹೊಂದಿದೆ. 450ಎಸ್ ರೈಡಿಂಗ್ ಸಂತೋಷ ಮತ್ತು ಸುರಕ್ಷತೆಯಲ್ಲಿ ಹೊಸ ಮಾನದಂಡ ಸೃಷ್ಟಿಸಿದೆ. 450ಎಸ್ ಎಲೆಕ್ಟ್ರಿಕ್ ವಲಯಕ್ಕೆ ಪ್ರವೇಶ ಪಡೆಯಲು ಬಯಸುವ ಗುಣಮಟ್ಟ ಹಾಗೂ ಭರವಸೆ ನಿರೀಕ್ಷಿಸುವ ಎಲ್ಲರಿಗೂ ಲಭ್ಯವಿರುವ ಬೆಲೆಗಳನ್ನು ಏಥರ್ ಸ್ಕೂಟರ್ ಗಳು ನೀಡುತ್ತವೆ. 450ಎಸ್ ನೊಂದಿಗೆ ನಾವು 450ಎಕ್ಸ್ ಅನ್ನು 3 ಕೆಡಬ್ಲ್ಯೂಎಚ್ ಮತ್ತು 4ಕೆಡಬ್ಲ್ಯೂಎಚ್ ಸಾಮರ್ಥ್ಯದಲ್ಲಿ ಪರಿಚಯಸಿದ್ದು ಇದು ನಮ್ಮ ಗ್ರಾಹಕರಗೆ ನಮ್ಮ ಅತ್ಯುತ್ತಮ ಮಾರಾಟದ ಸ್ಕೂಟರ್ ಪ್ಲಾಟ್ ಫಾರಂನಲ್ಲಿ ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ” ಎಂದರು.

7” ಡೀಪ್ ವ್ಯೂ ಡಿಸ್ಪ್ಲೇ 1000:1 ಕಾಂಟ್ರಾಸ್ಟ್ ಅನುಪಾತ, ಉದ್ಯಮದ ಪ್ರಥಮ ಆಟೊ-ಬ್ರೈಟ್ ನೆಸ್ ಮತ್ತು 18 ವರ್ಗದ ಗುಣಗಳು ದಿನದ ಯಾವುದೇ ಸಮಯದಲ್ಲಿ ಉನ್ನತ ರೈಡಬಿಲಿಟಿ ನೀಡುತ್ತದೆ. ಡೀಪ್ ವ್ಯೂ ಡಿಸ್ಪ್ಲೇಯಲ್ಲಿನ ಆನ್-ಬೋರ್ಡ್ ನ್ಯಾವಿಗೇಷನ್ 18+ ದಿಕ್ಕುಗಳ ಸಾಧ್ಯತೆಗಳನ್ನು ನೀಡುತ್ತದೆ ಅಂದರೆ ಬಳಕೆದಾರರು ಸಂಕೀರ್ಣ 8-ವೇ ರೌಂಡ್ ಅಬೌಟ್ ಮೂಲಕ ಸಾಗಬಹುದು. ಡೀಪ್ ವ್ಯೂ ಡಿಸ್ಪ್ಲೇ  ಹೊಸದಾಗಿ ವಿನ್ಯಾಸಗೊಳಿಸಿದ ಸ್ವಿಚ್ ಗೇರ್ ನೊಂದಿಗೆ ವಿನೂತನ ಬಗೆಯ ಸಂವಹನ ಅನುಭವ ನೀಡುತ್ತಿದ್ದು ಇದು ಪ್ರಸ್ತುತ ಡಿಜಿಟಲ್ ಡಿಸ್ಪ್ಲೇಗಳಲ್ಲಿ ಲಭ್ಯವಿರಲಿಲ್ಲ.

450ಎಸ್ ಮತ್ತು 450ಎಕ್ಸ್ ಎರಡೂ ಹೊಸ ಸ್ವಿಚ್ ಗೇರ್ ನೊಂದಿಗೆ ಬಂದಿದ್ದು ಸುಧಾರಿತ ಸುಧಾರಿತ ಟ್ಯಾಕ್ಟೈಲ್ ಫೀಲ್ ಮತ್ತು ಎರಡು ಹೊಸ ಸ್ವಿಚ್ ಸೇರ್ಪಡೆ, ಒನ್-ಕ್ಲಿಕ್ ರಿವರ್ಸ್ ಮತ್ತು ಜಾಯ ಸ್ಟಿಕ್ ನೊಂದಿಗೆ ಬಂದಿದೆ. ಒನ್-ಕ್ಲಿಕ್ ರಿವರ್ಸ್ ತಡೆರಹಿತ ರಿವರ್ಸ್ ಅನುಭವ ನೀಡುತ್ತದೆ ಮತ್ತು ಜಾಯ್ ಸ್ಟಿಕ್ 450ಎಸ್ ನಲ್ಲಿ ಹಲವು ಸಂವಹನಗಳನ್ನು ಸಾಧ್ಯವಾಗಿಸುತ್ತದೆ ಮತ್ತು 450ಎಕ್ಸ್ ನಲ್ಲಿ ಸುಧಾರಿತ ಇನ್-ರೈಡ್ ಸಂವಹನಗಳನ್ನು ನೀಡುತ್ತದೆ.

ಹೊಸ ಫಾಲ್ ಸೇಫ್ ಫೀಚರ್ ಈಗ ಎಲ್ಲ ಮಾದರಿಗಳಲ್ಲೂ ಲಭ್ಯವಿದ್ದು ಅದು ರೈಡರ್ ಬೀಳುವ ಸಂದರ್ಭದಲ್ಲಿ ಸ್ಕೂಟರ್ ವೇಗ, ಓರಿಯೆಂಟೇಷನ್ ಮತ್ತು ಆಕ್ಸಲರೇಷನ್ ಬದಲಾವಣೆಗಳನ್ನು ಪತ್ತೆ ಮಾಡುತ್ತದೆ. ಈ ವಿಶೇಷತೆಯು ಮೋಟಾರ್ ಆಫ್ ಮಾಡುತ್ತದೆ(ಸ್ಕಿಡ್ ಆಗುವಂತ ಚಲನೆ ತಪ್ಪಿಸಲು) ಮತ್ತು ಫ್ಲಾಶಿಂಗ್ ಇಂಡಿಕೇಟರ್ ಲೈಟ್ ಗಳನ್ನು ಸಕ್ರಿಯಗೊಳಿಸಿ ಸುತ್ತಮುತ್ತಲೂ ಇರುವವರಿಗೆ ರೈಡರ್ ರಕ್ಷಿಸಲು ಸೂಚನೆ ನೀಡುತ್ತದೆ. ಅಲ್ಲದೆ ಏಥರ್ ಯೂರೋಪ್ ನಲ್ಲಿ ಕಾನೂನಿನಂತೆ ಹೊಸ `ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್’ ತರುತ್ತದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ ಮೊಟ್ಟಮೊದಲ ಬಾರಿಗೆ ಪರಿಚಯಿಸಲಾಗಿದೆ. ಈ ವಿಶೇಷತೆಯನ್ನು ಪ್ಯಾನಿಕ್-ಬ್ರೇಕಿಂಗ್ ಸನ್ನಿವೇಶಗಳಲ್ಲಿ ಅಪಘಾತಗಳು/ಕ್ರಾಶ್ ಗಳನ್ನು ತಪ್ಪಿಸಲು ವಿನ್ಯಾಸಗೊಳಿಸಲಾಗಿದೆ. ಏಥರ್ ಬಳಕೆದಾರ ಗಂಟೆಗೆ 50 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಪ್ಯಾನಿಕ್ ಬ್ರೇಕ್ ಹಾಕಿದಾಗ ಬ್ರೇಕ್ ಲೈಟ್ ಗಳು ಮಿನುಗುವ ಮೂಲಕ ರೈಡರ್ ಗಳಿಗೆ ಕಾಣುವಂತೆ ಕ್ಯೂ/ಎಚ್ಚರಿಕೆ ನೀಡಿ ಅವರಿಗೆ ಪ್ರತಿಕ್ರಿಯಿಸಲು ಹೆಚ್ಚುವರಿ ಅಮೂಲ್ಯ ಸಮಯ ನೀಡುತ್ತದೆ.

ಅಲ್ಲದೆ ಬ್ಯಾಟರಿ ರೇಂಜ್ ಸುಧಾರಿಸಲು 450ಎಸ್ ಕೋಸ್ಟಿಂಗ್ ರಿಜೆನ್ ಫೀಚರ್ ನೊಂದಿಗೆ ಬಂದಿದ್ದು ಅದು ಸ್ಟೆಡಿ ಕೋಸ್ಟ್ ನಲ್ಲಿ (ಆಕ್ಸಲರೇಷನ್ ಮತ್ತು ಮ್ಯಾನ್ಯುಯಲ್ ಬ್ರೇಕಿಂಗ್ ಇಲ್ಲದಾಗ)ವಾಹನವನ್ನು ನಿಧಾನಗೊಳಿಸುತ್ತದೆ ಮತ್ತು ಬ್ಯಾಟರಿಯಯಲ್ಲಿ ಶಕ್ತಿಯನ್ನು ಮರು ಬಳಕೆ ಮಾಡುತ್ತದೆ. ಏಥರ್ ಈ ವಿಶೇಷತೆಯನ್ನು ಚಲನಶೀಲವಾಗಿ ಅನುಷ್ಠಾನಗೊಳಿಸಿದ್ದು ಇದು ಕಡಿಮೆ ವೇಗದಲ್ಲಿ ಕಡಿಮೆ ರಿಜೆನ್ ಇರುವಂತೆ ಮಾಡುತ್ತದೆ, ಇದರಿಂದ ಜನರು ಟ್ರಾಫಿಕ್ ಇರುವಾಗ ಸುಲಭವಾಗಿ ಮುನ್ನುಗ್ಗಲು ಮತ್ತು ಹೆಚ್ಚಿನ ವೇಗದಲ್ಲಿ ಕಡಿಮೆ ಬ್ರೇಕ್ ಬಳಕೆ ಮತ್ತು ಸುಧಾರಿಸಿದ ದಕ್ಷತೆ ನೀಡುತ್ತದೆ. ಈ ಸುಧಾರಣೆಗಳು ಬ್ರೇಕ್ ಪ್ಯಾಡ್ ಹರಿಯುವುದನ್ನು ಕಡಿಮೆ ಮಾಡುತ್ತದೆ ಮತ್ತು ಮೋಡ್ ಆಧರಿಸಿ ಶೇ.7ರವರೆಗೆ ಸುಧಾರಿತ ರೇಂಜ್ ನೀಡುತ್ತದೆ. ಉದ್ಯಮದಲ್ಲಿ ಮೊಟ್ಟಮೊದಲ ಬಾರಿಗೆ ಹೊಸ ಇನ್ ಬಾಕ್ಸ್-ಟು-ಸ್ಕೂಟರ್ ವಿಶೇಷತೆಯು ಇತರೆ ಆಪ್ ಗಳಿಂದ ತಲುಪುವ ತಾಣಗಳ ವಿಳಾಸವನ್ನು(ವಾಟ್ಸಾಪ್/ಟೆಲಿಗ್ರಾಂ/ಇನ್ಸ್ ಟಾಗ್ರಾಂ ಡಿಎಂ ಇತ್ಯಾದಿ) ನೇರವಾಗಿ ಏಥರ್ ಡ್ಯಾಶ್ ಬೋರ್ಡ್ ಗೆ ನೀಡುತ್ತದೆ. ಈ ಫೀಚರ್ ಸಕ್ರಿಯಗೊಳಿಸಲು ಏಥರ್ ಆಪ್ ಅನುಸ್ಥಾಪನೆಗೊಂಡಿರಬೇಕು ಮತ್ತು ಗೂಗಲ್ ಮ್ಯಾಪ್ ಲಿಂಕ್ ನಿಂದ ಲೊಕೇಷನ್ ಶೇರ್ ಆಗಿರಬೇಕು.

ಅಪ್ಡೇಟ್ ಆಗಿರುವ ಟ್ರಿಪ್ ಪ್ಲಾನರ್ ಮಾರ್ಗದ ಕುರಿತು ಉತ್ತಮ ಸಲಹೆ ನೀಡುವುದರೊಂದಿಗೆ ಏಥರ್ ಗ್ರಿಡ್ ಚಾರ್ಜರ್ ಗಳ ಮ್ಯಾಪ್ ನೀಡುವ ಮೂಲಕ ರೈಡರ್ ಗಳಿಗೆ ಅವರ ಆಯ್ಕೆಯ ಏಥರ್ ಗ್ರಿಡ್ ಚಾರ್ಜರ್ ಆಯ್ಕೆ ಮಾಡಿಕೊಳ್ಳುವ ಮತ್ತು ನಿಮ್ಮ ಆದ್ಯತೆಯ ಚಾರ್ಜರ್ ಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಟ್ರಿಪ್ ಯೋಜಿಸಲು ಅವಕಾಶ ನೀಡುತ್ತದೆ. ಕೆಲ ಪ್ರದೇಶಗಳಲ್ಲಿ ಟ್ರಿಪ್ ಪ್ಲಾನರ್ ಗಳು ಈಗ ಸೂಕ್ತವಾದ ಏಥರ್ ಗ್ರಿಡ್ ಚಾರ್ಜರ್ ಗಳನ್ನು ಇಂಟರ್ ಸಿಟಿ ಟ್ರಿಪ್ ಗಳಿಗೆ ಕೂಡಾ ಸಲಹೆ ಮಾಡುತ್ತವೆ. ಏಥರ್ 1400+ ಪಬ್ಲಿಕ್ ಚಾರ್ಜರ್ ಗಳನ್ನು ದೇಶಾದ್ಯಂತ ಅಳವಡಿಸಿದ್ದು ಅದರಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳೂ ಒಳಗೊಂಡಿವೆ.

ಏಥರ್ ಧೂಳಿನ ಮತ್ತು ಕೆಸರಿನ ರಸ್ತೆಗಳಲ್ಲಿ ಸಂಚರಿಸುವಾಗ ಹಿಂಬದಿಯ ಪ್ರಯಾಣಿಕರಿಗೆ ಕೆಸರು ಬೀಳದಂತೆ ಹಿಂಬದಿಯ ಮಡ್ ಫ್ಲಾಪ್ ವಿನ್ಯಾಸದಲ್ಲಿ ಬದಲಾವಣೆ ಮಾಡಿದೆ. ಇದು ಹಿಂಬದಿಯ ಮಾನೊ-ಶಾಕ್ ಮತ್ತು ಬ್ರೇಕ್ ಕ್ಯಾಲಿಪರ್ಸ್ ಗೆ ಕೆಸರಿನಲ್ಲಿ ಹೆಚ್ಚುವರಿ ರಕ್ಷಣೆ ಕೂಡಾ ನೀಡುತ್ತದೆ.

ಎಕ್ಸ್-ಶೋರೂಂ ಬೆಲೆಗಳಲ್ಲಿ ಫೇಮ್ II ಮತ್ತು ರಾಜ್ಯದ ಸಬ್ಸಿಡಿ ಒಳಗೊಂಡಿವೆ.*ದಯವಿಟ್ಟು ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಎಂಬುದನ್ನು ಗಮನಿಸಿ

*ದಯವಿಟ್ಟು ಎಲ್ಲಾ ಬೆಲೆಗಳು ಪ್ರೊ-ಪ್ಯಾಕ್ ಇಲ್ಲದೆ ಇವೆ ಎಂಬುದನ್ನು ಗಮನಿಸಿ

ಹಲವಾರು ವಿಶೇಷತೆಗಳನ್ನು ಹೊಂದಿರುವ ಪ್ರೊ ಪ್ಯಾಕ್ 450ಎಸ್ ಗೆ ರೂ.14,000 ಬೆಲೆ ಹೊಂದಿದೆ, 450ಎಕ್ಸ್ ಗೆ 2ಕೆಡಬ್ಲ್ಯೂಎಚ್ ಬ್ಯಾಟರಿಯೊಂದಿಗೆ ರೂ.16,000 ಮತ್ತು 450ಗೆ 3.7 ಕೆಡಬ್ಲ್ಯೂಎಚ್ ಬ್ಯಾಟರಿಯೊಂದಿಗೆ ರೂ.23,000 ಬೆಲೆ ಹೊಂದಿದೆ. ಡೆಲಿವರಿಗಳು ಹಂತ ಹಂತವಾಗಿ ಪ್ರಾರಂಭಗೊಳ್ಳಲಿದ್ದು 450ಎಕ್ಸ್, 2.9ಕೆಡಬ್ಲ್ಯೂಎಚ್ ಬ್ಯಾಟರಿಯೊಂದಿಗೆ ಆಗಸ್ಟ್ ಮೂರನೇ ವಾರ ಮತ್ತು 450ಎಸ್ ಆಗಸ್ಟ್ ಕೊನೆಯ ವಾರದಲ್ಲಿ ಮತ್ತು 450ಎಕ್ಸ್, 3.7ಕೆಬ್ಲ್ಯೂಎಚ್ ಬ್ಯಾಟರಿ ಹೊಂದಿರುವುದು ಅಕ್ಟೋಬರ್ ನಲ್ಲಿ ಡೆಲಿವರಿಯಾಗಲಿವೆ.