ಸ್ತನಗಳು ಮಹಿಳೆಯರ ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಕೆಲವು ಮಹಿಳೆಯರಲ್ಲಿ ಸ್ತನಗಳ ಗಾತ್ರ ಚಿಕ್ಕದಾಗಿರುತ್ತದೆ. ಇದರಿಂದ ಅವರ ದೇಹದ ಸೌಂದರ್ಯ ಕೂಡ ಕೆಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯರು ತಮ್ಮ ಸ್ತನಗಳ ಗಾತ್ರವನ್ನು ಹೆಚ್ಚಿಸಲು ಸರ್ಜರಿ, ಇನ್ಜೆಕ್ಷನ್ ಅಥವಾ ಔಷಧಿಗಳನ್ನು ಬಳಸುವುದುಂಟು. ಆದರೆ, ಕೆಲವು ಮಹಿಳೆಯರು ಸ್ತನಗಳ ಗಾತ್ರವನ್ನು ಹೆಚ್ಚಿಸಲು ಮನೆಮದ್ದುಗಳನ್ನು ಸಹ ಪ್ರಯತ್ನಿಸುತ್ತಾರೆ. ಅದಕ್ಕಾಗಿ ಕೆಲವರು ಸ್ತನಗಳ ಗಾತ್ರವನ್ನು ಹೆಚ್ಚಿಸಲು ಮೆಂತ್ಯ ಬೀಜಗಳನ್ನು ಸೇವಿಸುತ್ತಾರೆ. ಆದರೆ, ಮೆಂತ್ಯ ಬೀಜಗಳನ್ನು (Benefits of Fenugreek Seeds) ತಿನ್ನುವುದು ನಿಜವಾಗಿಯೂ ಸ್ತನಗಳ ಗಾತ್ರವನ್ನು ಹೆಚ್ಚಿಸುತ್ತದೆಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಅಧ್ಯಯನ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.
ಮೆಂತ್ಯ ಬೀಜಗಳನ್ನು ತಿನ್ನುವುದು ಸ್ತನಗಳ ಗಾತ್ರವನ್ನು ಹೆಚ್ಚಿಸುತ್ತದೆಯೇ? ತಜ್ಞರ ಅಭಿಪ್ರಾಯ:
ಆಯುರ್ವೇದದ ಪ್ರಕಾರ, ಮೆಂತ್ಯ ಬೀಜಗಳನ್ನು ಸೇವಿಸುವುದರಿಂದ ಸ್ತನಗಳ ಗಾತ್ರ ಬದಲಾಗುವುದಿಲ್ಲ. ಮೆಂತ್ಯ ಬೀಜಗಳನ್ನು ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಬಳಸಲಾಗುತ್ತದೆ. ಹೀಗಿರುವಾಗ ಸ್ತನಗಳ ಗಾತ್ರವನ್ನು ಹೆಚ್ಚಿಸಲು ಮೆಂತ್ಯ ಬೀಜಗಳನ್ನು ಸೇವಿಸುವುದು ಸರಿಯಲ್ಲ ಎನ್ನಲಾಗುತ್ತದೆ.
ಸ್ತ್ರೀರೋಗ ತಜ್ಞರ ಪ್ರಕಾರ, ಮೆಂತ್ಯ ಬೀಜಗಳನ್ನು ತಿನ್ನುವುದು ಸ್ತನಗಳ ಗಾತ್ರವನ್ನು ಹೆಚ್ಚಿಸುತ್ತದೆ ಎಂಬ ಅಂಶವನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಮೆಂತ್ಯವು ಫೈಟೊ ಈಸ್ಟ್ರೊಜೆನ್ ಅನ್ನು ಹೊಂದಿರುತ್ತದೆ. ಇದು ಈಸ್ಟ್ರೊಜೆನ್ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಆದರೆ ಸ್ತನ ಅಂಗಾಂಶದ ಮೇಲೆ ಮೆಂತ್ಯಬೀಜಗಳು ಪರಿಣಾಮ ಬೀರುತ್ತವೆಯೇ? ಇಲ್ಲವೇ ಎಂಬುದಕ್ಕೆ ಇನ್ನೂ ಸಂಶೋಧನೆ ಮಾಡುವ ಅಗತ್ಯವಿದೆ. ಸ್ತನಗಳ ಆಕಾರವು ಮಹಿಳೆಯರಿಗೆ ಮುಖ್ಯವಾಗಿ ಆನುವಂಶಿಕವಾಗಿ ಬರುತ್ತದೆ. ಇದಲ್ಲದೆ, ದೇಹದಲ್ಲಿರುವ ಹಾರ್ಮೋನ್ ಮಟ್ಟಗಳು ಮತ್ತು ಕೊಬ್ಬುಗಳ ಆಧಾರದ ಮೇಲೆ ಸ್ತನಗಳ ಆಕಾರದಲ್ಲಿ ಬದಲಾವಣೆಯಾಗುತ್ತದೆ. ಆದರೆ ಮೆಂತ್ಯದಂತಹ ಮನೆಮದ್ದುಗಳಿಂದ ಸ್ತನಗಳ ಗಾತ್ರವನ್ನು ಹೆಚ್ಚಾಗುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಮೆಂತ್ಯ ಬೀಜಗಳನ್ನು ತಿನ್ನುವುದು ಸ್ತನಗಳ ಗಾತ್ರವನ್ನು ಹೆಚ್ಚಿಸುತ್ತದೆಯೇ? ಅಧ್ಯಯನ ಏನು ಹೇಳುತ್ತದೆ?
ಕೆಲವು ಅಧ್ಯಯನಗಳ ಪ್ರಕಾರ, ಮೆಂತ್ಯ ಬೀಜಗಳನ್ನು ಸೇವಿಸುವುದರಿಂದ ಸ್ತನಗಳ ಗಾತ್ರ ಹೆಚ್ಚಾಗುವುದಿಲ್ಲ. ಆದರೆ ಮೆಂತ್ಯ ಬೀಜಗಳು ಈಸ್ಟ್ರೊಜೆನಿಕ್ ಗುಣಲಕ್ಷಣಗಳನ್ನು ಹೊಂದಿವೆ ಎಂದು ಇತರ ಕೆಲವು ಅಧ್ಯಯನಗಳು ತೋರಿಸುತ್ತವೆ. ಇದು ಸ್ತನದ ಗಾತ್ರವನ್ನು ಹೆಚ್ಚಿಸುತ್ತದೆ. ಆದರೆ ಮೆಂತ್ಯ ಬೀಜಗಳು ಮತ್ತು ಸ್ತನಗಳ ಗಾತ್ರಕ್ಕೆ ಸಂಬಂಧಿಸಿದಂತೆ ನಡೆಸಿದ ಅಧ್ಯಯನದಲ್ಲಿ ಯಾವುದೇ ಫಲಿತಾಂಶ ಸಿಗಲಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ʼನಿನ್ನೇ ಪ್ರೀತಿಸುವೆʼ ಎಂದು 52 ವರ್ಷದ ಪ್ರೊಫೆಸರ್ ಅನ್ನು ಮದುವೆಯಾದ 20 ವರ್ಷದ ವಿದ್ಯಾರ್ಥಿನಿ!
ಸಂಶೋಧನೆಯ ಪ್ರಕಾರ, ಮೆಂತ್ಯ ಬೀಜಗಳನ್ನು ಸೇವಿಸುವುದರಿಂದ ಸ್ತನಗಳ ಆಕಾರ ಬದಲಾಗುವುದಿಲ್ಲ. ಆದರೆ, ಮೆಂತ್ಯ ಬೀಜಗಳನ್ನು ತಿನ್ನುವುದು ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮಹಿಳೆಯ ಸ್ತನಗಳಲ್ಲಿ ಕಡಿಮೆ ಹಾಲು ಇದ್ದರೆ, ಅವಳು ಮೆಂತ್ಯ ಬೀಜಗಳನ್ನು ಸೇವಿಸಬಹುದು. ಮೆಂತ್ಯ ಬೀಜಗಳು ಸ್ತನಗಳಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.