ಮುಂಬೈ: ಕೇರಳ ಸಿಪಿಎಂ ನಾಯಕ ದಿವಂಗತ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೋಯ್ ಕೊಡಿಯೇರಿ ಅವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.
ವರದಿಗಳ ಪ್ರಕಾರ ₹ 80 ಲಕ್ಷ ಪಾವತಿಸುವುದಾಗಿ ಬಿನೋಯ್ ದೂರುದಾರೆಯೊಂದಿಗೆ ರಾಜಿ ಮಾಡಿಕೊಂಡ ಬಳಿಕ ಎಫ್‌ಐಆರ್ ರದ್ದುಗೊಳಿಸಲಾಗಿದೆ.
ಸೆ. 27ರಂದು ರಾಜಿ ನಡೆದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ನ್ಯಾಯಮೂರ್ತಿ ಗಳಾದ ರೇವತಿ ಮೋಹಿತೆ ದೆರೆ ಮತ್ತು ಎಸ್ ಎಂ ಮೋದಕ್ ಅವರಿದ್ದ ಪೀಠ ಪ್ರಕರಣ ರದ್ದುಗೊಳಿಸಿತು. ನ್ಯಾಯಾಲಯದ ವಿವರವಾದ ಆದೇಶದ ಪ್ರತಿ ಇನ್ನಷ್ಟೇ ದೊರೆಯ ಬೇಕಿದೆ.
ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿ ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸ ಲಾಗಿದೆ ಎಂದು ಆರೋಪಿಸಿ 32 ವರ್ಷದ ಮಹಿಳೆಯೊಬ್ಬರು ತನ್ನ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸಲು ಕೋರಿ ಬಿನೋಯ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮ್ಮಿಬ್ಬರಿಗೂ ಮಗು ಇದೆ ಎಂದು ಫಿರ್ಯಾದಿ ಮಹಿಳೆ ಹೇಳಿಕೊಂಡಿದ್ದರು.
ಬಿನೋಯ್ ಈಗಾಗಲೇ ಮದುವೆಯಾಗಿದ್ದು ತನ್ನನ್ನು ಮತ್ತು ತನ್ನ ಮಗುವನ್ನು ತೊರೆದ ಹಿನ್ನೆಲೆಯಲ್ಲಿ ದೂರುದಾರೆ 2018ರಲ್ಲಿ ಮುಂಬೈ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. 2020ರಲ್ಲಿ ಪೊಲೀಸರು ಬಿನೋಯ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಒಂದು ತಿಂಗಳ ಬಳಿಕ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ ಕಕ್ಷಿದಾರರಿಬ್ಬರೂ ರಾಜಿಗೆ ಯತ್ನಿಸುತ್ತಿರು ವುದರಿಂದ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಲಾಯಿತು. ಎಫ್‌ಐಆರ್ ರದ್ದುಗೊಳಿಸಲು ದೂರುದಾರೆ ಸಮ್ಮತಿ ಕೂಡ ನೀಡಿದರು. ಅದರಂತೆ ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್ ಬಿನೋಯ್ ವಿರುದ್ಧದ ಆರೋಪಪಟ್ಟಿಯನ್ನು ರದ್ದುಗೊಳಿಸಿದೆ.