Sunday, 13th October 2024

ಆನ್‍ಲೈನ್ ಗೇಮ್ಸ್’ಗಳ ಪರಿಸರ ವ್ಯವಸ್ಥೆ ಮೇಲೆ ಬೆಳಕು ಚೆಲ್ಲುವ ಅಗತ್ಯವಿದೆ: ಬಿರೇನ್ ಘೋಷ್

ನವದೆಹಲಿ: ಎಬಿಎಐ(ದಿ ಅಸೋಸಿಯೇಷನ್ ಫಾರ್ ದಿ ಕ್ರಿಯೇಟಿವ್ ಇಂಡಸ್ಟ್ರೀಸ್)ನ ಅಧ್ಯಕ್ಷರು ಮತ್ತು ಕರ್ನಾಟಕ ಡಿಜಿಟಲ್ ಕಲಾ ಕ್ಷೇತ್ರದಲ್ಲಿನ ಚಿಂತನಾ ನಾಯಕರು ಮತ್ತು ಎನಿಮೇಷನ್ ಹಾಗೂ ವಿಎಫ್‍ಎಕ್ಸ್ ಸೇವೆಗಳ ವ್ಯವಹಾರದಲ್ಲಿ ನಾಯಕರಾದ ಬಿರೇನ್ ಘೋಷ್ ಅವರಿಗೆ ಆನ್‍ಲೈನ್ ಗೇಮ್‍ಗಳಲ್ಲಿ ಇರುವ ಪ್ರವರ್ಧಮಾನಕ್ಕೆ ಬರುತ್ತಿರುವಂತಹ ಅವಕಾಶಗಳ ಸುತ್ತಲಿನ ಹಲವಾರು ಚಿಂತನೆಗಳನ್ನು ಕುರಿತು ಮಾರ್ಗಸೂಚಿ ಮತ್ತು ದೃಷ್ಟಿಕೋನವನ್ನು ಪೂರೈಸಲು ಕೋರಲಾಗಿತ್ತು.

ಸಿಐಐನ ಮಾಧ್ಯಮ ಮತ್ತು ಮನರಂಜನಾ ಸಮಿತಿಯ ರಾಷ್ಟ್ರೀಯ ಉಪಚೇರ್ಮನ್ ಆಗಿ ಅವರು ಈ ವಿಷಯವನ್ನು ಗಮನಿಸಿದ್ದರು. ಭಾರತದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕ್ಷೇತ್ರಕ್ಕೆ ಅವಕಾಶ ಮಾಡಿಕೊಡುವ ವಾತಾವರಣವನ್ನು ಪೂರೈಸಲು ಸರ್ಕಾರದೊಂದಿಗೆ ಕೈಗಾರಿಕೆ ತೊಡಗಿಸಿಕೊಳ್ಳುವುದನ್ನು ಕುರಿತ ಕೆಲವು ಚಿಂತನೆಗಳು ಇಲ್ಲಿವೆ.

ಆನ್‍ಲೈನ್ ಗೇಮ್ಸ್‍ಗಳ ಪರಿಸರ ವ್ಯವಸ್ಥೆಯ ಮೇಲೆ ಕರ್ನಾಟಕ ಹೊಳೆಯುವ ಬೆಳಕು ಚೆಲ್ಲುವ ಅಗತ್ಯವಿದೆ. ಭಾರತೀಯ ಆರ್ಥಿಕ ಸ್ಥಿತಿಯಲ್ಲಿ 21ನೇ ಶತ ಮಾನದ ಅತ್ಯಂತ ದೊಡ್ಡ ಮನರಂಜನಾ ಕ್ಷೇತ್ರವಾಗಲಿರುವ ಉದ್ಯಮಕ್ಕೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಸುಮಾರು 100 ನವೋದ್ಯಮಗಳು ಚಾಲನೆ ನೀಡುವ ಅಗತ್ಯವಿದೆ. ಜಿಗಿಯುತ್ತಿರುವ ಮೂಲಸೌಕರ್ಯ 5ಜಿ ಆಗಮನವನ್ನು ನಿರ್ಬಂಧಿಸುತ್ತದೆ. ಸುಮಾರು 400 ದಶಲಕ್ಷ ಆಟಗಾರರನ್ನು ಹೊಂದಿರುವ ನಮ್ಮ ದೇಶದಲ್ಲಿ ಸ್ಮಾರ್ಟ್‍ಫೋನ್‍ಗಳು ಆನ್‍ಲೈನ್ ಗೇಮ್‍ಗಳನ್ನು, ದೇಶದಲ್ಲಿ ಹರಡುತ್ತಿರುವ ಬಿ2ಸಿ ಕ್ರಾಂತಿಯಾಗಿ ಮಾಡಿವೆ.

ಈ ಅಸಾಧಾರಣವಾದ ಗೇಮ್ಸ್ ವಿದ್ಯಮಾನ ಈಗಾಗಲೇ 10,000 ಕೋಟಿ ರೂ.ಗಳ(1.35 ಶತಕೋಟಿ ಅಮೇರಿಕನ್ ಡಾಲರ್) ಮೌಲ್ಯದ ಕ್ಷೇತ್ರವಾಗಿದೆ [ಮೂಲ: ಕೆಪಿಎಂಜಿ]. ಈ ಕ್ಷೇತ್ರ ಚಲನಚಿತ್ರಗಳಿಗಿಂತಲೂ ಕನಿಷ್ಠ 4 ಪಟ್ಟು ಹೆಚ್ಚಿನ ವಾರ್ಷಿಕ ಬೆಳವಣಿಗೆ ಹೊಂದಿದೆ. 2028ರ ಹೊತ್ತಿಗೆ ಈ ಕ್ಷೇತ್ರ ಭಾರತದಲ್ಲಿನ ಸುಮಾರು 1 ಶತಕೋಟಿ ಸಂಖ್ಯೆಯ ಮೊಬೈಲ್ ಅವಕಾಶ ಹೊಂದಿರುವ ಹಾಗೂ ಬೆಲೆ ಕುರಿತು ಪ್ರಜ್ಞೆ ಹೊಂದಿರುವ ದಿಜಿಟಲ್ ಗ್ರಾಹಕರ ಮಹಾಧಾಮವಾಗಲಿದೆ. ಗೇಮ್ ಪ್ರಕಾಶಕರು, ವಿನ್ಯಾಸಕರು ಮತ್ತು ಅಭಿವೃದ್ಧಿದಾರರು ಭಾರತ ಮತ್ತು ಜಗತ್ತಿಗೆ ಗೇಮ್‍ಗಳನ್ನು ನಿರ್ಮಿಸಲು ಮತ್ತು ಬೇರೆ ಯಾವ ವಿಭಾಗದಲ್ಲೂ ಇಲ್ಲ ದಂತೆ ರಾಜ್ಯದ ಖಜಾನೆಗೆ ಆದಾಯ ಮತ್ತು ಲಾಭಗಳನ್ನು ತಂದುಕೊಡುವ ಅನನ್ಯ ಅವಕಾಶ ಹೊಂದಿರುತ್ತಾರೆ.

ನ್ಯಾಯಯುತ ವ್ಯವಹಾರಕ್ಕಾಗಿ ಕಡ್ಡಾಯವಾಗಿ ಕಾನೂನು ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಬೇಕಾದ ಸಮಸ್ಯೆಗಳಿವೆ. ಸಾಮಾನ್ಯ ಬಳಕೆದಾರರಿಗೆ ಸಮಾನಾವಕಾಶದ ಕ್ಷೇತ್ರದ ಮೇಲೆ ಯಾವುದೇ ಪರಿಣಾಮ ಬೀರುವಂತಹ ಯಾವುದೇ ಸೈಬರ್ ತಂತ್ರಗಳು ಇಲ್ಲದ ಖಾತ್ರಿ ಮಾಡಿಕೊಳ್ಳಲು, ತಾವು ಮತ್ತೊಬ್ಬ ಮನುಷ್ಯರೊಂದಿಗೆ ಸ್ಪರ್ಧಿಸುತ್ತಿದ್ದೇವೆ ಎಂದುಕೊಂದು ಆಟಗಾರರು ಬಾಟ್ ಆಟವಾಡಬೇಕಾಗುವಂತಹ ಪರಿಸ್ಥಿತಿ ಇಲ್ಲದಂತಹ ಖಾತ್ರಿ ಮಾಡಿಕೊಳ್ಳಲು ಈ ಮೇಲಿನಂತೆ ಮಾರ್ಗದರ್ಶಿ ಸೂತ್ರಗಳ ಅಗತ್ಯವಿರುತ್ತದೆ.

ಈ ಮಾಧ್ಯಮದ ತಡೆಯಲಾಗದ ಶಕ್ತಿಯನ್ನು ಅರ್ಥಮಾಡಿಕೊಂಡು ಸಂವೇದನಾಶೀಲ ಕಾನೂನು ಬರೆದು ಸಿದ್ಧಪಡಿಸುವುದು ಇಂದಿನ ಅಗತ್ಯವಾಗಿದೆ. ಡಿಜಿಟಲ್ ಮೀಡಿಯಾ ತಂತ್ರಜ್ಞಾನಗಳು, ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಎವಿಜಿಸಿ ಸಾಮಥ್ರ್ಯಗಳು ಸೇರಿದಂತೆ ಎಲ್ಲ 3 ಕ್ಷೇತ್ರಗಳಲ್ಲಿ ಅಲ್ಲದೆ, ಐಪಿಗಳ ಸೃಷ್ಟಿಗೆ ಸ್ಟಾರ್ಟ್‍ಅಪ್‍ ಗಳತ್ತ ಗಮನ ನೀಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಆನ್‍ಲೈನ್ ಗೇಮ್‍ಗಳು ಆದಾಯ, ಕೆಲಸಗಳು ಮತ್ತು ಕಾಪಿರೈಟ್ ಮಾಲೀಕತ್ವದ ಲಾಭಗಳನ್ನು ತರುತ್ತವೆ. ಈ ಎಲ್ಲಾ ಫಲಿತಾಂಶಗಳು ಕರ್ನಾಟಕ ಡಿಜಿಟಲ್ ತಾಂತ್ರಿಕ ವೇದಿಕೆಯಾಗಿ ಬೆಳೆಯಲು ನೆರವಾಗುತ್ತವೆ. ಗೇಮಿಫಿಕೇಷನ್ ಮತ್ತು ಗೇಮ್ ಇಂಜಿನ್ ತಂತ್ರಜ್ಞಾನಗಳ ಶಕ್ತಿ ಇತರೆ ಅನೇಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವುದನ್ನು ರಾಜ್ಯ ಕಾಣಲಿದೆ. ಇಸ್ಪೋಟ್ರ್ಸ್ ಮುಂದಿನ ಭದ್ರಕೋಟೆಯಾಗಲಿದ್ದು, ಈ ಕುರಿ ತಂತೆ ರಾಜ್ಯದಲ್ಲಿ ಈಗಾಗಲೇ ಕೆಲವು ದೃಢವಾದ ನವೋದ್ಯಮಗಳು ಮತ್ತು ಹೂಡಿಕೆಗಳು ಕಂಡಿವೆ.

ಈ ತಪ್ಪಾಗಿ ಅರ್ಥೈಸಿಕೊಳ್ಳಲಾಗಿರುವ ಮತ್ತು ಭವಿಷ್ಯದ ಅನಗತ್ಯವಾಗಿ ವಿವಾದಪೂರ್ಣವಾದ ಕ್ಷೇತ್ರಕ್ಕೆ ಕಾನೂನಾತ್ಮಕವಾದ ಮಂಜೂರಾತಿ ಮತ್ತು ಒಪ್ಪಿಗೆ ಗಳನ್ನು ನೀಡುವ ಸರ್ಕಾರದ ತೀರ್ಪು ಅರ್ಥ ಮತ್ತು ಸಂವೇದನೆಯನ್ನು ತರಲಿದೆ. ಆನ್‍ಲೈನ್ ಗೇಮ್‍ಗಳ ಅನೇಕ ಅಂಶಗಳಲ್ಲಿ ಸ್ಪಷ್ಟತೆ ಮತ್ತು ತಿಳುವಳಿಕೆಯನ್ನು ತರುವುದರೊಂದಿಗೆ ಸರಿಯಾದುದ್ದನ್ನು ಮಾಡಲು ಇದು ಸೂಕ್ತ ಸಮಯವಾಗಿದೆ ಎಂದು ನಾನು ಸಲಹೆ ನೀಡುತ್ತೇನೆ.

ಆನ್‍ಲೈನ್ ಗೇಮ್ಸ್ ಎಂಡ್ ಗ್ಯಾಮ್ಲಿಂಗ್ ಬಿಲ್’’ ಅನ್ನು ಕರ್ನಾಟಕ ಸರ್ಕಾರ ತುರ್ತಾಗಿ ರಚಿಸಿ ಸಿದ್ಧಪಡಿಸಬೇಕಿದೆ ಎಂದು ನಾನು ಸಲಹೆ ನೀಡುತ್ತೇನೆ. ಆನ್‍ಲೈನ್ ಗೇಮ್‍ಗಳ ಹಲವು ವಿಧಗಳಲ್ಲಿ ಮಾಡಬೇಕಾಗಿರುವುದು ಮತ್ತು ಮಾಡಬಾರದ ಅಂಶಗಳನ್ನು ಇದು ಸ್ಪಷ್ಟವಾಗಿ ಬೇರ್ಪಡಿಸಬೇಕು. ಇದರೊಂದಿಗೆ “ಅವಕಾಶ, ಕೌಶಲ್ಯ ಮತ್ತು ಜೂಜು’’ಗಳ ನಡುವೆ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಿ, ಇದಕ್ಕೆ ಸಂಬಂಧಿಸಿದಂತೆ ಅನ್ವಯವಾಗುವಂತಿದ್ದರೆ ಜೂಜು ಕುರಿತ ಅಂಶಗಳ ನಿಷೇಧವನ್ನು ಮುಂದುವರಿಸ ಬಹುದು.

ಅತ್ಯಂತ ಸರಳಮಟ್ಟದಲ್ಲಿ ಹೇಳಿದರೆ, ಈ ಆಟಗಳು ಅವಕಾಶ ನೀಡುವಂತಹ ಆಟಗಳೆಂದು ಪರಿಗಣಿಸಲಾಗಿದೆ. ಸ್ಲಾಟ್ ಗೇಮ್ಸ್’ಗಳಲ್ಲಿ ಇರುವಂತೆ ಸಂಸ್ಥೆಯ ವಿರುದ್ಧ ಆಟಗಾರ ಸ್ಪರ್ಧಿಸುತ್ತಾನೆ. ಆದರೆ, ಆಟಗಾರ ಇತರೆ ಆಟಗಾರರ ವಿರುದ್ಧ ಸ್ಪರ್ಧಿಸುತ್ತಿದ್ದರೆ, ಅದನ್ನು ಕೌಶಲ್ಯದ ಆಟ ಎಂದು ಪರಿಗಣಿಸಲಾಗುತ್ತದೆ. ಈ ಪ್ರತ್ಯೇಕ ವಿಭಾಗಗಳಲ್ಲಿ ಯಾವ ಆಟಗಳು ಬರುತ್ತವೆ ಎಂಬುದನ್ನು ಭಾರತದಲ್ಲಿನ ಹಲವಾರು ನ್ಯಾಯಾಲಯಗಳ ತೀರ್ಪುಗಳು ಸ್ಪಷ್ಟಪಡಿಸಿವೆ. ಇಲ್ಲಿ ಒಂದೆರಡು ಚರ್ಚಾರ್ಹ ಕ್ಷೇತ್ರಗಳು ಇವೆ. ಆದರೆ, ಸಂಪೂರ್ಣ ಆನ್‍ಲೈನ್ ಗೇಮ್‍ಗಳ ಕೈಗಾರಿಕೆಯನ್ನು ಒಂದೇ ಬಣ್ಣದಲ್ಲಿ ನೋಡಬೇಕು ಎಂದು ಇದರರ್ಥವಲ್ಲ. ಕರ್ನಾಟಕ ಇತರೆ ರಾಜ್ಯಗಳನ್ನು ಅನುಸರಿಸಿರುವ ಇತರೆ ಕೆಲವು ಮನರಂಜನಾ ವಿಭಾಗಗಳಂತೆ ಅಲ್ಲದೆ, ಎವಿಜಿಸಿಯಂತಹ ಕ್ಷೇತ್ರಗಳಲ್ಲಿ ನೀತಿಯ ಹಸ್ತಕ್ಷೇಪಗಳ ಮೂಲಕ ರಾಜ್ಯ ಗಮನಾರ್ಹ ಲಾಭ ಪಡೆಯಬಹುದಾಗಿದೆ.

ಜೊತೆಗೆ ಈ ಗೇಮ್‍ಗಳು ಐಪಿ ಮೂಲಕ ದೊಡ್ಡ ಅವಕಾಶದ ಕ್ಷೇತ್ರವನ್ನು ನೀಡುವುದಲ್ಲದೆ, ಗ್ರಾಹಕರಿಗೆ ನೇರವಾದ ಆದಾಯಗಳನ್ನು ನೀಡುತ್ತವೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಕರ್ನಾಟಕ ಶೇ.25ರಷ್ಟು ಆದಾಯಗಳನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾದರೆ ಭಾರತದ ಒಟ್ಟಾರೆ ಮನರಂಜನಾ ಆದಾಯ ಗಳಲ್ಲಿನ ಶೇ.5-7ರಷ್ಟನ್ನು ತನ್ನದಾಗಿಸಿಕೊಳ್ಳುವ ಸಂಭವವಿದೆ. ಇದರಲ್ಲಿ ಕೆಲವು ಯುನಿಕಾರ್ನ್ ಸ್ಟಾರ್ಟ್‍ಅಪ್‍ಗಳು ಅಂತಾರಾಷ್ಟ್ರೀಯ ಯಶಸ್ಸು ಸಾಧಿಸಿದಾಗ ಉಂಟಾಗುವ ಸಾಧ್ಯತೆಗಳು ಬೇರೆ ಇರುತ್ತವೆ. 2024-25ರ ಹೊತ್ತಿಗೆ ಭಾರತದ ಮಾಧ್ಯಮ ಮತ್ತು ಮನರಂಜನೆ ಮಾರುಕಟ್ಟೆ ಸುಮಾರು 2,500 ಶತಕೋಟಿ ರೂ.ಗಳಷ್ಟಾಗಲಿದೆ.

ಆದ್ದರಿಂದ ತಂತ್ರಜ್ಞಾನಕ್ಕೆ ಅವಕಾಶ ಮಾಡಿಕೊಡುವ ವಿಎಫ್‍ಎಕ್ಸ್ ಮತ್ತು ಎನಿಮೇಷನ್ ಹಾಗೂ ಎಕ್ಸ್‍ಆರ್ ಅಂಡ್ ಗೇಮ್‍ಗಳಂತಹ ಕ್ಷೇತ್ರಗಳಲ್ಲಿ ಕರ್ನಾಟಕ ಸೃಜನಾತ್ಮಕ ತಂತ್ರಜ್ಞಾನದ ಕೇಂದ್ರವಾಗಿ ಶೇ.20ರಿಂದ 25ರಷ್ಟು ಪಾಲಿನ ಆದಾಯವನ್ನು ತನ್ನದಾಗಿಸಬಹುದು ಎಂದರೆ ಇದು 625 ಶತಕೋಟಿ ರೂ.ಗಳಾಗ ಲಿದ್ದು, ಇದು ಪ್ರಸ್ತುತ ಗಾತ್ರಕ್ಕಿಂತಲೂ 6ರಿಂದ 7 ಪಟ್ಟು ಬೃಹತ್ ಬೆಳವಣಿಗೆಯಾಗಲಿದೆ. ಬದಲಾವಣೆಯ ವೇಗವನ್ನು ಗಮನಿಸಿದರೆ ಆರ್ಥಿಕ ನೀತಿಗಳ ಸುತ್ತಲೂ ಬಹುತೇಕ ಗಮನ ಇಂದು ಹರಿದಿದೆ. ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ಗುರಿ ಹೊಂದಿರುವ ಪ್ರತಿ ದೇಶ ಹಾಗೂ ರಾಜ್ಯ ತಮ್ಮ ಆರ್ಥಿಕ ಬೆಳವಣಿಗೆ ಸತತ ವಾಗಿ ಮುಂದುವರಿಯಲು ಈ ಸತತ ನೀತಿಗಳ ಹೊಂದಾಣಿಕೆಯನ್ನು ಕೈಗೊಳ್ಳಬೇಕಾಗುತ್ತದೆ.

ಕಾವಲು ವ್ಯವಸ್ಥೆಗಳನ್ನು ಸೃಷ್ಟಿಸಲು ಆಧುನೀಕರಣ ನಮ್ಮ ಮೇಲೆ ಒತ್ತಡ ಹೇರುತ್ತದೆ. ನಮ್ಮ ಸಾಂಸ್ಕøತಿಕ ರಚನೆ ಹಾಗೂ ನಾಗರಿಕರ ಆಸಕ್ತಿಗಳನ್ನು ಸಂರ ಕ್ಷಿಸಲು ಇದು ಅಗತ್ಯವಿರುತ್ತದೆ. ಯುವಜನರು ತಾವು ಯಾವ ರೀತಿ ಕಲಿಯುವರು, ಕೆಲಸ ಮಾಡುವರು, ವೆಚ್ಚ ಮಾಡುವರು ಮತ್ತು ತಮಗೆ ತಾವು ಮನರಂಜನೆ ಪಡೆಯುವರು ಎಂಬುದನ್ನು ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಗಳಲ್ಲಿ ಆಯ್ಕೆ ಮಾಡಿಕೊಳ್ಳುವುದರಿಂದ ಚಿಂತನೆಯ ಆರ್ಥಿಕ ಸ್ಥಿತಿಯಲ್ಲಿ ಎಲ್ಲರನ್ನು ಒಳಗೊಳ್ಳು ವಂತಹ ಮತ್ತು ವೈವಿಧ್ಯಪೂರ್ಣ ಬೆಳವಣಿಗೆಗೆ ಇದು ಅವಕಾಶ ಮಾಡಿಕೊಡಬೇಕು.

ಆನ್‍ಲೈನ್ ಗೇಮ್‍ಗಳನ್ನು ಅದ್ಭುತ ಯಶಸ್ಸು ಕಾಣುವಂತೆ ಮಾಡುವಲ್ಲಿ ಸರ್ಕಾರ, ಕೈಗಾರಿಕೆ ಮತ್ತು ಶೈಕ್ಷಣಿಕ ಕ್ಷೇತ್ರಗಳು ರಾಜ್ಯದಲ್ಲಿ ಒಟ್ಟಾಗಿ ಕೆಲಸ ಮಾಡಲಿವೆ ಎಂಬ ಆಶಾಭಾವನೆ ನನಗಿದೆ. ಇದನ್ನು ಮುಂದಿನ ಕೆಎವಿಜಿಸಿ ನೀತಿಯ ಭಾಗವಾಗಿಸಲು ನಾವು ಶ್ರಮಿಸುವೆವು. ಈ ಲೇಖನದಲ್ಲಿ ಅಭಿವ್ಯಕ್ತಿಸಲಾದ ನೋಟಗಳು ಅಥವಾ ಅಭಿಪ್ರಾಯಗಳು ವೈಯಕ್ತಿಕವಾಗಿದ್ದು, ಕೇವಲ ಈ ಲೇಖನದ ಲೇಖಕರದ್ದಾಗಿರುತ್ತವೆ. ಇವು ಅವರ ಉದ್ಯೋಗದಾತರಾದ ಟೆಕ್ನಿಕಲರ್ ಇಂಡಿಯಾವನ್ನು ಪ್ರತಿನಿಧಿಸುವುದಿಲ್ಲ.