Thursday, 12th December 2024

ರೈಲು ನಿಲ್ದಾಣಗಳ ಸ್ಫೋಟ ಬೆದರಿಕೆ: ಪೊಲೀಸ್​ ಬಿಗಿ ಬಂದೋಬಸ್ತ್​

ಉತ್ತರಾಖಂಡ: ಉತ್ತರಾಖಂಡ್ ರಾಜ್ಯದಲ್ಲಿ ಹಲವು ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ರೂರ್ಕಿ ರೈಲ್ವೆ ನಿಲ್ದಾಣದ ಸೂಪ ರಿಂಟೆಂಡೆಂಟ್‌ಗೆ ಬಂದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪತ್ರದಲ್ಲಿ ಲಕ್ಸರ್, ನಜೀಬಾಬಾದ್, ಡೆಹ್ರಾಡೂನ್, ರೂರ್ಕಿ, ರಿಷಿಕೇಶ್ ಮತ್ತು ಹರಿದ್ವಾರ ಎಂಬ ಆರು ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಪತ್ರ ಕಳುಹಿಸಿದವನು ತನ್ನನ್ನು ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹ ಮ್ಮದ್ (ಜೆಇಎಂ) ನ ಏರಿಯಾ ಕಮಾಂಡರ್ ಎಂದು ವಿವರಿಸಿದ್ದಾನೆ ಎಂದು ಉತ್ತರಾಖಂಡ್ ಡಿಜಿಪಿ ಮಾಹಿತಿ ನೀಡಿದ್ದಾರೆ.

ಕಳೆದ 20 ವರ್ಷಗಳಿಂದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಇಂತಹ ಬೆದರಿಕೆ ಪತ್ರಗಳನ್ನು ಕಳುಹಿಸುತ್ತಿದ್ದಾನೆ. ಆದರೂ ಮುನ್ನೆಚ್ಚರಿಕೆಯಾಗಿ ಎಲ್ಲೆಡೆ ಪೊಲೀಸ್​ ಬಿಗಿ ಬಂದೋಬಸ್ತ್​ ಮಾಡಲಾಗಿದೆ ಎಂದು ತಿಳಿಸಿದ್ದಾರೆ.