Thursday, 12th December 2024

ಇಂದು ಮಧ್ಯರಾತ್ರಿಯಿಂದಲೇ ಕಿಯಾ ಕ್ಯಾರೆನ್ಸ್ ಕಾರು ಬುಕಿಂಗ್ ಓಪನ್”

ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರು ತಯಾರಕಾ ಸಂಸ್ಥೆಯಾದ ಕಿಯಾ ಇಂಡಿಯಾ “ಕಿಯಾ ಕ್ಯಾರೆನ್ಸ್” ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಜನವರಿ 14ರಿಂದ ಪ್ರೀ ಲಾಂಚ್ ಬುಕ್ಕಿಂಗ್ ತೆರೆದಿದೆ.

ಕಿಯಾ ಬುಕ್ಕಿಂಗ್ ಇಂದು ಮಧ್ಯರಾತ್ರಿಯಿಂದಲೇ ತೆರಯಲಿದ್ದು, 25 ಸಾವಿರ ರೂ. ಮುಂಗಡದೊಂದಿಗಡ ಹತ್ತಿರದ ಕಿಯಾ ಡೀಲರ್‌ಶಿಪ್ ನೆಟ್‌ವರ್ಕ್ ನಲ್ಲಿಯೂ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಿಯಾ ಸಂಸ್ಥೆಯ ಸೋನೆಟ್ ಹಾಗೂ ಸೆಲ್ಟೋಸ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ನಂತರ ಕಿಯಾ ಕ್ಯಾರೆನ್ಸ್ನನ್ನು ಬಿಡುಗಡೆ ಮಾಡುತ್ತಿದೆ. ಇದು ಮೇಡ್ ಇನ್ ಇಂಡಿಯಾ ಅಡಿಯಲ್ಲಿ ತಯಾರಾದ ಕಾರಾಗಿದ್ದು 9೦ ದೇಶಗಳಿಗೆ ಈ ಕಾರನ್ನು ರಫ್ತು ಮಾಡುವ ಗುರಿ ಹೊಂದಿದೆ.

ಬುಕಿಂಗ್‌ಗಾಗಿ ವೆಬ್‌ಸೈಟ್‌ಗೆ ಭೇಟಿ‌ ನೀಡಿ–https://www.kia.com/in/buy/pre-booking.html

ಕಿಯಾ ಕ್ಯಾರೆನ್ಸ್:
ಕಿಯಾ ಕ್ಯಾರೆನ್ಸ್ 6 ಏರ್‌ ಬ್ಯಾಗ್‌ಗಳನ್ನು ಒಳಗೊಂಡಂತೆ 10ದೃಢವಾದ ಹೈ-ಸೆಕ್ಯೂರ್ ಸುರಕ್ಷತಾ ಪ್ಯಾಕೇಜ್ ಅನ್ನು ಆಯೋಜಿಸುತ್ತದೆ, ಇದು ಎಲ್ಲಾ ಐದು ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್‌ ಪ್ಲಸ್, ಐಷಾರಾಮಿ ಮತ್ತು ಐಷಾರಾಮಿ ಪ್ಲಸ್, ಟ್ರಿಮ್‌ಗಳಲ್ಲಿ ಪ್ರಮಾಣಿತವಾಗಿದೆ .‌ಈ ವಾಹನವು ಕಿಯಾ ಕನೆಕ್ಟ್‌ ಮೂಲಕ 66 ಕನೆಕ್ಟೆಡ್ ವೈಶಿಷ್ಟ್ಯದೊಂದಿಗೆ ಸುಧಾರಿತ ಸಂಪರ್ಕವನ್ನು ಹೊಂದಿದೆ.

ಪವರ್ ಟ್ರೈನ್‌ಗಳು, ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಅದರ ವರ್ಗದಲ್ಲಿ ಉದ್ದವಾದ ವೀಲ್‌ಬೇಸ್‌ ಹೊಂದಿದ್ದು, ಆಧುನಿಕ ಭಾರತೀಯ ಕುಟುಂಬಕ್ಕೆ ಪರಿಪೂರ್ಣ ಆಯ್ಕೆಯಾಗಿದೆ. ಇದಲ್ಲದೆ, ವಾಹನವು ಮುಂದಿನ ಪೀಳಿಗೆಯ ಕಿಯಾ ಕನೆಕ್ಟೋ‌ದೊಂದಿಗೆ 26.03 ಸೆಂ (10.25″) HD ಟಚ್‌ಸ್ಕ್ರೀನ್‌ ನದಯಾವಿಗೇಷನ್ , 8 ಸ್ಪೀಕರ್‌ಗಳೊಂದಿಗೆ BOSE ಪ್ರೀಮಿಯಂ ಸೌಂಡ್‌ ಸಿಸ್ಟಮ್‌ , ವೈರಸ್ ಮತ್ತು ಬ್ಯಾಕ್ಟೀರಿಯಾದ ರಕ್ಷಣೆಯೊಂದಿಗೆ ಸ್ರ್ಟ್‌ ಏರ್‌ ಪ್ಯೂರಿರಿಫೈಯರ್‌ ನಂತಹ ಅನೇಕ ಪ್ರಥಮ ದರ್ಜೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಕಿಯಾಕ್ಯಾರೆನ್ಸ್ ಅನ್ನು ಮೂರು ಪವರ್ಟ್ರೇನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ.