Sunday, 15th December 2024

ಆರೋಗ್ಯ, ಶಿಕ್ಷಣ ಕ್ಷೇತ್ರಗಳನ್ನು ಸರ್ಕಾರೀಕರಣಗೊಳಿಸುವಂತೆ ಬಿಪಿಎಸ್ ಆಗ್ರಹ

ಮಾನವಿ : ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಸರ್ಕಾರೀಕರಣಗೊಳಿಸಯವಂತೆ ಭಾರತೀಯ ಪರಿವರ್ತನಾ ಸಂಘ ತಾಲೂಕಾ ಘಟಕವು ತಹಸೀಲ್ದಾರ್ ಅವರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದರು.

ಕರೋನಾ ಎಂಬ ವೈರಾಣು ನಮ್ಮನ್ನು ಬಾಧಿಸುತ್ತಿರುವ ಹೊತ್ತಿನಲ್ಲಿ ನಮ್ಮ ದೇಶದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಲೋಪ ದೋಷಗಳೆಲ್ಲ ಗೋಚರವಾಗುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನಗ, ವೆಂಟಿಲೇಟರದ ಹಾಗೂ ಸೂಕ್ತ ಔಷಧಿಗಳು ಸಿಗುತ್ತಿಲ್ಲ. ಎಂಬ ಕೂಗೂ ಒಂದೆಡೆಯಾದರೆ ಸಾಕಷ್ಟು ಸಂಖ್ಯೆಯಲ್ಲಿ ವೈಧ್ಯರು,ದಾದಿಯರು ವೈದಯಕೀಯ ಪರಿಕರಗಳು ಇಷ್ಟು ದೊಡ್ಡ ದೇಶದಲ್ಲಿ ಎಷ್ಟಿರಬೇಕೋ ಎಷ್ಟು ಸಂಖ್ಯೆಯಲ್ಲಿಲ್ಲ ಎಂಬ ಕೂಗೂ ಮತ್ತೊಂದೆಡೆ ಕೇಳಿ ಬರುತ್ತಿದೆ.

ಇದೆ ಜೊತೆಗೆ ಖಾಸಗಿ ಆಸ್ಪತ್ರೆಗಳು ಆಂಬುಲೆನ್ಸ್ ಅವರು ಒಂದಕ್ಕೆ ಹತ್ತು ಪಟ್ಟು ಹಣ ಪಡೆಯುತ್ತಿರುವುದು ಔಷಧಿಗಳು ಪಲ್ಸ್ ಆಕ್ಸಿಮೀಟರ್ ನಂತಹ ಉಪಕರಣಗಳನ್ನು ಐದಾರುಪಟ್ಟು ದರದಲ್ಲಿ ಮಾರುತ್ತಿರುವುದು ಖೇದಕರ ಸಂಗತಿಯಾಗಿದೆ. ಜೀವರಕ್ಷಕ ಔಷಧಿಗಳು ಕಾಳಸಂತೆಯಲ್ಲಿ ಕಳೆದುಕೊಂಡು ದುಃಖ ಒಂದೆಡೆಯಾದರೆ ಅವರ ಚಿಕಿತ್ಸಾ ವೆಚ್ಚಕ್ಕೆ ಹೆಚ್ಚುಹಣ ತೆರಬೇಕಾದ ಆತಂಕ ಮತ್ತೊಂದೆಡೆ ಯಾಗಿದೆ. ದೇಶದಲ್ಕಿ ಇದೊಂದು ಕರಾಳ ಪರಿಸ್ಥತಿಯಾಗಿದೆ. ಇದಕ್ಕೆಲ್ಲ ಕಾರಣ ವೈದ್ಯಕೀಯ ಮತ್ತು ಶಿಕ್ಷಣದಂತಹ ಮೂಲಭೂತ ಕ್ಷೇತ್ರಗಳನ್ನು ಸರ್ಕಾರ ತನ್ನ ವಶದಲ್ಲಿ ಇಟ್ಟುಕೊಳ್ಳದೆ ಖಾಸಗಿಯವರ ಇನ್ ಕೊಟ್ಟಿರುವುದೆ ಆಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳಿಗೆ ಸೇರಿದ ಸರ್ಕಾರಿ ಆಸ್ಪತ್ರೆಗಳು ಸೌಕರ್ಯಗಳಿಲ್ಲದೆ ಸೊರಗಿ ಹೋಗಿದೆ.

ಖಾಸಗಿ ಆಸ್ಪತ್ರೆಗಳು ಜನರನ್ನು ಹೀರಿ ಕೊಬ್ಬಿನಂತೆ ಮಾಡಿವೆ. ಶಿಕ್ಷಣ ಕ್ಷೇತ್ರ ಕೂಡ ಹೀಗೇಯೆ ಆಗಿದೆ. ಇಂದು ಪ್ರತಿ ಭಾರತೀಯ ಪ್ರಜೆ ತನ್ನ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ತನ್ನ ದುಡಿಮೆಯ ಶೇಕಡಾ 60 ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾನೆ/ಳೆ ಇದನ್ನು ಸರಿಪಡಿಸದೇ ಭಾರತೀಯರಾದ ನಾವು ನೆಮ್ಮದಿಯಿಂದಿರಲು ಸಾಧವೆ? ಆದ್ದರಿಂದ ಭಾರತೀಯ ಪಡೆದ ಪರಿವರ್ತನ ಸಂಘವು ಒಂದು ಬೃಹತ್ ಜನಾಂದೋಲನವನ್ನು ಹಮ್ಮಿಕೊಂಡಿದೆ. ಭಾರತೀಯರಾದ ನಾವು ಈಗಾಗಲೇ ಸಾಕಷ್ಟು ತೆರಿಗೆಗಳನ್ನು ಕಟ್ಟುತ್ತಿದ್ದೇವೆ. ಇನ್ನೂ ಒಂದು ತೆರಿಗೆಯನ್ನು ಹೆಚ್ಚುವರಿಯಾಗಿ ಕೊಡಲು ಸಿದ್ದರಿದ್ದೇವೆ ಸರ್ಕಾರರ ನಮ್ಮಿಂದ ಆರೋಗ್ಯ ಹಾಗೂ ಶಿಕ್ಷಕ್ಕಾಗಿ ಹೆಚ್ಚುವರಿಯಾಗಿ ತೆರಿಗೆಯೊಂದನ್ನು ಕಟ್ಟಿಸಿಕೊಳ್ಳಲಿ ನಮಗೆ ಏಕರೀತಿಯ ಗುಣಮಟ್ಟದ ಆರೋಗ್ಯ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ನೀಡಲಿ. ಈ‌ ನಮ್ಮ ಹಕ್ಕೋತ್ತಯವನ್ನು ರಾಜ್ಯ ಸರ್ಕಾರ ಈ‌ ಕೂಡಲೇ ಪರಿಶೀಸಿ ಒಪ್ಪಿಕೊಂಡು ಜಾರಿಗೊಳಿಸ ಬೇಕೆಂದು ಮನವಿ‌ಮಾಡಲಾಗುತ್ತದೆ.‌ ಒಂದು ವೇಳೆ ನಿರ್ಲಕ್ಷಿಸಿದ್ದಲ್ಲಿ ನಮ್ಮ ಸಂಘಟನೆಯಿಂದ ದೊಡ್ಡಮಟ್ಟದಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಸುರೇಶ ಬೈಲ್ ಮರ್ಚೆಡ್, ತಾಲೂಕಾ ಅಧ್ಯಕ್ಷರಾದ ಲಕ್ಷ್ಮಣರಾವ್ ಕಪಗಲ್, ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರೇಯ ಕೋಟ್ನೇಕಲ್ ವಕೀಲರು, ತಾಲೂಕಾ ಕಾರ್ಯದರ್ಶಿ ಲೋಕೇಶ ಪಿ, ತಾಲೂಕು ಸಂಚಾಲಕ ರಾದ ಶ್ರೀನಿವಾಸ ನಂದಿಹಾಳ, ಹುಸೇನಪ್ಪ‌ ನಂದಿಹಾಳ, ಕಾಶಿನಾಥ ಕುರ್ಡಿ, ಬಸವರಾಜ ಪೋತ್ನಾಳ್ ಸೇರಿದಂತೆ ಅನೇಕರು ಇದ್ದರು.