Friday, 20th September 2024

Cancer Cause: ನಿಮ್ಮ ಮನೆಯಲ್ಲಿ ನಿತ್ಯ ಈ ವಸ್ತುಗಳನ್ನು ಬಳಸುತ್ತಿದ್ದೀರಾ? ಇದು ಕ್ಯಾನ್ಸರ್‌ಗೆ ಕಾರಣವಾದೀತು!

Cancer Cause

ಬೆಂಗಳೂರು : ಕ್ಯಾನ್ಸರ್ ಇಂದಿನ ದಿನಗಳಲ್ಲಿ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಇದು ತುಂಬಾ ಮಾರಕವಾದ ರೋಗ ಕೂಡ. ಇದನ್ನು ಪ್ರಾರಂಭದಲ್ಲೇ ಪತ್ತೆ ಮಾಡದಿದ್ದರೆ ಜೀವವನ್ನೇ ಬಲಿತೆಗೆದುಕೊಳ್ಳುತ್ತದೆ. ವಾತಾವರಣದ ಮಾಲಿನ್ಯ, ಹೊಗೆ ಮತ್ತು ವಿಕಿರಣಗಳು ಕ್ಯಾನ್ಸರ್ (Cancer) ಅಪಾಯವನ್ನು ಹೆಚ್ಚಿಸುತ್ತವೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ನಾವು ಮನೆಯಲ್ಲಿ ಬಳಸುವಂತಹ ಕೆಲವು ವಸ್ತುಗಳು ಕೂಡ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾದ್ರೆ ನಾವು ಮನೆಯಲ್ಲಿ ಪ್ರತಿನಿತ್ಯ ಬಳಸುವಂತಹ ಅಂತಹ ವಸ್ತುಗಳು ಯಾವುದೆಂಬುದನ್ನು ತಿಳಿದುಕೊಳ್ಳೋಣ.

ಸುಗಂಧಭರಿತ ಮೇಣದಬತ್ತಿಗಳು
ಪರಿಮಳಯುಕ್ತ ಮೇಣದಬತ್ತಿಗಳನ್ನು ಸುಡುವುದರಿಂದ ಅದರ ಕಣಗಳು ಮತ್ತು ಕೆಲವು ಸಾವಯವ ಸಂಯುಕ್ತಗಳನ್ನು ಗಾಳಿಗೆ ಬಿಡುಗಡೆಯಾಗುತ್ತವೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಮೇಣದಬತ್ತಿಗಳನ್ನು ಉರಿಸುವುದರಿಂದ ಕೆಲವು ಜನರು ಅಲರ್ಜಿ ಅಥವಾ ತಲೆನೋವನ್ನು ಸಹ ಅನುಭವಿಸಬಹುದು. ಹಾಗಾಗಿ ನೈಸರ್ಗಿಕ ಸುಗಂಧ ದ್ರವ್ಯಗಳು, ಮೇಣಗಳು ಅಥವಾ ಸಾರಭೂತ ತೈಲಗಳನ್ನು ಬಳಸಿ ತಯಾರಿಸುವಂತಹ ಮೇಣದ ಬತ್ತಿಗಳನ್ನು ಬಳಸಿ.

ಹಾಸಿಗೆಗಳು
ನಾವು ಪ್ರತಿದಿನ ಹಾಸಿಗೆಯ ಮೇಲೆ ಮಲಗುತ್ತೇವೆ. ಮೆತ್ತಗಿನ ಹಾಸಿಗೆಯ ಮೇಲೆ ಮಲಗಿದಾಗ ಮಾತ್ರ ಕೆಲವರಿಗೆ ನಿದ್ರೆ ಬರುತ್ತದೆ. ಆದರೆ ಅನೇಕ ಹಾಸಿಗೆಗಳಲ್ಲಿನ ಪಾಲಿಯುರೆಥೇನ್ ಫೋಮ್ ಎಂಬ ಹಾನಿಕಾರಕ ಸಾವಯವ ಸಂಯುಕ್ತಗಳನ್ನು ಬಳಸಲಾಗುತ್ತವೆ. ಇವುಗಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗಳಿಂದ ಹಿಡಿದು ಕ್ಯಾನ್ಸರ್ ಅಪಾಯದವರೆಗೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಹಾಸಿಗೆಯನ್ನು ಖರೀದಿಸುವಾಗ, ಕಡಿಮೆ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಅಥವಾ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಬ್ರಾಂಡೆಡ್ ಹಾಸಿಗೆಗಳನ್ನು ಆರಿಸಿ.

ನಾನ್-ಸ್ಟಿಕ್ ಕುಕ್ ವೇರ್
ಟೆಫ್ಲಾನ್ ಅಥವಾ ನಾನ್-ಸ್ಟಿಕ್ ಕುಕ್ ವೇರ್‌ನಲ್ಲಿ ಅಡುಗೆ ಮಾಡುವುದು ಬಹಳ ಸುಲಭ ಮತ್ತು ಸುರಕ್ಷಿತವೆಂದು ಪರಿಗಣಿಸಲಾಗಿದ್ದರೂ ಪ್ಯಾನ್ ಅಥವಾ ವೋಕ್ ಅನ್ನು ಹೆಚ್ಚು ಬಿಸಿ ಮಾಡಿದರೆ ಅಥವಾ ಲೇಪನವು ಸಿಪ್ಪೆ ಸುಲಿಯಲ್ಪಟ್ಟರೆ ವಿಷಕಾರಿ ಹೊಗೆಯನ್ನು ಬಿಡುಗಡೆ ಮಾಡಬಹುದು. ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದರೆ ಇತ್ತೀಚಿನ ದಿನಗಳಲ್ಲಿ, ಟೆಫ್ಲಾನ್ ಕುಕ್ವೇರ್ ಅನ್ನು ಸುರಕ್ಷಿತ ಮತ್ತು ಪಿಎಫ್ಒಎ ಮುಕ್ತವೆಂದು ಪರಿಗಣಿಸಲಾಗಿದೆ. ಹಾಗಾಗಿ ನೀವು 2013ಕ್ಕಿಂತ ಮೊದಲು ಟೆಫ್ಲಾನ್ ಕುಕ್ವೇರ್ ಖರೀದಿಸಿದ್ದರೆ ಮತ್ತು ಇನ್ನೂ ಅದನ್ನು ಬಳಸುತ್ತಿದ್ದರೆ, ಅದನ್ನು ಎಸೆಯುವುದು ಒಳ್ಳೆಯದು. ಏಕೆಂದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಪ್ಲಾಸ್ಟಿಕ್ ಕ್ಯಾನ್‍ಗಳು ಮತ್ತು ಬಾಟಲಿಗಳು
ಕೆಲವರಿಗೆ ಆಹಾರವನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಹಾಗೂ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸಿಟ್ಟು ಬಳಸುವ ಅಭ್ಯಾಸವಿರುತ್ತದೆ. ಇದರಿಂದ ದೇಹಕ್ಕೆ ಮೈಕ್ರೋಪ್ಲಾಸ್ಟಿಕ್ ಅಥವಾ ಹಾನಿಕಾರಕ ರಾಸಾಯನಿಕಗಳು ಸೇರಿಕೊಳ್ಳಬಹುದು. ಯಾಕೆಂದರೆ ಪ್ಲಾಸ್ಟಿಕ್‍ಗಳನ್ನು ಬಿಸಿ ಮಾಡಿದಾಗ ಅದರಲ್ಲಿರುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಮೈಕ್ರೋಪ್ಲಾಸ್ಟಿಕ್‍ಗಳು ಆಹಾರವನ್ನು ಸಂಗ್ರಹಿಸಲು ಬಳಸುವ ಪ್ಲಾಸ್ಟಿಕ್ ಪಾತ್ರೆಗಳಿಂದ, ಉಸಿರಾಟದ ಮೂಲಕ ಅಥವಾ ಚರ್ಮದ ಸಂಪರ್ಕದ ಮೂಲಕ ದೇಹವನ್ನು ಪ್ರವೇಶಿಸಬಹುದು.

ಇದನ್ನೂ ಓದಿ: ಹಸುವಿನ ಮೇಲೆ ಅತ್ಯಾಚಾರ ಎಸಗಿದ ವಕೀಲ ಕ್ಯಾಮೆರಾದಲ್ಲಿ ಸಿಕ್ಕಿ ಬಿದ್ದ!

ಹಾಗಾಗಿ ಈ ಎಲ್ಲಾ ವಸ್ತುಗಳನ್ನು ಬಳಸುವುದನ್ನು ತಪ್ಪಿಸಿ. ಮತ್ತು ಕ್ಯಾನ್ಸರ್ ಮುಕ್ತ ಜೀವನವನ್ನು ನಡೆಸಿ. ಇದರಿಂದ ನೀವು ದೀರ್ಘಕಾಲದವರೆಗೆ ಆರೋಗ್ಯವಾಗಿ ಬದುಕಬಹುದು. ಹಾಗೇ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲ