Saturday, 23rd November 2024

Cancer Food: ಈ ಪದಾರ್ಥಗಳನ್ನುಅತಿಯಾಗಿ ಬೇಯಿಸಿ ತಿಂದರೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ; ಅವುಗಳು ಯಾವುವು?

Cancer Food

ಬೆಂಗಳೂರು : ಜಗತ್ತಿನಲ್ಲಿ ಕ್ಯಾನ್ಸರ್ ಕಾಟ ಹೆಚ್ಚಾಗುತ್ತಿದೆ. ಈ ರೋಗವು ಜನರ ಜೀವನವನ್ನು ಹಾಳುಮಾಡುವುದಲ್ಲದೆ ಕೆಲವೊಮ್ಮೆ ಸಾವಿಗೆ ಕಾರಣವಾಗುತ್ತದೆ. ಇದಕ್ಕೆ ನಮ್ಮ ಕೆಟ್ಟ ಆಹಾರ ಪದ್ಧತಿ ಕೂಡ ಒಂದು ರೀತಿಯಲ್ಲಿ ಕಾರಣವಾಗಿದೆ. ನಾವು ಸೇವಿಸುವಂತಹ ಕೆಲವು ಆಹಾರಗಳು ಕ್ಯಾನ್ಸರ್ ಕಾರಕವಾಗಿವೆ. ಆದರೆ ಕೆಲವೊಂದು ಆರೋಗ್ಯಕರ ಆಹಾರಗಳನ್ನು ಕೂಡ ಅತಿಯಾಗಿ ಬೇಯಿಸುವುದರಿಂದ ಕ್ಯಾನ್ಸರ್(Cancer Food) ಬರುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಹಾಗಾಗಿ ಅತಿಯಾಗಿ ಬೇಯಿಸಿದಾಗ ಕ್ಯಾನ್ಸರ್‌ಗೆ ಕಾರಣವಾಗುವಂತಹ ಆ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

Cancer Food

ಆಲೂಗಡ್ಡೆ: ಆಲೂಗಡ್ಡೆ ಅನೇಕ ಜನರ ನೆಚ್ಚಿನ ಆಹಾರವಾಗಿದೆ, ಆದರೆ ಅದನ್ನು ಅತಿಯಾಗಿ ಬೇಯಿಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ. ವಾಸ್ತವವಾಗಿ, ಆಲೂಗಡ್ಡೆಯನ್ನು ಅತಿಯಾಗಿ ಬೇಯಿಸುವುದು ಕ್ಯಾನ್ಸರ್ ಗೆ ಕಾರಣವಾಗುವ ಹಾನಿಕಾರಕ ರಾಸಾಯನಿಕವಾದ ಅಕ್ರಿಲಾಮೈಡ್ ಅನ್ನು ಉತ್ಪಾದಿಸುತ್ತದೆ. ಆದ್ದರಿಂದ, ಆಲೂಗಡ್ಡೆಯನ್ನು ಹೆಚ್ಚು ಬೇಯಿಸಿ ತಿನ್ನಬೇಡಿ.

Cancer Food

ಎಣ್ಣೆ: ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದು ನಿಮ್ಮ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡಬಹುದು. ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿದಾಗ, ಅದರಲ್ಲಿ ಹಾನಿಕಾರಕ ಸಂಯುಕ್ತಗಳು ರೂಪುಗೊಳ್ಳುತ್ತವೆ, ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದ್ದರಿಂದ, ಒಮ್ಮೆ ಬಳಸಿದ ನಂತರ ಎಣ್ಣೆಯನ್ನು ಎಸೆಯುವುದು ಉತ್ತಮ.

Cancer Food

ಸಂಸ್ಕರಿಸಿದ ಮಾಂಸ: ಸಂಸ್ಕರಿಸಿದ ಮಾಂಸಗಳನ್ನು ಅತಿಯಾಗಿ ಬೇಯಿಸಿ ತಿಂದರೆ ಅದು ನಿಮ್ಮನ್ನು ಕ್ಯಾನ್ಸರ್ ರೋಗಿಯನ್ನಾಗಿ ಮಾಡಬಹುದು. ಸಂಸ್ಕರಿಸಿದ ಮಾಂಸಗಳು ನೈಟ್ರೈಟ್ ಗಳು ಎಂದು ಕರೆಯಲ್ಪಡುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದು ಬೇಯಿಸಿದಾಗ ಹಾನಿಕಾರಕ ವಸ್ತುಗಳಾಗಿ ಬದಲಾಗುತ್ತದೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು.

ಮೀನು: ಮೀನುಗಳನ್ನು ಅತಿಯಾಗಿ ಬೇಯಿಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಮೀನನ್ನು ಅತಿಯಾಗಿ ಬೇಯಿಸಿದಾಗ, ಅದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ.

ಬಿಳಿ ಬ್ರೆಡ್: ಬಿಳಿ ಬ್ರೆಡ್ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯಂಶ ಹೊಂದಿರುತ್ತದೆ. ಹಾಗಾಗಿ ಇವುಗಳನ್ನು ಅತಿಯಾಗಿ ಬೇಯಿಸಿದಾಗ, ಅವುಗಳಲ್ಲಿ ಅಕ್ರಿಲಾಮೈಡ್ ಎಂಬ ವಿಷಕಾರಿ ಅಂಶವು ರೂಪುಗೊಳ್ಳುತ್ತದೆ, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬಿಳಿ ಬ್ರೆಡ್ ಅನ್ನು ಕಡಿಮೆ ಬೇಯಿಸಿ ಮತ್ತು ಸುಟ್ಟ ಬ್ರೆಡ್ ತಿನ್ನುವುದನ್ನು ತಪ್ಪಿಸಿ.

ಇದನ್ನೂ ಓದಿ: ತನ್ನ ಹಿಂದೂ ಗೆಳತಿಯನ್ನು ಕೊಲ್ಲುವೆ ಎಂದ ಪುಟ್ಟ ಮುಸ್ಲಿಂ ಬಾಲಕಿ! ಆತಂಕಕಾರಿ ವಿಡಿಯೊ!

ಈ ಸಲಹೆಯನ್ನು ಪಾಲಿಸುವ ಮೂಲಕ ಕ್ಯಾನ್ಸರ್‌ ನಂತಹ ಮಾರಣಾಂತಿಕ ರೋಗಕ್ಕೆ ತುತ್ತಾಗುವುದನ್ನು ತಪ್ಪಿಸಿ ಮತ್ತು ನೀವು ಹಾಗೂ ನಿಮ್ಮ ಕುಟುಂಬದವರ ಆರೋಗ್ಯವನ್ನು ಕಾಪಾಡಿಕೊಳ್ಳಿ