Friday, 22nd November 2024

ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಮೆರವಣಿಗೆ

ಮೂಡಲಗಿ: ಸಮೀಪದ ಹಳ್ಳೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ನೂತನ ಮಹಾದ್ವಾರ ಉದ್ಘಾಟನೆ ನಿಮಿತ್ತವಾಗಿ ಮಹಾಲಕ್ಷ್ಮಿ ದೇವಸ್ಥಾನದಿಂದ ಕುಂಭಮೇಳದೊಂದಿಗೆ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಮೆರವಣಿಗೆ ಗ್ರಾಮದ ಪ್ರಮುಖ ಓಣಿಯಲ್ಲಿ ಜರುಗಿತು.

ನಂತರ ಶ್ರೀಗಳು ಮಹಾದ್ವಾರ ಉದ್ಘಾಟಿಸಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನೂತವಾಗಿ ನಿರ್ಮಿಸಲಾದ ಶಿವನ ಮೂರ್ತಿಯನ್ನು ಲೋಕಾರ್ಪಣೆ ಮಾಡಿ, ಶಿವನ ಮೂರ್ತಿಗೆ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ ಶ್ರೀಗಳು ಮಾತನಾಡಿ, ಕಾಣದೇ ಇರುವ ದೇವರು ಇಲ್ಲ ಅಂತ ಹೇಳೊಕ್ಕೆ ಅಸಾಧ್ಯ ದೇವರು ನಿರಾಕಾರ ಸ್ವರೂಪಿಯಾಗಿದಾನೆ. ಮನುಷ್ಯ ತಾನು ಯಾವ ರೀತಿಯಾಗಿ ಕಲ್ಪನೆ ಮಾಡಿಕೊಳ್ಳುತ್ತವೆ ಆ ಸ್ವರೂಪದ ಮೂರ್ತಿ ಯಾಗಿ ದೇವರು ಪ್ರತ್ಯಕ್ಷನಾಗುತ್ತಾನೆ ಎಂದರು.

ಧರ್ಮದಲ್ಲಿ ನಂಬಿಕೆ ಇದ್ದರೆ ದೇವರು ಸದಾ ನಮ್ಮನ್ನು ಕಾಪಾಡುತ್ತಾನೆ,ಸಮಾಜದಲ್ಲಿ ಐಕ್ಯತೆ, ಸಹೋದರತೆ, ಪರಸ್ಪರ ಸಹಕಾ ರದ ಗುಣಗಳು ಬೆಳೆಸುತ್ತದೆ. ದೈವಭಕ್ತಿ ಮಾನವರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ. ನಿತ್ಯ ಎಲ್ಲರೂ ಪೂಜೆ, ಧ್ಯಾನ ಮಾಡು ವುದು, ಅಷ್ಠಾವರನ, ಪಂಚಾಚಾರ್ಯಗಳ ಆಸಯದಂತೆ ಬದುಕು ಸಾಗಿಸಬೇಕ. ಗುರುವಿನಲ್ಲಿ ಅದಮ್ಯ ಭಕ್ತಿ, ನಿಷ್ಠೆ ಬೆಳೆಸಿಕೊಳ್ಳ ಬೇಕು, ತಂದೆ-ತಾಯಿಯೇ ನಿಜವಾದ ಕಣ್ಣಿಗೆ ಕಾಣುವ ದೇವರು ಅವರ ಸೇವೆಯೇ ದೇವರ ಸೇವೆ ಎಂದರು.

ಇನ್ನೂ ಗ್ರಾಮದಲ್ಲಿ ಮಹದ್ವಾರ ಮತ್ತು ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಗ್ರಾಮದ ಏಳಿಗೆಗಾಗಿ ಹಾಗೂ ದೇವಸ್ಥಾನದ ಬೆಳವಣಿಗೆಗಾಗಿ ದೇವಸ್ಥಾನದ ಕಮೀಟಿಯವರ ಕೆಲಸಕ್ಕೆ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಮತ್ತು ಬೇರೆ ಬೇರೆ ಹಳ್ಳಿಗಳಿಂದ ಭಕ್ತಾದಿಗಳು ಹಾಗೂ ದೇವಸ್ತಾನದ ಕಮೀಟಿ ಸದಸ್ಯರು, ಗ್ರಾಮದ ಸಮಸ್ತೆ ಜನತೆ ಉಪಸ್ಥಿತರಿದ್ದರು.