Thursday, 12th December 2024

ಮುಸಲ್ಮಾನರ ಬಳಸಿಕೊಳ್ಳುವ ಕಲೆ ಕಾಂಗ್ರೆಸ್‌ಗೆ ಕರಗತ

ವೀಕೆಂಡ್‌ ವಿಥ್‌ ಮೋಹನ್‌

ಮೋಹನ್‌ ವಿಶ್ವ

ಮುಸಲ್ಮಾನರನ್ನು ಬಳಸಿಕೊಂಡು ರಾಜಕೀಯ ಮಾಡುವ ಕಲೆ ಕಾಂಗ್ರೆಸ್ಸಿಗೆ ಕರಗತವಾಗಿಬಿಟ್ಟಿದೆ. ಮುಸಲ್ಮಾನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರಿಯಾದ ವಿದ್ಯಾಭ್ಯಾಸ ಬೇಕು. ಆದರೆ ಅವರಿಗೆ ಸರಿಯಾದ ವಿದ್ಯಾಭ್ಯಾಸವನ್ನು ನೀಡಿದರೆ ಎಲ್ಲಿ ತಮ್ಮ ಮತ ಬ್ಯಾಂಕಿಗೆ ಹೊಡೆತ ಬೀಳುತ್ತದೆಯೋ ಎಂಬ ಭಯದಿಂದ ಕಾಂಗ್ರೆಸ್  ಮೊದಲಿನಿಂದಲೂ ಅವರಿಗೆ ಹೆಚ್ಚಿನ ವಿದ್ಯಾಭ್ಯಾಸ ವನ್ನು ನೀಡುವ ಯೋಜನೆಗಳಿಗೆ ಚಾಲನೆಯನ್ನು ನೀಡಲೇ ಇಲ್ಲ.

ಮುಸಲ್ಮಾನರು ಖಟ್ಟ ಧರ್ಮವಾದಿಗಳು, ಸಮಾಜದಲ್ಲಿ ತರರಿಗೆ ಎಷ್ಟೇ ತೊಂದರೆ ಆದರೂ ಸರಿ ತಮ್ಮ ಧರ್ಮದ ಆಚರಣೆಗಳಿಗೆ ಅಡ್ಡಿಯಾಗುವುದನ್ನು ಅವರು ಸಹಿಸುವು ದಿಲ್ಲ. ನೂರಾರು ವರ್ಷಗಳಿಂದ ಪ್ರವಾದಿ ಮೊಹಮ್ಮದ್ ಹೇಳಿರುವ ಆಚರಣೆಗಳ ಜತೆಗೆ, ಹೇಳಿರದ ಹಲವು ಆಚರಣೆಗಳನ್ನೂ ಸಹ ಪಾಲನೆ ಮಾಡಿಕೊಂಡು ಬಂದಿದ್ದಾರೆ.

ಜಗತ್ತು ಮುಂದಕ್ಕೆ ಹೋಗುತ್ತಿದ್ದರೆ, ಇವರು ಮಾತ್ರ ತಮ್ಮ ಧರ್ಮಾಂಧತೆಯಿಂದ ನೂರಾರು ವರ್ಷಗಳ ಕಾಲ ಹಿಂದಕ್ಕೆ ಹೋಗಲು ಬಯಸುತ್ತಾರೆ. ಇತ್ತೀಚಿನ ಒಂದು ತಾಜಾ ಉದಾಹರಣೆಯನ್ನು ನೀಡುವುದಾದರೆ, ಇಡೀ ಜಗತ್ತೇ ಕರೋನಾ ಮಹಾ ಮಾರಿಯಿಂದ ತತ್ತರಿಸಿ ಹೋಗಿರುವಾಗ, ಮಹಾಮಾರಿಯನ್ನು ತಡೆಗಟ್ಟಲು ದೊಡ್ಡ ದೊಡ್ಡ ದೇಶಗಳು ಸಾವಿರಾರು ಕೋಟಿ ರುಪಾಯಿ ವೆಚ್ಚದಲ್ಲಿ ಲಸಿಕೆಯನ್ನು ಕಂಡುಹಿಡಿದು ನೀಡಬೇಕೆಂದು ಮುಂದೆ ಬಂದಿದ್ದರೆ, ಭಾರತದ ಹಲವು ಮುಸಲ್ಮಾನ್ ಸಂಘಟನೆಗಳು ತಮ್ಮ ಜನಾಂಗಕ್ಕೆ ಮಾತ್ರ ಲಸಿಕೆ ಹಾಕಿಸಿಕೊಳ್ಳದಂತೆ ಕರೆ ನೀಡಿದ್ದರು.

ಲಸಿಕೆಯಲ್ಲಿ ಬಳಸುವ ಜೆಲಿಟಿನ್‌ನಲ್ಲಿ ‘ಹಂದಿ ಮಾಂಸ’ದ ಕೊಬ್ಬಿನ ಅಂಶವಿರುವ ಕಾರಣ ತಾವು ಲಸಿಕೆಯನ್ನು ಹಾಕಿಸಿ ಕೊಳ್ಳುವುದಿಲ್ಲವೆಂಬ ಹುಂಬ ಕಾರಣವನ್ನು ನೀಡಿದ್ದರು. ಸಾವಿನ ವಿಚಾರ ಬಂದಾಗ ಸಿಕ್ಕಿದನ್ನು ತಿನ್ನಲೇ ಬೇಕಿರುವ ಪರಿಸ್ಥಿತಿ ಯಿರುವಾಗ, ಇವರಿಗೆ ಇನ್ನೂ ಖಚಿತವಾಗದ ಲಸಿಕೆಯ ಬಗ್ಗೆ ಅನುಮಾನ. ತಾವು ಲಸಿಕೆಯನ್ನು ಹಾಕಿಸಿಕೊಳ್ಳದೆ ರಸ್ತೆಯೆಲ್ಲ ತಿರುಗಾಡಿದರೆ ಇತರರಿಗೆ ಹರಡುತ್ತದೆಯೆಂಬ ‘ಸಾಮಾನ್ಯ ಜ್ಞಾನ’ ಇವರಿಗಿದೆ.

ಗೊಂದಲ ಬೇಡ ಖಂಡಿತವಾಗಿಯೂ ಇವರಿಗಿದೆ. ಆದರೆ ಇತರರು ಹಾಳಾದರೂ ಪರವಾಗಿಲ್ಲ ತಮ್ಮ ಕಟ್ಟರ್ ಸಂಪ್ರದಾಯವನ್ನು ಬಿಡಲು ತಯಾರಿರು ವುದಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲಿಯೇ ಈ ಲಸಿಕೆಯ ಬಗ್ಗೆ ಯಾರೊಬ್ಬರೂ ಚಕಾರವೆತ್ತಿಲ್ಲ. ಅಂತಹುದರಲ್ಲಿ ಬಹುಸಂಖ್ಯಾತ ಹಿಂದೂ ರಾಷ್ಟ್ರದಲ್ಲಿ ಲಸಿಕೆಯ ಬಗ್ಗೆ ಇವರಿಗೆ ಅನುಮಾನ ಕಾಡುತ್ತದೆ. ಮುಸಲ್ಮಾನರು ಕಾಲ ಬದಲಾದಂತೆ ತಮ್ಮ ಹಳೆಯ ವೈಚಾರಿಕತೆಗಳನ್ನು ಬದಲಾಯಿಸಿಕೊಂಡಿಲ್ಲ.

ಹಿಂದೂಗಳಾದ ನಾವು ಸಮಾಜಕ್ಕೆ ಕಳಂಕವಾಗಿದ್ದ ‘ಬಾಲ್ಯ ವಿವಾಹ’, ‘ಸತಿ ಪದ್ಧತಿ’, ‘ವಿಧವೆಯ ಕೇಶಮುಂಡನ’, ‘ಬಹುಪತ್ನಿತ್ವ’
ದಂಥ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸಿ ಸಮಾಜದಲ್ಲಿ ಸುಧಾರಣೆಯನ್ನು ತಂದಿದ್ದೇವೆ. ಆದರೆ ‘ತ್ರಿವಳಿ ತಲಾಕ್’ ರದ್ಧತಿ ಕಾನೂನನ್ನು ಜಾರಿಗೆ ತಂದಿದಕ್ಕೆ ಈ ಕಟ್ಟರ್ ಮುಸಲ್ಮಾನರು ಅದೆಷ್ಟು ವಿರೋಧಿಸಿದ್ದರು. ಇದಕ್ಕೆಲ್ಲ ಕಾರಣ ಮತ್ತದೇ ವಿದ್ಯಾಭ್ಯಾಸ, ಸರಿಯಾದಂಥ ವಿದ್ಯೆಯನ್ನು ನೀಡಿದ್ದರೆ ಇವರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.

ಕಾಂಗ್ರೆಸ್ಸಿನವರಿಗೆ ಮುಸಲ್ಮಾನರನ್ನು ಅವಿದ್ಯಾವಂತರ ನ್ನಾಗಿರಿಸಿ ಅವರ ಮೂಲಭೂತವಾದವನ್ನು ಬಳಸಿಕೊಂಡು ಅವರ ಆಚರಣೆಗಳಿಗೆ ಚ್ಯುತಿ ಬರುವಂಥ ಕಾನೂನುಗಳನ್ನು ವಿರೋಧಿಸಿಕೊಂಡು ಅವರ ಪರವಾಗಿ ನಿಲ್ಲಲು ನಾವಿದ್ದೇವೆಂದು ಹೇಳುವ ಮೂಲಕ ಮುಸಲ್ಮಾನರ ಮತಬ್ಯಾಂಕನ್ನು ಗಟ್ಟಿಮಾಡಿಕೊಂಡು ಬರುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಕರ್ನಾಟಕದಲ್ಲಿ ನಡೆದಂಥ ಘಟನೆಗಳನ್ನು ಮೆಲಕು ಹಾಕಿ ನೋಡಿದರೆ ಕಾಂಗ್ರೆಸ್ಸಿನವರ ಮತ ಬ್ಯಾಂಕ್ ರಾಜಕೀಯ ಎದ್ದು ಕಾಣುತ್ತದೆ. ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಮಂಗಳೂರಿನಲ್ಲಿ ನಡೆದ ಹಿಂಸಾಚಾರದಲ್ಲಿ ಬಾಗಿಯಾದವರನ್ನು ‘ಅಮಾಯಕರು’ ಎನ್ನುವ ಮೂಲಕ ಸಿದ್ದರಾಮಯ್ಯ ಅವರ ಪರವಾಗಿ ನಿಂತರು. ‘ಜಮೀರ್ ಅಹ್ಮದ್ ಖಾನ್’ ಗೋಲಿಬಾರ್ ನಲ್ಲಿ ಮೃತಪಟ್ಟವರನ್ನು ‘ಹುತಾತ್ಮರು’ ಎಂದು ಕರೆದರು.

‘ಪಾದರಾಯನಪುರದಲ್ಲಿ’ ನಡೆದ ಗಲಾಟೆಯಲ್ಲಿ ಭಾಗಿಯಾಗಿದ್ದ ‘ಗಾಂಜಾ’ ಮಾರುವವರ ಪರವಾಗಿ ನಿಂತು ‘ಜಮೀರ್’ ಬೇಲ್ ನೀಡಿ ಜೈಲಿನಿಂದ ಬಿಡುಗಡೆಗೊಳಿಸಿದರು, ಕೆ.ಜಿ.ಹಳ್ಳಿಯಲ್ಲಿ ನಡೆದ ತಮ್ಮದೇ ಪಕ್ಷದ ಶಾಸಕ ‘ಅಖಂಡ ಶ್ರೀನಿವಾಸ ಮೂರ್ತಿ’ ಯವರ ಮನೆಯ ಮೇಲಿನ ದಾಳಿಯ ಪ್ರಕರಣದಲ್ಲಿ ಮೊದಲಿಗೆ ಪೊಲೀಸರಿಗೆ ದೂರನ್ನೇ ನೀಡಲಿಲ್ಲ. ಸದಾ ದಲಿತರ ಪರವಾಗಿರು ತ್ತೇವೆಂದು ಹೇಳುವ ಕಾಂಗ್ರೆಸ್ ದಲಿತ ಶಾಸಕನ ಪರವಾಗಿ ನಿಲ್ಲಲಿಲ್ಲ. ಈ ಘಟನೆಯು ಕಳೆದು ಮೂರು ತಿಂಗಳಾಗಲಿಲ್ಲ, ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ಕೆಲವು ದಿನಗಳ ಹಿಂದೆ ‘ವಿಧಾನ ಸೌಧ’ದಲ್ಲಿ ನಡೆದ ಪರಿಷತ್ ಗಲಾಟೆ.

ಇಡೀ ಕರ್ನಾಟಕದ ಜನತೆ ಉಪಸಭಾಪತಿಯ ಕುರ್ಚಿಗಾಗಿ ನಡೆದ ಕಿತ್ತಾಟವನ್ನು ನೋಡಿದರು. ಪರಿಷತ್ತಿನ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಇಂತಹದೊಂದು ಕೃತ್ಯವು ನಡೆದೇಹೋಯಿತು. ಇದಕ್ಕೂ ಮುಸಲ್ಮಾನರಿಗೂ ಏನು  ಸಂಬಂಧವೆನ್ನು ವಿರಾ? ಹೌದು ಸಂಬಂಧವಿದೆ. ‘ಗೋಹತ್ಯಾ ನಿಷೇದ ಕಾಯಿದೆ’ ಯನ್ನು ವಿಧಾನಪರಿಷತ್ತಿನಲ್ಲಿ ಮಂಡಿಸಲು ‘ಬಿ.ಜೆ.ಪಿ’ ಸರಕಾರಕ್ಕೆ ಸಂಪೂರ್ಣ ಬಹುಮತವಿಲ್ಲ, ಹಾಗಾಗಿ ಜೆ.ಡಿ.ಎಸ್ ಬೆಂಬಲವನ್ನು ಪಡೆದು ಮಂಡಿಸಲು ನಿರ್ಧರಿಸಲಾಗಿತ್ತು.

ವಿಧೇಯಕವನ್ನು ಮಂಡಿಸಲು ಸದನದ ಸಭಾಪತಿಗಳು ಅವಕಾಶ ಕೊಡಬೇಕು. ಆದರೆ ಸದನದ ಉಪಸಭಾಪತಿಯ ಸ್ಥಾನದಲ್ಲಿ ಕುಳಿತಿರುವುದು ಕಾಂಗ್ರೆಸ್ಸಿನ ‘ಪ್ರತಾಪ್ ಶೆಟ್ಟಿ’, ವಿಧೇಯಕವನ್ನು ಮಂಡಿಸಲು ಅವಕಾಶವನ್ನು ನೀಡದೆ ಸದನವನ್ನು ಯಾವುದಾ ದರೊಂದು ಕಾರಣದಿಂದ ಮುಂದೂಡಿ ಸಮಯ ವ್ಯರ್ಥಮಾಡುವುದು ಕಾಂಗ್ರೆಸ್ಸಿನ ತಂತ್ರಗಾರಿಕೆಯಾಗಿತ್ತು. ಇದನ್ನು ಮನ ಗೊಂಡ ‘ಬಿಜೆಪಿ’, ‘ಜೆಡಿಎಸ್’ ಪಕ್ಷದ ಬೆಂಬಲದೊಂದಿಗೆ ಉಪಸಭಾಪತಿಯನ್ನು ಕೆಳಗಿಳಿಸಿ ‘ಜೆಡಿಎಸ್’ನ ಧರ್ಮೇಗೌಡರನ್ನು ಆ ಸ್ಥಾನಕ್ಕೆ ಕೂರಿಸಲು ತಯಾರಾಗಿತ್ತು.

ಸಂವಿಧಾನಾತ್ಮಕವಾಗಿ ಕಾಂಗ್ರೆಸ್ಸಿಗೆ ಸದನದಲ್ಲಿ ಉಪಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ಬೆಂಬಲವಿಲ್ಲದಿದ್ದರೂ ಸಹ
ತನ್ನ ಸ್ಥಾನವನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಕಾಂಗ್ರೆಸ್ ‘ಗೋ ಹತ್ಯಾ ನಿಷೇಧ’ ಕಾಯಿದೆಯನ್ನು ಎಂದೂ ಸಹ
ಬೆಂಬಲಿಸುವುದಿಲ್ಲ. ಕಾರಣ ತಮ್ಮ ಮುಸಲ್ಮಾನ್ ಮತ ಬ್ಯಾಂಕ್ ರಾಜಕೀಯ. ಯಾವಾಗ ಈ ಕಾಯಿದೆಯು ಜಾರಿಗೆ ಬಂದೆ ಬರುತ್ತದೆಯೆಂಬ ವಿಷಯವು ಕಾಂಗ್ರೆಸ್ಸಿಗೆ ತಿಳಿಯಿತೋ ಹೇಗಾದರೂ ಮಾಡಿ ಕಾಯಿದೆಯ ಮಂಡನೆಯನ್ನು ತಡೆಯಬೇಕೆಂಬ ಉದ್ದೇಶದಿಂದ ದೊಡ್ಡದೊಂದು ಗಲಾಟೆಯನ್ನು ಸದನದಲ್ಲಿ ಮಾಡಲು ತಯಾರಾಗಿತ್ತು.

‘ತ್ರಿವಳಿ ತಲಾಕ್’ ನಿಷೇಧ ಕಾಯಿದೆ, ‘ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿ’, ‘ಪೌರತ್ವ ತಿದ್ದುಪಡಿ ಕಾಯಿದೆ’, ‘ರಾಮ ಮಂದಿರ ನಿರ್ಮಾಣ’ವನ್ನು ತಡೆಯಲು ಕಾಂಗ್ರೆಸ್ ಎಷ್ಟೇ ಪ್ರಯತ್ನಪಟ್ಟರೂ ಉಪಯೋಗವಾಗಲಿಲ್ಲ. ಮುಸಲ್ಮಾನರಿಗೆ ಇದರಿಂದ ಕಾಂಗ್ರೆಸ್ ಪಕ್ಷದ ಮೇಲಿದ್ದ ನಂಬಿಕೆಯು ಸಂಪೂರ್ಣ ಇಲ್ಲದಂತಾಯಿತು. ತಮ್ಮನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ವಿಫಲವಾಗುತ್ತಿದೆ ಯೆಂಬ ವಿಚಾರವು ಮುಸಲ್ಮಾನರಿಗೆ ಅರಿವಾಯಿತು.

ಇದನ್ನರಿತ ‘ಸಿದ್ದರಾಮಯ್ಯ’ನವರಿಗೆ ‘ಗೋ ಹತ್ಯಾ ಕಾಯಿದೆ’ಯು ಗಾಯದ ಮೇಲೆ ಬರೆಯನ್ನು ಎಳೆದಂತಾಗಿತ್ತು. ಎಲ್ಲಿ ಈ
ಕಾಯಿದೆಯನ್ನು ಜಾರಿಗೆ ಬರಲು ಬಿಟ್ಟರೆ ಮುಸಲ್ಮಾನರಿಗೆ ಕಾಂಗ್ರೆಸ್ಸಿನ ಮೇಲಿದ್ದಂಥ ಅಪನಂಬಿಕೆ ಮತ್ತಷ್ಟು ಜಾಸ್ತಿಯಾಗುತ್ತದೆ ಯೆಂಬ ಭಯದಿಂದ ಸದನದಲ್ಲಿ ಗಲಭೆ ಮಾಡಲು ತಯಾರಾಗಿಬಿಟ್ಟರು. ಸದನವು ಆರಂಭವಾಗುತ್ತಿದ್ದಂತೆಯೇ ಧರ್ಮೇಗೌಡರು ಉಪಸಭಾಪತಿ ಸ್ಥಾನದಲ್ಲಿ ಕುಳಿತೊಡನೆ ಕಾಂಗ್ರೆಸ್ ಪಕ್ಷದ ನಾಯಕರು ಧರ್ಮೇಗೌಡರ ವಯಸ್ಸಿಗೂ ಮರ್ಯಾದೆ ಕೊಡದೆ ಕೈಗೆ
ಸಿಕ್ಕಂತೆಲ್ಲ ಎಳೆದಾಡಿಬಿಟ್ಟರು.

ವಿಧಾನಪರಿಷತ್ತಿನಲ್ಲಿ ರೌಡಿಗಳು ಎಳೆದಾಡುವಂಥ ದೃಶ್ಯಗಳನ್ನು ಇಡೀ ಕರ್ನಾಟಕದ ಜನತೆಯು ನೋಡಿದರು. ಸಿದ್ದರಾಮಯ್ಯ
ನವರಿಗೆ ಸದನದ ಗಲಾಟೆಯನ್ನು ಮುಸಲ್ಮಾನರು ಹೆಚ್ಚಾಗಿ ಮಾಧ್ಯಮದಲ್ಲಿ ನೋಡಬೇಕಿತ್ತು. ಯಾಕೆಂದರೆ ಬಿಜೆಪಿ ಜಾರಿಗೆ ತರಲು ಹೊರಟಿದ್ದ ‘ಗೋಹತ್ಯಾ ನಿಷೇಧ’ ಕಾಯಿದೆಯ ವಿರುದ್ಧ ಕಾಂಗ್ರೆಸ್ ಪಕ್ಷವು ಮುಸಲ್ಮಾನರ ಪರವಾಗಿ ವಿಧಾನಸೌಧದಲ್ಲಿ
ಹೊಡೆದಾಡಿತ್ತೆಂಬ ವಿಚಾರವನ್ನು ಮುಸಲ್ಮಾನರಿಗೆ ತಿಳಿಸಬೇಕಿತ್ತು. ಇದರಿಂದ ಮುಸಲ್ಮಾನರು ಕಾಂಗ್ರೆಸ್ ಮೇಲಿನ ನಂಬಿಕೆ ಯನ್ನು ಉಳಿಸಿಕೊಳ್ಳಬಹುದೆಂಬ ಲೆಕ್ಕಾಚಾರ ಅವರದ್ದು.

ಸಿದ್ದರಾಮಯ್ಯನವರ ಶಿಷ್ಯಂದಿರ ಅಟ್ಟಹಾಸವೆಷ್ಟಿಯೆಂದರೆ, ಕಾಂಗ್ರೆಸ್ಸಿನ ‘ವೈ.ಎ.ನಾರಾಯಣ ಸ್ವಾಮಿ’ ಧರ್ಮೇಗೌಡರ ಬಟ್ಟೆ ಯನ್ನು ಹಿಡಿದು ಎಳೆದಾಡಿದ ರೀತಿ ಅಸಹ್ಯ ಮೂಡಿಸುವಂತಿತ್ತು. ಕಾಂಗ್ರೆಸ್ಸಿನವರಿಗೆ ಜಗಳ, ತಳ್ಳಾಟ ಹೆಚ್ಚಾದಷ್ಟು ಹೆಚ್ಚಿನ ಲಾಭವೆಂಬುದು ಅವರ ಲೆಕ್ಕಾಚಾರ. ಒಂದು ಧರ್ಮದ ಪರವಾಗಿ ವಿಧಾನಸೌಧದಲ್ಲಿ ದೊಡ್ಡ ಜಗಳ ಮಾಡಿದರೆ ಅವರು ಎಂದಿಗೂ ತಮ್ಮ ಪರವಾಗಿ ಲ್ಲುವರೆಂಬ ಆಶಾಭಾವನೆ ಕಾಂಗ್ರೆಸ್ಸಿನವರದ್ದು.

ವಿಧಾನಸೌಧದಲ್ಲಿ ನಡೆದ ಈ ಜಗಳದ ‘ವಿಡಿಯೋ’ ತುಣುಕನ್ನು ಬಳಸಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸುವ
ತಂತ್ರಗಾರಿಕೆ ಸಿದ್ದರಾಮಯ್ಯನವರದ್ದೊಂದು ಖಡಾ ಖಂಡಿತವಾಗಿ ಹೇಳಬಹುದು. ‘ವಿಡಿಯೋ ತುಣುಕ’ನ್ನು ಬಳಸಿಕೊಂಡು ಜಮೀರ್ ಅಹ್ಮದ್ ಖಾನ್ ಅದೆಷ್ಟು ಮಸೀದಿಗಳ ಮೌಲ್ವಿಗಳನ್ನು ಈಗಾಗಲೇ ಭೇಟಿ ಮಾಡಿ ‘ಶಹಬ್ಬಾಸ್‌ಗಿರಿ’ ಪಡೆದಿzರೋ ಅಹುವೇ ಬಲ್ಲ.

ಮುಸಲ್ಮಾನರಿಗೆ ವಿಡಿಯೋ ತೋರಿಸಿ ‘ದೇಖೋ ಭಾಯ್ ಹಮ್ನೆ, ಆಪ್ ಕೆ ಸಾಥ್ ಖಡ್ನೇಕೆಲಿಯೇ ವಿಧಾನಸೌಧಮೆ ಕೆತ್ತ ಬಡಾ ಜಗಡ ಕರ್ದಿಯ’ ಎಂದು ಹೇಳಿ ಹೇಳಿ ಮುಸ್ಲಿಂ ಮತದಾರರನ್ನು ಒಂದೆಡೆ ಸೇರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಉತ್ತರ ಪ್ರದೇಶದಲ್ಲಿಯೂ ಆಗದ ಕೆಲಸವನ್ನು ನಾವು ಕರ್ನಾಟಕದ ವಿಧಾನಸೌಧದಲ್ಲಿ ಮಾಡಿದ್ದೇವೆಂದು ಹೇಳಿ ಮುಸಲ್ಮಾನರನ್ನು ನಂಬಿಸಿ ಬಿಡುತ್ತಾರೆ. ಕಾಯಿದೆಯನ್ನು ತಡೆಯಲಾಗಲಿಲ್ಲವಾದರೂ ತಾವು ದೊಡ್ಡದೊಂದು ಹೋರಾಟವನ್ನೇ ವಿಧಾನಸೌಧ ದಲ್ಲಿ ಮಾಡಿದ್ದೇವೆಂದು ಹೇಳುತ್ತಾರೆ.

ಪಾಪ ಜಗಳದ ಕೇಂದ್ರಬಿಂದುವಾಗಿದ್ದ ‘ಧರ್ಮೇಗೌಡರು’ ಮಾತ್ರ ಆತ್ಮಹತ್ಯೆ ಮಾಡಿಕೊಂಡುಬಿಟ್ಟರು. ಸ್ವತಃ ದೇವೇಗೌಡರು ಅವರ ಆತ್ಮಹತ್ಯೆಗೆ ಕಾರಣ ಸದನದದ ಅವಮಾನವೆಂದು ಹೇಳಿದರು. ಕುಮಾರಸ್ವಾಮಿಯವರು ಇದು ರಾಜಕೀಯದ ಕೊಲೆ ಯೆಂದು ಹೇಳಿದರು. ಜಟ್ಟಿ ಕೆಳಗೆ ಬಿದ್ದರೂ ಮೀಸ ಮಣ್ಣಾಗಲಿಲ್ಲವೆಂಬಂತೆ ಯು.ಟಿ.ಖಾದರ್ ‘ಜೆ.ಡಿ.ಎಸ್’ನ ಧರ್ಮೇಗೌಡರನ್ನು ಉಪಸಭಾಪತಿ ಸ್ಥಾನದಲ್ಲಿ ಕುಳಿಸಿದ್ದು ತಪ್ಪೆಂದು ಹೇಳುತ್ತಾರೆ.

ಧರ್ಮೇಗೌಡರು ಸದನದ ಅವಮಾನದಿಂದಲೇ ಆತ್ಮಹತ್ಯೆ ಮಾಡಿಕೊಂಡು ಹೇಳಲು ಸಾಧ್ಯವಿಲ್ಲದಿದ್ದರೂ ಸಹ, ಸದನದದ ಕೋಲಾಹಲವು ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೆಸ್ ಪಕ್ಷವು ಮತ ಬ್ಯಾಂಕಿ ಗಾಗಿ ಮುಸಲ್ಮಾನರ ಆಚರಣೆಗಳನ್ನು ಬೆಂಬಲಿಸಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆಯೆಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನು ಮುಸಲ್ಮಾನರಿಗೆ ನೀಡಿ ಸಮಾಜದ ಇತರ ಧರ್ಮದವರಿಗೆ ಸರಕಾರದ ಯೋಜನೆಗಳಲ್ಲಿ, ಆದಾಯದಲ್ಲಿ, ಕಾನೂನುಗಳಲ್ಲಿ, ಆಚರಣೆಗಳಲ್ಲಿ ತಾರತಮ್ಯ ಮಾಡುವ ಕಲೆ ಇವರಿಗೆ ಕರಗತವಾಗಿ ಬಂದಿದೆ.

ಬೇಕು ಅಂತಲೇ ಸಿದ್ದರಾಮಯ್ಯನವರು ತಾನು ‘ದನದ ಮಾಂಸ’ ತಿನ್ನುತ್ತೇನೆಂದು ಹೇಳುತ್ತಾರೆ. ಅವರ ಈ ಒಂದು ಹೇಳಿಕೆ ಯನ್ನಿಟ್ಟುಕೊಂಡು ಕಾಂಗ್ರೆಸ್ ನಾಯಕರು ಮುಸಲ್ಮಾನರ ಬಳಿ ಮತ ಕೇಳುತ್ತಾರೆ. ಮಸೀದಿಯ ಮೌಲ್ವಿಗಳು ನಮಾಜಿಗೆ ಬಂದವರಿಗೆ ಹೇಳುತ್ತಾರೆ. ಮುಸಲ್ಮಾನರಲ್ಲಿ ಸಿದ್ದರಾಮಯ್ಯನವರು ತಮ್ಮ ನಾಯಕನೆಂಬ ಅಸೆ ಹೆಚ್ಚಾಗುತ್ತಾ ಹೋಗುತ್ತದೆ.
ಆದರೆ ತಾವು ಮಾಡುವ ಇಂತಹ ಕೆಲಸದಿಂದ ಬಹು ಸಂಖ್ಯಾತ ಹಿಂದೂಗಳ ಒಗ್ಗಟ್ಟು ನೂರು ಪಟ್ಟು ಹೆಚ್ಚಾಗುತ್ತದೆಯೆಂಬ ‘ಸಾಮಾನ್ಯ ಜ್ಞಾನ’ ವಿಲ್ಲದಿರುವುದು ದುರದೃಷ್ಟಕರ.

ಕಾಂಗ್ರೆಸ್ ಪಕ್ಷದ ಮುಸಲ್ಮಾನ್ ಓಲೈಕೆಯ ರಾಜಕಾರಣವನ್ನು ಕಳೆದ ಏಳು ದಶಕಗಳಿಂದ ಹಿಂದೂಗಳು ನೋಡಿ ನೋಡಿ
ಸಾಕಾಗಿದ್ಧಾರೆ. ಹಿಂದೆ ಮಾಡಿದಂತೆ ಈಗ ಮಾಡಲು ಹೊರಟರೆ ಕಾಂಗ್ರೆಸ್ ಪಕ್ಷವು ಬಹುಸಂಖ್ಯಾತರನ್ನು ಶಾಶ್ವತವಾಗಿ ಕಳೆದು ಕೊಳ್ಳಬೇಕಾಗುತ್ತದೆ. ‘ಅಟಲ್ ಬಿಹಾರಿ ವಾಜಪೇಯಿಯವರು’ ಸದನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಸಣ್ಣ ಜಾಗ ಸಿಕ್ಕರೆ ಸಾಕು ಪುನಃ ಮೇಲೇಳುತ್ತದೆಯೆಂದು ಹೇಳಿದ್ದರು. ಆದರೆ ಕಾಂಗ್ರೆಸ್ಸಿನ ಇತ್ತೀಚಿನ ನಡೆಯನ್ನು ಗಮನಿಸಿದರೆ ಯಾಕೋ ಆ ಸಣ್ಣ ಕಿಂಡಿಯೂ ಸಹ ಮುಚ್ಚುವ ಲಕ್ಷಣಗಳು ಗೋಚರಿಸುತ್ತಿದೆ.

‘ಹನುಮ ಜಯಂತಿ’ಯಂದು ಮಾಂಸ ಸೇವನೆ ಮಾಡುವ ವೇಳೆ, ಹನುಮನ ಜನುಮ ದಿನದ ಬಗ್ಗೆ ಇಲ್ಲ ಸಲ್ಲದ ಮಾತುಗಳ ನ್ನಾಡುವ ಮೂಲಕ ಮತ್ತೊಂದು ಅವಾಂತರವನ್ನು ಸಿದ್ದರಾಮಯ್ಯನವರು ಸೃಷ್ಟಿಸಿದರು. ಮತಾಂಧ ಟಿಪ್ಪುವಿನ ಜಯಂತಿ ಯಂದು ವೀರಾವೇಶದಿಂದ ಮಾತನಾಡುವ ಸಿದ್ದರಾಮಯ್ಯನವರು ‘ಹನುಮಜಯಂತಿ’ಯಂದು ಮಾತ್ರ ಈ ರೀತಿಯ ಹೇಳಿಕೆ ಗಳನ್ನು ನೀಡುವ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದರು. ಚುನಾವಣೆಯ ಸಮಯದಲ್ಲಿ ಹಿಂದು ಗಳಿಗಿಂತಲೂ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತಹಾಕುತ್ತಾರೆಂಬ ವಿಷಯ ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತು. ಹಿಂದೂಗಳು ಮನೆಯಿಂದ ಹೊರಬಂದು ಮತಹಾಕದೇ ಹಲವು ಚುನಾವಣೆಗಳು ಕಾಂಗ್ರೆಸ್ಸಿನ ಪಾಲಾಗಿವೆ.

ಅದನ್ನೇ ಬಳಸಿಕೊಂಡು ಕಾಂಗ್ರೆಸ್ ಮುಸಲ್ಮಾನರ ಪರವಾಗಿ ನಿಲ್ಲುತ್ತದೆ. ಸದನದಲ್ಲಿ ಗಲಾಟೆಯನ್ನು ಮಾಡುವ ಮೂಲಕ ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೆ ತಾವು ಮುಸಲ್ಮಾನರ ಪರವೆಂದು ತೋರಿಸಿಕೊಟ್ಟಿದೆ. ಮುಂಬರುವ ‘ಬೃಹತ್ ಬೆಂಗಳೂರು ಮಹಾನಗರ ಚುನಾವಣೆ’ಯಲ್ಲಿ ಕಾಂಗ್ರೆಸ್ ಇದೇ ವಿಷಯವನ್ನು ಪ್ರಸ್ತಾಪಿಸಿ ಮುಸಲ್ಮಾನರ ಬಳಿ ಮತ ಕೇಳುತ್ತದೆ. ಅತ್ತ
ದೆಹಲಿಯ ನಾಯಕರಿಗೆ ತಾವು ಸದನದಲ್ಲಿ ಮುಸಲ್ಮಾನರ ಪರವಾಗಿ ವೀರಾವೇಶವಾಗಿ ಹೋರಾಡಿದ್ದೇವೆಂದು ಹೇಳಿಕೊಳ್ಳುತ್ತದೆ.

ಮಾನ ಮರ್ಯಾದೆ ಹೋದಂಥ ವಿಚಾರವನ್ನು ದೊಡ್ಡಸಾಧನೆಯೆಂದು ಪರಿಗಣಿಸುವ ನಾಯಕರನ್ನು ಪಡೆದ ಮುಸಲ್ಮಾನರೇ ಧನ್ಯ. ಜಪಾನ್‌ನಂಥ ದೇಶದಲ್ಲಿಯೂ ಸಹ ಸದನದಲ್ಲಿ ಗಲಾಟೆಯಾದ ಉದಾಹರಣೆಗಳಿವೆ. ತಮ್ಮ ಕ್ಷೇತ್ರದ ಅನುದಾನ ಕ್ಕಾಗಿಯೋ, ದೇಶಕ್ಕೊಂದು ಒಳ್ಳೆಯ ಕೆಲಸದ ಸಲುವಾಗಿಯೋ, ಪ್ರಜೆಗಳ ಪರವಾಗಿಯೋ ನಡೆದಿರುವ ಗಲಾಟೆಗಳಿವೆ. ಆದರೆ ಒಂದು ಸಮುದಾಯವನ್ನು ಓಲೈಸುವ ಸಲುವಾಗಿ ವಿಧಾನಸೌಧದಲ್ಲಿ ಕತ್ತಿನ ಪಟ್ಟಿಯನ್ನುಹಿಡಿದು ಎಳೆದಾಡಿರುವ ಪ್ರಸಂಗ ಮಾತ್ರ ಇದೇ ಮೊದಲೆನಿಸುತ್ತದೆ.

ಚಿಕ್ಕಮಗಳೂರಿನ ಸಹಕಾರ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ತನ್ನದೇ ಛಾಪು ಮೂಡಿಸಿಕೊಂಡಿದ್ದಂಥ ಧರ್ಮೇಗೌಡರಿಗೆ ಮಾಡಿದ ಅವಮಾನವನ್ನು ಯಾರೂ ಸಹ ಕ್ಷಮಿಸಲಾಗುವುದಿಲ್ಲ. ಕಾಂಗ್ರೆಸ್ ಕಳೆದ ಕೆಲವು ದಿನಗಳ ಹಿಂದೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿಯೂ ಸಹ ತನ್ನ ನೆಲೆಯನ್ನು ಕಳೆದುಕೊಂಡಿದೆ. ಗ್ರಾಮ ಪಂಚಾ ಯತ್ ಮಟ್ಟದಲ್ಲಿ ನೆಲೆ ಕಳೆದುಕೊಂಡರೆ ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ. ಚಾಮುಂಡೇಶ್ವರಿ ಯಲ್ಲಿ ಸೋತು, ಕೂದಲೆಳೆ ಅಂತರದಲ್ಲಿ ಬಾದಾಮಿಯಲ್ಲಿ ಗೆದ್ದಂಥ ಸಿದ್ದರಾಮಯ್ಯನವರಿಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವನ್ನು ಬಿಟ್ಟುಕೊಡಲು ‘ಜಮೀರ್ ಅಹ್ಮದ್ ಖಾನ್’ ತಯಾರಾಗಿದ್ದಾರೆ.

ಸದಾ ಮುಸಲ್ಮಾನರನ್ನು ಓಲೈಸುವ ಸಿದ್ದರಾಮಯ್ಯನವರಿಗೆ ಚಾಮರಾಜಪೇಟೆಯಲ್ಲಿನ ಮುಸಲ್ಮಾನರು ಅತಿ ಹೆಚ್ಚು ಮತ ಗಳಿಂದ ಗೆಲ್ಲಿಸುವುದು ಖಚಿತ. ಆದರೆ ಪಕ್ಷದ ದೃಷ್ಟಿಯಿಂದ ನೋಡುವುದಾದರೆ ಮುಸಲ್ಮಾನರ ಓಲೈಕೆಯ ಮಧ್ಯೆ ಹಿಂದೂಗಳ ಬಹುದೊಡ್ಡ ಮತಬ್ಯಾಂಕ್ ಕಾಂಗ್ರೆಸ್ಸನ್ನು ಬಿಟ್ಟು ಹೋಗುತ್ತಿರುವುದಂತೂ ಸ್ಪಷ್ಟವಾಗಿದೆ.