Thursday, 12th December 2024

ಭಾರತೀಯರಿಗಾಗಿ ಸಜ್ಜಾಗಿದೆ ಭಾರತೀಯ ಕ್ರಿಪ್ಟೋ ಟೋಕನ್

ಮಂಗಳೂರು: ಭಾರತದಲ್ಲಿ ಕ್ರಿಪ್ಟೋ ಹೂಡಿಕೆ ಹೆಚ್ಚಿರುವ ಬೆನ್ನಲ್ಲೇ ಭಾರತಕ್ಕಾಗಿ ಕ್ರಿಪ್ಟೋ ಕರನ್ಸಿಯನ್ನು ಮಂಗಳೂರು ಮೂಲದ ಯುವಕರ ತಂಡ ತಯಾರಿಸಿದ್ದು ಮೇ ತಿಂಗಳಾಂತ್ಯದಲ್ಲಿ ವಿಕೇಂದ್ರಿತ ವಹಿವಾಟು ಜಾಲತಾಣಗಳಲ್ಲಿ ಬಿಡುಗಡೆಗೊಳಿಸಲಿದೆ.

ವೈಬನ್ ಎನ್ನುವ ಕ್ರಿಪ್ಟೋ ಕರೆನ್ಸಿ ಇದಾಗಿದ್ದು, ಭಾರತಕ್ಕೆ ಭಾರತದ ಸಾಮಾಜಿಕ ಜಾಲತಾಣವನ್ನು ಪರಿಚಯಿಸ ಲಿದೆ.

ಹೇಗೆ ಈ ವೈಬನ್ ಕಾರ್ಯ ನಿರ್ವಹಿಸಲಿದೆ?

ವೈಬನ್ ಸಾಮಾಜಿಕ ಜಾಲತಾಣ ಅಥವಾ ಆಪ್ ಬಳಕೆದಾರರಿಗೆ ವೈಬನ್ ತನ್ನ ಕ್ರಿಪ್ಟೋ ಕರೆನ್ಸಿಯನ್ನ ನೀಡು ತ್ತದೆ, ಹಾಗೆ ಬಂದ ಕರೆನ್ಸಿಗಳನ್ನ ಪರಸ್ಪರ ವಿನಿಮಯ ಮಾಡಬಹುದಲ್ಲದೆ ಸಾಲದಂತೆ ಇನ್ನೊಬ್ಬರಿಗೆ ನೀಡಿ ಅದರ ಮೇಲೆ ಬಡ್ಡಿಗಳಿಸ ಬಹುದು.

ಇದು ಸಂಪೂರ್ಣ ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕ ನಡೆಯಲಿದ್ದು 2023ರ ಮೊದಲಾರ್ಧದಲ್ಲಿ ತನ್ನ ಜಾಲತಾಣವನ್ನ ಪರಿಚಯಿಸಲು ತಂಡ ಮುಂದಾಗಿದೆ.

ಶಿರಸಿ ಮೂಲದ ನಾಗರಾಜ್ ಭಟ್, ಹಾಗೂ ವಿಜೇತ್ ಭಟ್ ಸೇರಿ ಈ ಕ್ರಿಪ್ಟೋ ಕರೆನ್ಸಿ ತಯಾರಿಸಿದ್ದು ಮುಂಬರುವ ದಿನಗಳಲ್ಲಿ ಭಾರತೀಯ ಎಕ್ಸ್ಚೇಂಜ್‌ ಗಳಲ್ಲಿ ಬಿಡುಗಡೆಗೊಳಿಸುವ ಪ್ರಯತ್ನದಲ್ಲಿದ್ದಾರೆ‌.

ಭಾರತೀಯ ಮೂಲದ ಪಾಲಿಗಾನ್ ನಟ್ವರ್ಕ್ ಬ್ಲಾಕ್‌ಚೈನ್ ಬಳಸಿ ಇದನ್ನು ರೂಪಿಸಲಾಗಿದ್ದು, ಇದರ ಬೆಲೆ ಜನ ಸಾಮಾನ್ಯರಿಗೆ ಒಗ್ಗುವಂತಿರಲಿದೆ.