ಬೆಂಗಳೂರು: ಡಾರ್ಕ್ ಸರ್ಕಲ್‌ಗಳು ಮುಖದಲ್ಲಿ ಅಸಹ್ಯವಾಗಿ ಕಾಣಿಸುತ್ತದೆ. ಹಾಗಾಗಿ ಇದರಿಂದ ಮುಖದ ಅಂದ ಕೆಡುತ್ತದೆ. ಒತ್ತಡ, ನಮ್ಮ ಜೀವನಶೈಲಿ ಮತ್ತು ರಾತ್ರಿ ತಡವಾಗಿ ಎಚ್ಚರಗೊಳ್ಳುವುದು ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ (Dark Circle) ಮೂಡಲು ಕಾರಣವಾಗಬಹುದು. ಹಾಗಾಗಿ ಈ ಡಾರ್ಕ್ ಸರ್ಕಲ್‌ಗಳನ್ನು ನಿವಾರಿಸಲು ಜನರು ಹಲವಾರು ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇದರಿಂದ ಶಾಶ್ವತ ಪರಿಹಾರ ಸಿಗುವುದಿಲ್ಲ. ಹಾಗಾಗಿ ಕೆಲವರು ಡಾರ್ಕ್ ಸರ್ಕಲ್‌ಗಳನ್ನು ನಿವಾರಿಸಲು ಸೌತೆಕಾಯಿ, ಟೊಮೆಟೊ, ಅಲೋವೆರಾದಂತಹ ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಆದರೆ ಟೊಮೆಟೊ ರಸ ಡಾರ್ಕ್ ಸರ್ಕಲ್ ಅನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆಯೇ? ಎಂಬ ಗೊಂದಲ ಹಲವರಿಗಿದೆ. ಹಾಗಾದ್ರೆ ಈ ಬಗ್ಗೆ ಇಂದು ತಿಳಿದುಕೊಳ್ಳೋಣ.
ಟೊಮೆಟೊ ರಸ ಡಾರ್ಕ್ ಸರ್ಕಲ್ ಅನ್ನು ನಿವಾರಿಸಲು ಸಹಕಾರಿಯಾಗಿದೆ. ಹಾಗಾಗಿ ಇದನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಹಚ್ಚಬೇಕು. ಪ್ರಾರಂಭದಲ್ಲಿ ಇದರಿಂದ ಕಿರಿಕಿರಿಯಾದರೂ ಕ್ರಮೇಣ ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಟೊಮೆಟೊ ರಸವನ್ನು 1-2 ತಿಂಗಳ ಕಾಲ ಬಳಸುವುದರಿಂದ ಕಣ್ಣುಗಳ ಕೆಳಗಿರುವ ಡಾರ್ಕ್ ಸರ್ಕಲ್ ಅನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು ಎಂದು ಅನುಭವಿಗಳೊಬ್ಬರು ತಿಳಿಸಿದ್ದಾರೆ.
ಡಾರ್ಕ್ ಸರ್ಕಲ್‌ಗಳಿಗೆ ಟೊಮೆಟೊ ರಸವನ್ನು ಹಚ್ಚುವುದು ಹೇಗೆ?:
ಇದಕ್ಕಾಗಿ, ಟೊಮೆಟೊ ರಸವನ್ನು ತೆಗೆದು, ಇದನ್ನು ಮುಖ ಮತ್ತು ಕಣ್ಣುಗಳ ಕೆಳಗೆ ಹಚ್ಚಿಕೊಳ್ಳಿ. ನಂತರ ಹಗುರವಾಗಿ ಕೈಗಳಿಂದ ಚರ್ಮವನ್ನು ಮಸಾಜ್ ಮಾಡಿ. 10-15 ನಿಮಿಷಗಳ ನಂತರ ಮುಖವನ್ನು ಚೆನ್ನಾಗಿ ತೊಳೆಯಿರಿ.
ಡಾರ್ಕ್ ಸರ್ಕಲ್ ಅನ್ನು ನಿವಾರಿಸಲು ಟೊಮೆಟೊ ರಸ ಹೇಗೆ ಪ್ರಯೋಜನಕಾರಿ:
*ಡಾರ್ಕ್ ಸರ್ಕಲ್ ಅನ್ನು ನಿವಾರಿಸಲು ಟೊಮೆಟೊ ರಸವು ಪರಿಣಾಮಕಾರಿಯಾಗಿದೆ. ವಾಸ್ತವವಾಗಿ, ಟೊಮೆಟೊ ರಸವು ಬ್ಲೀಚಿಂಗ್ ಗುಣಗಳನ್ನು ಹೊಂದಿದೆ. ಇದು ಡಾರ್ಕ್ ಸರ್ಕಲ್‌ಗಳನ್ನು ತಿಳಿಗೊಳಿಸಲು ಸಹಾಯ ಮಾಡುತ್ತದೆ.
*ಟೊಮೆಟೊ ರಸದಲ್ಲಿ ಫೈಟೊಕೆಮಿಕಲ್ಸ್ ಕಂಡುಬರುತ್ತದೆ. ಇದು ಚರ್ಮದ ನೆರಿಗೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೇ ಡಾರ್ಕ್ ಸರ್ಕಲ್‌ಗಳನ್ನು ತೆಗೆದುಹಾಕಲು ಟೊಮೆಟೊ ಉತ್ತಮ ಪರಿಹಾರವಾಗಿದೆ. ಟೊಮೆಟೊವನ್ನು ಹಚ್ಚುವುದರಿಂದ ಚರ್ಮವು ಮೃದುವಾಗುತ್ತದೆ.
ಇದನ್ನೂ ಓದಿ:ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಇದು! ಇದರ ದರ ಎಷ್ಟಿರಬಹುದು ಊಹಿಸಿ!
ಈ ರೀತಿಯಲ್ಲಿ ನೀವು ಕೂಡ ಡಾರ್ಕ್ ಸರ್ಕಲ್‌ಗಳಿಂದ ತೊಂದರೆಗೊಳಗಾಗಿದ್ದರೆ ಅದನ್ನು ನಿವಾರಿಸಲು ಟೊಮೆಟೊ ರಸವನ್ನು ಹಚ್ಚುವುದರ ಮೂಲಕ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಿ.