ಅರಬ್ಬೀ ಸಮುದ್ರ ಮಾರ್ಗವಾಗಿ ನುಸುಳಲು ಯತ್ನಿಸಿದ ಶತ್ರು ದೇಶದ ನುಸುಳುಕೋರ ರನ್ನು ಹಿಮ್ಮೆಟ್ಟಿಸಲಾಯಿತು. ನೀರಲ್ಲಿದ್ದ ವರಿಗೂ ಮಿಷನ್ ಗನ್‌ನಲ್ಲಿ ಫಯರ್ ಮಾಡುವ ಮೂಲಕ ಓಡಿಸಲಾಯಿತು. ಬೆಂಕಿ ಹತ್ತಿಕೊಂಡ ಸೇನಾ ಬೋಟ್‌ಗೆ ತಕ್ಷಣ ನೀರು ಹಾಯಿಸಿ ನಂದಿಸಲಾಯಿತು. ಈ ವೇಳೆ ಸಮುದ್ರಕ್ಕೆ ಬಿದ್ದ ಸೇನಾನಿಯನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ರಕ್ಷಿಸ ಲಾಯಿತು. ಹೀಗೆ ಹಲವು ಕಾರ್ಯಾಚರಣೆಗಳ ಮಾದರಿಗಳನ್ನು ಕೋಸ್ಟ್ ಗಾರ್ಡ್ ಪ್ರದರ್ಶಿಸಿದೆ.
ಇಂಡಿಯನ್ ಕೋಸ್ಟ್ ಗಾರ್ಡ್‌ನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಂಗಳೂರಿನ ಕೋಸ್ಟ್ ಗಾರ್ಡ್ ಪಣಂಬೂರು ಸಮೀಪದ ಅರಬ್ಬೀ ಸಮುದ್ರದಲ್ಲಿ ಅಣಕು ಕಾರ್ಯಾಚರಣೆ ಆಯೋಜಿಸಲಾಗಿತ್ತು. ಕೋಸ್ಟ್ ಗಾರ್ಡ್‌ನಲ್ಲಿ ಸೇವೆ ಸಲ್ಲಿಸುವ ಸೇನಾನಿಗಳ ಕುಟುಂಬಿಕರು ಈ ಬಗ್ಗೆ ತಿಳಿದುಕೊಳ್ಳಬೇಕೆಂದು ಅವರನ್ನೂ ಸಮುದ್ರ ಮಧ್ಯೆ ಕರೆತರಲಾಗಿತ್ತು.
ಕೋಸ್ಟ್ ಗಾರ್ಡ್ ಕಮಾಂಡೆಂಟ್‌ನ ಪತ್ನಿ ವಸುಧಾ ಉಪಾಧ್ಯಾಯ,”ಪತಿ ಕೋಸ್ಟ್ ಗಾರ್ಡ್ ನಲ್ಲಿದ್ದರೂ ಕಾರ್ಯಾಚರಣೆಗಳನ್ನು ಪ್ರತ್ಯಕ್ಷ ವಾಗಿ ನೋಡುವ ಅವಕಾಶ ಇರಲಿಲ್ಲ. ಆದರೆ ಇಂದು ಆ ಅವಕಾಶ ಲಭಿಸಿದೆ. ಕೋಸ್ಟ್ ಗಾರ್ಡ್‌ನ ಮೂರು ಹಡಗುಗಳು ನುಸುಳು ಕೋರರನ್ನು ಸುತ್ತುವರಿದು ಹಡಗಿನಲ್ಲಿದ್ದ ಮೆಷಿನ್ ಗನ್ ಮೂಲಕ ಫೈರಿಂಗ್ ನಡೆಸುತ್ತಾರೆ. ಮೇಲಿಂದ ಹೆಲಿಕಾಪ್ಟರ್ ಮೂಲಕವೂ ಕಾರ್ಯಾಚರಣೆ ನಡೆಸಲಾಗಿತ್ತದೆ. ಒಂದೇ ಬಾರಿಗೆ ಎಲ್ಲಾ ಕಡೆಯಿಂದ ಫೈರಿಂಗ್ ನಡೆಸುವುದು ನೋಡುವಾಗ ಎದೆ ಝಲ್ಲೆನಿಸಿದೆ” ಎಂದು ಹೇಳಿದ್ದಾರೆ.
ನಾಲ್ಕು ಗಂಟೆಗಳ ಕಾಲ ಭಾರತೀಯ ಕೋಸ್ಟ್ ಗಾರ್ಡ್ ನೌಕೆ ವರಾಹದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಇನ್ಸ್‌ಪೆಕ್ಟರ್ ಜನರಲ್ ಎಂ.ವಿ. ಬಾಡ್ಕರ್, ಕರ್ನಾಟಕದಲ್ಲಿ ಕೋಸ್ಟ್ ಗಾರ್ಡ್ ಕಾರ್ಯಾಚರಣೆಗಳು ಮತ್ತು ಚಟುವಟಿಕೆಗಳನ್ನು ವಿವರಿಸಿದ್ದಾರೆ.