ಮುಂಬೈ: ನಾಯಕ ಕೃಣಾಲ್ ಪಾಂಡ್ಯ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಬರೋಡಾ ಕ್ರಿಕೆಟ್ ತಂಡದ ದೀಪಕ್ ಹೂಡಾ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಾಗಿ ತಂಡ ನಡೆಸುತ್ತಿರುವ ಶಿಬಿರದಿಂದ ಹೊರ ನಡೆದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯ ಪಂದ್ಯಗಳು ಭಾನುವಾರ ಆರಂಭವಾಗಿವೆ.
‘ಘಟನೆ ಕುರಿತು ನಾವು ತಂಡದ ವ್ಯವಸ್ಥಾಪಕರಿಂದ ವರದಿ ನಿರೀಕ್ಷಿಸುತ್ತಿದ್ದೇವೆ. ಸದ್ಯ ಆಟಗಾರರು ಜೀವಸುರಕ್ಷಾ ವಾತಾವರಣ ದಲ್ಲಿದ್ದು, ಹೂಡಾ ಅವರ ಸ್ಥಾನಕ್ಕೆ ಯಾರನ್ನೂ ಆಯ್ಕೆ ಮಾಡಿಲ್ಲ’ ಎಂದು ಬಿಸಿಎ ಕಾರ್ಯದರ್ಶಿ ತಿಳಿಸಿದ್ದಾರೆ.
46 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಹೂಡಾ, ಕೃಣಾಲ್ ಅವರ ವರ್ತನೆಯಿಂದ ನೊಂದುಕೊಂಡಿದ್ದು, ಬಿಸಿಎಗೆ ಪತ್ರ ಬರೆದಿದ್ದರು.
ನಮ್ಮ ತಂಡದ ನಾಯಕ ಕೃಣಾಲ್ ಪಾಂಡ್ಯ ಕೆಲವು ದಿನಗಳಿಂದ ನನ್ನನ್ನು, ಸಹ ಆಟಗಾರರ ಎದುರೇ ನಿಂದಿಸಿದ್ದಾರೆ. ವಡೋ ದರಾ ಕ್ರೀಡಾಂಗಣಕ್ಕೆ ಅಭ್ಯಾಸಕ್ಕೆ ಬಂದಿರುವ ಇತರ ರಾಜ್ಯಗಳ ಆಟಗಾರರ ಎದುರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಬಿಸಿಎಗೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.
ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಡ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ಕೂಡ ಇದೇ ಗುಂಪಿನಲ್ಲಿವೆ.