Sunday, 15th December 2024

ಪಕ್ಷಾಂತರಿಗಳಿಗೆ ಜನ ಪಾಠ ಕಲಿಸೋದು ಖಚಿತ

ಸುದ್ದಿಗಾರರೊಂದಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು.

ವಿಶ್ವವಾಣಿ ಸುದ್ದಿಮನೆ ಮೈಸೂರು
ಜನರಿಗೆ ಮೋಸ, ದ್ರೋಹ ಮಾಡಿ ಪಕ್ಷಾಂತರ ಮಾಡಿದವರನ್ನು ರಾಜ್ಯದ ಜನರು ಸಹಿಸಲ್ಲ. ನೆರೆಯ ರಾಜ್ಯಗಳಲ್ಲಿ ಪಕ್ಷಾಂತರಿಗಳಿಗೆ ಕಲಿಸಿದ ಪಾಠವನ್ನು ಉಪ ಚುನಾವಣೆಯಲ್ಲೂ ಕಲಿಸೋದು ಖಚಿತ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ 15 ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡಲಿದ್ದು, ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಾಸ ನಂಬಿಕೆ ಇದೆ. ಒಂದು ಪಕ್ಷದಿಂದ ಆಯ್ಕೆೆಯಾಗಿ ಸ್ವಾಾರ್ಥಕ್ಕಾಾಗಿ ಮಾಡುವ ಪಕ್ಷಾಂತರವನ್ನು ಜನರು ಸಹಿಸುವುದಿಲ್ಲ. ಗುಜರಾತ್, ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲೂ ಪಕ್ಷಾಂತರಿಗಳಿಗೆ ಮತದಾರರು ಪಾಠ ಕಲಿಸಿದ್ದಾಾರೆ. ಅದೇ ರೀತಿ ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿಯವರು ಸೋಲುತ್ತಾಾರೆ ಎಂದು ಹೇಳಿದರು.
ಅನರ್ಹರು ಅನರ್ಹತೆಯ ಹಣೆಪಟ್ಟಿಿ ಇಟ್ಟುಕೊಂಡು ಜನರ ಮುಂದೆ ಹೋಗುತ್ತಿಿದ್ದಾಾರೆ. ಸುಪ್ರೀಂಕೋರ್ಟ್ ಮಾಜಿ ಸ್ಪೀಕರ್ ಅವರ ತೀರ್ಪು ಎತ್ತಿಿಹಿಡಿದಿರುವುದರಿಂದ ಅನರ್ಹರು ಅನ್ನದೇ ಬೇರೇನೂ ಹೇಳಲಾಗದು ಎಂದರು.

ಚುನಾವಣೆಗೂ-ಸಾಲಕ್ಕೂ ಏನು ಸಂಬಂಧ?:
ಸಾಲಕ್ಕೂ-ಚುನಾವಣೆಗೂ ಏನು ಸಂಬಂಧ? ಎಂಟಿಬಿ ನಾಗರಾಜ್ ಬಳಿ ನಾನು ಸಾಲವನ್ನೇ ಮಾಡಿಲ್ಲ. ಇನ್ನು ವಾಪಸ್ ಕೊಡೋದು ಎಲ್ಲಿಂದ ಬಂತು ಎಂದು ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಪ್ರಶ್ನಿಿಸಿದರು. ಜೆಡಿಎಸ್, ಕಾಂಗ್ರೆೆಸ್-ಅನರ್ಹರಿಗೂ ನಾನೇ ಟಾರ್ಗೆಟ್. ನಾನೇ ಅರ್ಜಿ ಕೊಟ್ಟು ಅನರ್ಹರನ್ನಾಾಗಿ ಮಾಡಿದ್ದರಿಂದ ಗುರಿಯಾಗಿದ್ದೇನೆ ಎಂದರು. ಅನರ್ಹರನ್ನಾಾಗಿ ಮಾಡಿದ್ದು ನಿಜ, ಸ್ಪೀಕರ್‌ಗೆ ಅರ್ಜಿ ಕೊಟ್ಟಿಿದ್ದೂ ನಿಜ. ಸುಪ್ರೀಂಕೋರ್ಟ್ ಅನರ್ಹರನ್ನಾಾಗಿ ಮಾಡಿತು ಜನ ಅನರ್ಹರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾಾರೆ. ಹತಾಶೆಯಿಂದ ಎಲ್ಲರೂ ನನ್ನ ಮೇಲೆ ಮುಗಿ ಬಿದ್ದಿದ್ದಾಾರೆ ಎಂದರು.

ಆರೋಗ್ಯ ಸಚಿವ ಶ್ರೀರಾಮುಲು ವೆರಿ ವೆರಿ ಪಾಪ್ಯುುಲರ್ ಲೀಡರ್. ಬಾದಾಮಿ ಸೇರಿದಂತೆ ಎಲ್ಲಿ ಬೇಕಾದರೂ ನಿಲ್ಲುತ್ತಾಾರೆ. ಯಾರನ್ನ ಬೇಕಾದರೂ ಕರೆಯಬಹುದಾದಷ್ಟು ಪಾಪ್ಯುುಲರ್ ಲೀಡರ್. ಅವರು ತೊಡೆ ತಟ್ಟುತ್ತಾಾರೆ. ನಮಗೆ ಅವರಂತೆ ತೊಡೆ ತಟ್ಟಲಾಗದು. ನಾವು ಅವರಷ್ಟು ಪಾಪ್ಯುುಲರ್ ಅಲ್ಲ. ಹಾಗಾಗಿ ಅವರ ಮಾತಿಗೆ ಪ್ರತಿಕ್ರಿಿಯಿಸಲ್ಲ.
– ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ