Friday, 22nd November 2024

Egg For Hair: ಮೊಟ್ಟೆಯನ್ನು ಎಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಕೂದಲು ಬೆಳೆಯುತ್ತದೆಯೆ?

Egg For Hair

ಮೊಟ್ಟೆ (Egg For Hair) ಮತ್ತು ಎಣ್ಣೆ ಎರಡೂ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಹೆಚ್ಚಿನವರು ಇವೆರಡನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚುತ್ತಾರೆ. ಮೊಟ್ಟೆಗಳು ಕೂದಲಿಗೆ ಅಗತ್ಯ ಪ್ರೋಟೀನ್‍ಗಳು ಮತ್ತು ಜೀವಸತ್ವಗಳನ್ನು ಪೂರೈಸಿದರೆ, ತೆಂಗಿನಕಾಯಿ ಮತ್ತು ಆಲಿವ್ ಆಯಿಲ್‍ನಂತಹ ಎಣ್ಣೆಗಳು ನೆತ್ತಿಯನ್ನು ತೇವಗೊಳಿಸಲು ಸಹಾಯ ಮಾಡುತ್ತವೆ. ಇದರಿಂದ ಅನೇಕರಿಗೆ ಕೂದಲಿನ ಸಮಸ್ಯೆಗಳು ಕಡಿಮೆಯಾಗಿದೆ ಎಂದು ಹೇಳಿಕೊಂಡರೂ, ಕೂಡ ಈ ಮಿಶ್ರಣ ನಿಜವಾಗಲೂ ಕೂದಲಿನ ಆರೋಗ್ಯಕ್ಕೆ ಒಳ್ಳೆಯದೇ? ಎಂಬುದು ಯಾರಿಗೂ ತಿಳಿದಿಲ್ಲ. ಇವೆರಡನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚುವುದರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂಬುದನ್ನು ತಿಳಿಯಿರಿ.

ಮೊಟ್ಟೆಗಳಲ್ಲಿ ಪ್ರೋಟೀನ್‍ಗಳು, ಜೀವಸತ್ವಗಳು ಮತ್ತು ಆಮ್ಲಗಳು ಸಮೃದ್ಧವಾಗಿವೆ. ಇದು ಸಾಮಾನ್ಯವಾಗಿ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಕೂದಲು ಮುಖ್ಯವಾಗಿ ಪ್ರೋಟೀನ್, ಕೆರಾಟಿನ್‍ನಿಂದ ಮಾಡಲ್ಪಟ್ಟಿರುವ ಕಾರಣ ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್‍ಗಳು ಬೇಕಾಗುತ್ತದೆ. ಮೊಟ್ಟೆಗಳು ಬಯೋಟಿನ್ ಎಂಬ ವಿಟಮಿನ್ ಬಿ 7ಯನ್ನು ಹೊಂದಿರುತ್ತವೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಅಲ್ಲದೇ ಕೂದಲಿನ ಆರೈಕೆಗಾಗಿ ಎಣ್ಣೆಯನ್ನು ಕೂಡ ಬಳಸಲಾಗುತ್ತದೆ. ಹೆಚ್ಚಾಗಿ ಕೂದಲಿಗೆ ಮಸಾಜ್ ಮಾಡಲು ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಇದು ಕೂದಲನ್ನು ಮಾಯಿಶ್ಚರೈಸಿಂಗ್ ಮಾಡುತ್ತದೆ. ಪ್ರೋಟೀನ್ ನಷ್ಟವನ್ನು ಕಡಿಮೆ ಮಾಡುತ್ತದೆ. ಹಾಗೇ ಆಲಿವ್ ಎಣ್ಣೆಯನ್ನು ಕೂಡ ಕೂದಲಿಗೆ ಹಚ್ಚಲಾಗುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್‍ಗಳು, ವಿಟಮಿನ್ ಇ ಮತ್ತು ಕೆ ಸಮೃದ್ಧವಾಗಿದೆ. ಇದು ನೆತ್ತಿಯನ್ನು ಆರೋಗ್ಯಕರವಾಗಿಡಲು ಮತ್ತು ಕೂದಲನ್ನು ಕಂಡೀಷನ್ ಮಾಡಲು ಸಹಾಯ ಮಾಡುತ್ತದೆ.

ಮೊಟ್ಟೆ ಮತ್ತು ಎಣ್ಣೆಯ ಮಿಶ್ರಣವು ಕೂದಲಿನ ಆರೋಗ್ಯ ಮತ್ತು ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನೀಡುತ್ತವೆ. ಎಣ್ಣೆಗಳು ನೆತ್ತಿಯನ್ನು ತೇವಗೊಳಿಸುತ್ತವೆ. ಶುಷ್ಕತೆಯನ್ನು ಕಡಿಮೆ ಮಾಡುತ್ತವೆ. ಆದರೆ ಮೊಟ್ಟೆಗಳು ಕೂದಲಿನ ಕಿರುಚೀಲಗಳನ್ನು ಬಲಪಡಿಸುವ ಪ್ರೋಟೀನ್‍ಗಳನ್ನು ನೀಡುತ್ತವೆ. ಮೊಟ್ಟೆ ಮತ್ತು ಎಣ್ಣೆಯನ್ನು ತಲೆಬುರುಡೆಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಸಾಬೀತುಪಡಿಸುವ ವೈಜ್ಞಾನಿಕ ಪುರಾವೆಗಳು ಬಹಳ ಕಡಿಮೆ ಇದೆ. ಆದರೆ, ಮೊಟ್ಟೆಗಳಲ್ಲಿನ ಪ್ರೋಟೀನ್‍ಗಳು ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಸಹಾಯ ಮಾಡುತ್ತವೆ. ಎಣ್ಣೆಗಳು ತೇವಾಂಶವನ್ನು ಉಳಿಸಿ ಕೂದಲು ಅತಿಯಾಗಿ ಒಣಗುವುದನ್ನು ತಪ್ಪಿಸುತ್ತವೆ.

ಇದನ್ನೂ ಓದಿ: ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ!

ವಿವಿಧ ವೈಜ್ಞಾನಿಕ ದತ್ತಾಂಶಗಳ ಪ್ರಕಾರ, ತೆಂಗಿನ ಎಣ್ಣೆ ಕೂದಲಿನಲ್ಲಿ ಪ್ರೋಟೀನ್ ನಷ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇದು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಮತ್ತು ನೆತ್ತಿಯನ್ನು ಆರೋಗ್ಯಕರವಾಗಿರಿಸಿ ಕೂದಲಿನ ಬೆಳವಣಿಗೆಗೆ ಅಡಿಪಾಯವಾಗಿದೆ. ಹಾಗಾಗಿ ಮೊಟ್ಟೆ ಮತ್ತು ಎಣ್ಣೆಯನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿದವರು ಇದರಿಂದ ಸಕರಾತ್ಮಕ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ಮೊಟ್ಟೆಗಳು ಅಥವಾ ಎಣ್ಣೆಗಳು ಕೆಲವರಿಗೆ ಅಲರ್ಜಿಯನ್ನು ಉಂಟುಮಾಡಬಹುದು. ಹಾಗಾಗಿ ನಿಮ್ಮ ಕೂದಲಿಗೆ ಈ ಮಿಶ್ರಣವನ್ನು ಹಚ್ಚುವ ಮೊದಲು ಯಾವಾಗಲೂ ಪ್ಯಾಚ್ ಟೆಸ್ಟ್ ಮಾಡಿ. ಅಲ್ಲದೇ ಈ ಮಿಶ್ರಣವನ್ನು ಹಚ್ಚಿದ ನಂತರ ಸರಿಯಾಗಿ ತೊಳೆಯದಿದ್ದರೆ ತಲೆಯಲ್ಲಿ ವಾಸನೆ ಬರುತ್ತದೆ.