ಚೆನ್ನೈ: ಭಾರತದ ನೀಡಿದ 329 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ.
ನಿಖರ ದಾಳಿಗೆ ಕುಸಿತ ಅನುಭವಿಸಿದ ಆಂಗ್ಲರ ಪಡೆ ಎರಡನೇ ದಿನದಾಟದಲ್ಲಿ 134 ರನ್ನುಗಳಿಗೆ ಸರ್ವಪತನ ಕಂಡು, ಕೇವಲ ಫಾಲೋ ಆನ್ ತಪ್ಪಿಸಲಷ್ಟೇ ಸಫಲವಾಯಿತು. ಟೀಂ ಇಂಡಿಯಾ ಪರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐದು ವಿಕೆಟ್ ಕೆಡುವುದರ ಮೂಲಕ ತಂಡಕ್ಕೆ ಭರ್ಜರಿ ಮೇಲುಗೈ ತಂದುಕೊಟ್ಟರು. ಅಶ್ವಿನ್ ಪಾಲಿಗೆ ಇಂದು 23ನೇ ಐದು ವಿಕೆಟ್(45 ಟೆಸ್ಟ್ ಪಂದ್ಯಗಳು) ಗೊಂಚಲಾಗಿದೆ.
49.2 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ. ಅಲ್ಲದೆ 223 ರನ್‌ಗಳ ಹಿನ್ನೆಡೆಯಲ್ಲಿದ್ದು, ಎರಡು ವಿಕೆಟ್ ಬಾಕಿ ಉಳಿದಿರುವಂತೆಯೇ ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 23 ರನ್ ಗಳಿಸಬೇಕಿದೆ.
ಈ ಮೊದಲು ಭಾರತ ತಂಡವು 329 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಆಂಗ್ಲರ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಆತಿಥೇಯರು ಯಶಸ್ವಿಯಾದರು. ಈ ಪೈಕಿ ಪದಾರ್ಪಣಾ ಟೆಸ್ಟ್ ಪಂದ್ಯದಲ್ಲಿ ರೂಟ್ ವಿಕೆಟ್ ಕಬಳಿಸಿದ ಸ್ಪಿನ್ನರ್ ಅಕ್ಷರ್ ಪಟೇಲ್ ಜೊಚ್ಚಲ ವಿಕೆಟ್ ಸಾಧನೆ ಮಾಡಿದರು.
ಭಾರತದ ಪರ ಅಶ್ವಿನ್ ಐದು, ಅಕ್ಷರ್ ಹಾಗೂ ಇಶಾಂತ್ ತಲಾ ಎರಡು ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್‌ಗಳನ್ನು ಹಂಚಿಕೊಂಡರು.