Monday, 16th September 2024

ಕೃಷಿ ಹೊಸ ಮಸೂದೆಗಳು; ರೈತ ಸಬಲೀಕರಣಕ್ಕೆ ತೆರೆದ ಬಾಗಿಲು

ಅಭಿವ್ಯಕ್ತಿ

ಮುರುಗೇಶ್ ಆರ್‌.ನಿರಾಣಿ, ಶಾಸಕರು ಹಾಗೂ ಮಾಜಿ ಸಚಿವರು

ಇದು ನಿಜಕ್ಕೂ ಒಂದು ವಿಚಿತ್ರ ಸನ್ನಿವೇಶ, ರಾಜಕೀಯ ಪಕ್ಷಗಳು ಹೇಗೆ ಬಣ್ಣ ಬದಲಿಸುತ್ತವೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ.

ಲೋಕಸಭೆಗೆ ೨೦೧೯ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕೃಷಿ ಮಾರುಕಟ್ಟೆ
ಕಟ್ಟಳೆಗಳನ್ನು ರದ್ದುಪಡಿಸಿ ಕೃಷಿ ಉತ್ಪನ್ನ ಮಾರಾಟ ಮುಕ್ತಗೊಳಿಸುವುದಾಗಿ ಪ್ರಕಟಿಸಿತ್ತು. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದರೆ ಈ ಮಸೂದೆ ಅಂಗೀಕರಿಸುವುದು ಅದರ ಹೊಣೆಗಾರಿಕೆಯಾಗಿರುತ್ತಿತ್ತು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿಕೊಂಡ ಮಸೂದೆಯನ್ನು ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಅಂಗೀಕರಿಸಿದೆ. ರೈತರಿಗೆ ತಮ್ಮ ಉತ್ಪನ್ನ ಮಾರಾಟದ ಸ್ವಾತಂತ್ರ್ಯ ಸಿಕ್ಕಿದೆ. ಮಧ್ಯವರ್ತಿಗಳ ಹಾವಳಿಯೂ ತಪ್ಪಿದೆ. ಈ ಮಸೂದೆಯನ್ನು ಬೆಂಬಲಿಸುವುದು ಕಾಂಗ್ರೆಸ್ ಪಾಲಿಗೆ ನೈತಿಕೆ ಹೊಣೆಯಾಗಿದೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿಯ ಸಂಗತಿಯನ್ನು ಮರೆತು ಬೀದಿಗಳಿದು ಪ್ರತಿಭಟನೆ ಆರಂಭಿಸಿದೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿಸಿದ ಮಿತ್ರಪಕ್ಷಗಳು ಹಾಗೂ ಸಂಘಟನೆಗಳು ಈ ಹೋರಾಟಕ್ಕೆ ಕೈ ಜೋಡಿಸಿವೆ. ಕಾಂಗ್ರೆಸ್ ವಿರೋಧಕ್ಕಾಗಿ ವಿರೋಧ ಮಾಡುತ್ತಿರು ವಂತೆ ಕಾಣಿಸುತ್ತದೆ. ಈ ಮಸೂದೆಯಿಂದ ರೈತರಿಗೆ ಎಳ್ಳಷ್ಟೂ ತೊಂದರೆ ಯಾಗುವುದಿಲ್ಲ. ಕೃಷಿ ಮಾರುಕಟ್ಟೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ. ಬಯಸಿದರೆ ರೈತರು ತಮ್ಮ ಪ್ರಾಡಕ್ಟ್‌ಗಳನ್ನು ಅಲ್ಲಿಯೂ ಮಾರಾಟ ಮಾಡಬಹುದು. ಇದನ್ನು ಸರಳವಾಗಿ ಮಸೂದೆಯಲ್ಲಿ ಹೇಳಲಾಗಿದೆ. ಈ ರೈತಸ್ನೇಹಿ ಉದ್ದೇಶದಿಂದ ಎರಡು ಮಹತ್ವದ
ಮಸೂದೆಗಳನ್ನು ಸಂಸತ್ತು ಅಂಗೀಕರಿಸಿದೆ.

ಒಂದು, ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರ (ಉತ್ತೇಜನ ಹಾಗೂ ಸರಳೀಕರಣ) ಮಸೂದೆ, ಇನ್ನೊಂದು, ರೈತರ (ಸಬಲೀಕರಣ ಹಾಗೂ ರಕ್ಷಣೆ) ಬೆಲೆ ಖಾತ್ರಿ ಮಸೂದೆ. ಇವುಗಳ ವಿರುದ್ಧ ಈಗ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ ಮತ್ತು ಮಧ್ಯವರ್ತಿಗಳಿಂದ ಉತ್ತೇಜನ ಪಡೆದ ಪ್ರತಿಭಟನೆಗಳೇ ಹೊರತು ಮತ್ತೇನೂ ಅಲ್ಲ. ಈ ಮಸೂದೆಗಳು
ಕಾಯ್ದೆಯಾಗಿ ಜಾರಿಗೆ ಬಂದ ಮೇಲೆ ಅಗತ್ಯ ವಸ್ತುಗಳ ಕಾಯ್ದೆಗೂ ತಿದ್ದುಪಡಿಯಾಗುತ್ತದೆ. ಆಗ ಕೃಷಿ ಉತ್ಪನ್ನಗಳನ್ನು
ದಾಸ್ತಾನು ಮಾಡುವುದಕ್ಕೆ ವಿಧಿಸಲಾಗಿರುವ ಮಿತಿ ರದ್ದಾಗುತ್ತದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಬಾಗಿಲು ತೆರೆಯಲಿದೆ.

ರೈತರು ತಾವು ಬೆಳೆದ ಕಬ್ಬನ್ನು ತಮಗೆ ಬೇಕಾದ ಕಾರ್ಖಾನೆಗಳಿಗೆ ಮಾರಲು ಈ ವರೆಗೆ ಸ್ವತಂತ್ರರಾಗಿರಲಿಲ್ಲ. ಸರಕಾರ ತನ್ನ ಅಽನಿಯಮದಲ್ಲಿ ಸೂಚಿಸಿದ ಕಾರ್ಖಾನೆಗಳಿಗೆ ಮಾತ್ರ ಅವರು ಕಬ್ಬು ಮಾರಾಟ ಮಾಡಬೇಕಾಗಿತ್ತು. ಈ ಹೊಸ ಮಸೂದೆಯಿಂದ ಕಬ್ಬು ಬೆಳೆಗಾರರು ತಾವು ಬಯಸಿದ ತಮ್ಮ ವಿವೇಚನೆಗೆ ಸೂಕ್ತವೆನಿಸಿದ ಸಕ್ಕರೆ ಕಾರ್ಖಾನೆಗಳಿಗೆ ಧೈರ್ಯವಾಗಿ ಕಬ್ಬು ಸಾಗಿಸ ಬಹುದು. ಇದರಿಂದಾಗಿ ದೇಶದ ೧೨ ಕೋಟಿ ಕಬ್ಬು ಬೆಳೆಗಾರರಿಗೆ ದೊಡ್ಡ ಶಕ್ತಿ ಬಂದಂತಾಗುತ್ತದೆ. ಈ ಹೊಸ ಮಸೂದೆಯಿಂದ ರೈತ ತಾನು ಬೆಳೆದ ಕಬ್ಬು ಯಾವ ಕಾರ್ಖಾನೆಗೆ ಮಾರಬೇಕು ಎಂದು ಸ್ವತಃ ನಿರ್ಧರಿಸುವ ಅಧಿಕಾರ ಪಡೆಯುತ್ತಾನೆ. ಇದು ಹೊಸ
ಮಸೂದೆಗೆ ಇರುವ ಶಕ್ತಿ.

ಮಾಜಿ ವಿತ್ತಮಂತ್ರಿ ಕಾಂಗ್ರೆಸ್ಸಿನ ಪಿ. ಚಿದಂಬರಂ ಪರೋಕ್ಷವಾಗಿ ಈ ಮಸೂದೆಗೆ ಸಮ್ಮತಿ ವ್ಯಕ್ತಪಡಿಸಿ ಇಂಗ್ಲೀಷ್ ನಲ್ಲಿ ಲೇಖನ ಬರೆದಿದ್ದಾರೆ. ಕಾಂಗ್ರೆಸ್ ನಾಯಕರು ಅದನ್ನೊಮ್ಮೆ ಓದಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ರೈತರು ಬೆವರು ಸುರಿಸಿ ದುಡಿದು ಸಂಪತ್ತು ಸೃಷ್ಟಿಸುತ್ತಾರೆ. ಅವರು ಸದಾ ಆತ್ಮವಿಶ್ವಾಸದಿಂದ, ಗೌರವದಿಂದ ಬದುಕಬೇಕು. ಕೃಷಿ ಉತ್ಪನ್ನ ಗಳ ಮಾರಾಟ ಪ್ರಕ್ರಿಯೆ
ಪ್ರಾಮಾಣಿಕವಾಗಿ ನಡೆಯು ತ್ತಿರಲಿಲ್ಲ. ಶೋಷಣೆಯ ಬಾಹುಗಳು ಬಲವಾಗಿದ್ದರಿಂದ ರೈತರು ಮೌನವಾಗಿ ಸಂಕಷ್ಟ ಅನುಭವಿಸಿ ದ್ದಾರೆ. ಕಾರ್ಪೋರೇಟ್ ವಲಯ ಸ್ಪರ್ಧೆಗೆ ಇಳಿಯಲಿದೆ ಎಂದು ಕೆಲವರು ಮಾಡುತ್ತಿರುವ ಆರೋಪದಲ್ಲಿ ಯಾವ ಹುರುಳಿಲ್ಲ. ಕಾರ್ಪೋರೇಟ್ ವಲಯದ ಪ್ರವೇಶದಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರೆಯಲಿದೆ. ಇದೊಂದು ಮಹತ್ವದ ಬೆಳವಣಿಗೆ ಆಗಲಿದೆ.

೨೦೧೪ರಿಂದ ಮೋದಿ ನೇತೃತ್ವದ ಕೇಂದ್ರ ಸರಕಾರ ಗೋಧಿ, ಭತ್ತ ಇತರ ಧಾನ್ಯಗಳಿಗೆ ಬೆಂಬಲ ಬೆಲೆ ಹೆಚ್ಚಿಸುತ್ತಿದೆ. ಗೋಧಿ
ಮತ್ತು ಭತ್ತದ ಬೆಂಬಲ ಬೆಲೆಯಲ್ಲಿ ಶೇ.೪೧ರಷ್ಟು ಹೆಚ್ಚಿಸಲಾಗಿದೆ. ಈ ಬೆಳೆಗಳ ಉತ್ಪಾದನೆಯಲ್ಲಿಯೂ ಹೆಚ್ಚಳವಾಗಿದೆ. ಆದರೆ ಬೆಂಬಲ ಬೆಲೆಯ ಲಾಭ ರೈತರಿಗೆ ದೊರಕದೇ ಏಜೆಂಟರ ಪಾಲಾಗುತ್ತಿತ್ತು. ಇನ್ನೂ ಇದಕ್ಕೆ ಬ್ರೇಕ್ ಬೀಳುವುದು ಖಚಿತ. ಆರ್ಥಿಕ ತಜ್ಞ ಅಮರ್ಥ್ಯ ಸೆನ್‌ರ ಪ್ರಕಾರ ಇತ್ತೀಚಿನ ದಶಕಗಳಲ್ಲಿ ಇಡೀ ವಿಶ್ವದ ಜನಸಂಖ್ಯೆಗೆ ಸಾಕಾಗುವಷ್ಟು ಆಹಾರವು ಲಭ್ಯವಿದೆ. ಆದರೆ ಆಹಾರ ವಿತರಣೆ ಮತ್ತು ಕೃಷಿ ಉತ್ಪನ್ನಗಳ ಖರೀದಿ ಸಾಮರ್ಥ್ಯದ ಸಮಸ್ಯೆಗಳು ಬಡತನ ಹಾಗೂ ಅಪೌಷ್ಠಿಕತೆಗೆ ಕಾರಣ ವಾಗಿವೆ. ಹೊಸ ಮಸೂದೆಯಿಂದ ಆಹಾರ ಧಾನ್ಯಗಳ ವಿತರಣೆ ಸರಿಯಾದ ಹಳಿಯ ಮೇಲೆ ಬರಲಿದೆ. ಆ ಮೂಲಕ ಅಪೌಷ್ಠಿಕ ಸಮಸ್ಯೆ ದೂರವಾಗುತ್ತದೆ ಎಂಬುದನ್ನು ಗಮನಿಸಬೇಕು.

ಕಾಂಟ್ರ್ಯಾಕ್ಟ್ ಪದ್ಧತಿಯ ಕೃಷಿಗೆ ಎರಡನೇ ಮಸೂದೆ ಅವಕಾಶ ಮಾಡಿಕೊಡುತ್ತದೆ. ಇದರಲ್ಲಿ ಕೃಷಿ ಉತ್ಪನ್ನಗಳ ವ್ಯಾಪಾರಿಗಳು ಕೃಷಿ ಉತ್ಪನ್ನ ರ- ಮಾಡುವವರು, ಸಗಟು ಖರೀದಿದಾರ ಭಾಗವಹಿಸ ಬಹುದಾಗಿದೆ. ಇವರಿಂದ ಉತ್ತಮ ಕೃಷಿ ತಾಂತ್ರಿಕತೆ, ಬೆಳೆ ಇನ್ಸೂರೆನ್ಸ್ ವಿಶಾಲ ಮಾರುಕಟ್ಟೆ ನೆರವಾಗುವುದು. ರಫ್ತು ಮಾಡಲು ವಿಶಾಲ ಅವಕಾಶ ಲಭಿಸುವುದು. ಇದೊಂದು ಧನಾತ್ಮಕ ಕ್ರಿಯೆ. ಕೃಷಿ ಆಧರಿತ ಉದ್ದಿಮೆಗಳ ಆರಂಭಕ್ಕೆ ಬಹಳಷ್ಟು ನೆರವಾಗಲಿದೆ. ಮಸೂದೆಗಳಿಂದ ಸಣ್ಣ ಅತಿ ಸಣ್ಣ ರೈತರಿಗೂ ನೆರವಾಗಲಿದೆ. ಸಣ್ಣ ರೈತರು ಹಾಗೂ ಅತಿಸಣ್ಣ ರೈತರು ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ತಮಗೆ ಬೇಡ ಎನಿಸಿದಾಗ ರದ್ದು ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಆ ಮುಕ್ತತೆಯನ್ನು ಇಟ್ಟುಕೊಂಡು ಮಸೂದೆ ರಚಿಸಿರುವುದು ಮೆಚ್ಚತಕ್ಕ
ಸಂಗತಿಯಾಗಿದೆ.

ಭಾರತದ ಕೃಷಿ ಕ್ಷೇತ್ರ ಬಹಳ ಕಾಲದಿಂದ ನಿರ್ಲಕ್ಷ್ಯದಿಂದ ನಲುಗಿದೆ. ರೈತರ ಬೆವರಿಗೆ ಬೆಲೆ ಇಲ್ಲದಾಗಿದೆ. ರೈತರನ್ನು ಬಲಿಕೊಟ್ಟು ಏಜೆಂಟರಿಗೆ ಲಾಭ ಮಾಡಿಕೊಡುವ ರೀತಿಯಲ್ಲಿ ಕಾಯ್ದೆ ಕಾನೂನುಗಳನ್ನು ರಚಿಸಲಾಗಿದೆ. ಇದನ್ನೆಲ್ಲ ತಡಿಯುವುದು ರೈತರ ಸಬಲೀಕರಣ ಮಸೂದೆಗಳ ಹಿಂದೆ ಇರುವ ಆಶಯವಾಗಿದೆ. ಮಸೂದೆಯನ್ನು ವಿರೋಧಿಸುವವರೆಲ್ಲ ಮಸೂದೆಯಲ್ಲಿರುವ ಸಂಗತಿಗಳನ್ನು ಚೆನ್ನಾಗಿ ಅಧ್ಯಯನ ಮಾಡಬೇಕು. ವಿರೋಧಕ್ಕಾಗಿ ವಿರೋಧ ಎನ್ನುವ ಮನೋಭಾವ ಬಿಡಬೇಕು.

Leave a Reply

Your email address will not be published. Required fields are marked *