ಬೆಂಗಳೂರು: ಫ್ಯಾಷನ್ (Fashion Tips) ಲೋಕದಲ್ಲಿ ಜನರು ಬಹಳ ಮುಂದುವರಿದಿದ್ದು, ಒಬ್ಬರಿಗಿಂತ ಮತ್ತೊಬ್ಬರು ಸ್ಟೈಲಿಶ್ ಆಗಿ ಕಾಣಲು ಹಲವಾರು ರೀತಿಯ ಫ್ಯಾಷನ್ ಅನ್ನು ಅನುಸರಿಸುತ್ತಾರೆ. ಹಾಗೆಯೇ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‌ಗಳಲ್ಲಿ, ಫ್ಯಾಷನ್ ಬಗ್ಗೆ ಹೆಚ್ಚು ಮಾಹಿತಿ ನೀಡಲಾಗುತ್ತದೆ. ಹಾಗಾಗಿ ಹೆಚ್ಚಿನ ಜನರು ತಾವು ಸ್ಟೈಲಿಶ್ ಆಗಿ ಕಾಣಬೇಕೆಂದು ಫ್ಯಾಷನ್ ಕಡೆಗೆ ಒಲವು ತೋರಿಸುತ್ತಿದ್ದಾರೆ. ಅಲ್ಲದೇ ಜನರು ಪಾರ್ಟಿ ಫಂಕ್ಷನ್‌ಗಳಲ್ಲಿ ಮಾತ್ರವಲ್ಲ ಹೊರಗಡೆ ಸುತ್ತಾಡುವಾಗ ಕೂಡ ತಮ್ಮ ನೋಟ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ನೀವು ಸ್ಟೈಲಿಶ್ ಆಗಿ ಕಾಣಲು ಈ ಫ್ಯಾಷನ್ ಅನ್ನು ಫಾಲೋ ಮಾಡಿ.
ಲ್ಯಾವೆಂಡರ್ ಸಿಂಫನಿ
ಲ್ಯಾವೆಂಡರ್ ಬಣ್ಣವು ಯಾವುದೇ ಸೀಸನ್‍ನಲ್ಲಿ ಕೂಡ ಉತ್ತಮವಾಗಿ ಕಾಣುತ್ತದೆ. ಹಾಗಾಗಿ ಸ್ಟೈಲಿಶ್ ಆಗಿ ಕಾಣಲು ಗುಲಾಬಿ ಬಣ್ಣದ ನೇರಳೆ ಸ್ವೆಟರ್ ಅನ್ನು ತಿಳಿ ಲ್ಯಾವೆಂಡರ್ ಪ್ಯಾಂಟ್‍ನೊಂದಿಗೆ ಧರಿಸಿ, ಅದರ ಜೊತೆಗೆ ಹ್ಯಾಂಡ್ ಬ್ಯಾಗ್ ಮತ್ತು ಚಪ್ಪಲಿಗಳನ್ನು ಧರಿಸಿದರೆ ನೀವು ಅತಿ ಸುಂದರಿಯಾಗಿ ಕಾಣುತ್ತೀರಿ.
ಪ್ಲೇಫುಲ್ ಚೆಕ್ಸ್ ರಿವಿವಲ್
ಚೆಕ್ಸ್‌ಗಳು ಎಂದಿಗೂ ಫ್ಯಾಶನ್‍ನಿಂದ ಹೊರಹೋಗುವುದಿಲ್ಲ, ಆದರೆ ಹಳದಿ ಮತ್ತು ಕಪ್ಪು ಚೆಕ್ಸ್‌ನಿಂದ ಮಾಡಿದ ಉಡುಗೆ ಎಲ್ಲಾ ಸೀಸನ್ ನಲ್ಲಿಯೂ ಚೆನ್ನಾಗಿ ಕಾಣಿಸುತ್ತದೆ. ಇದು ಸಡಿಲವಾಗಿರುವುದರಿಂದ ಹೆಚ್ಚು ಆರಾಮದಾಯಕವಾಗಿರುತ್ತದೆ. ಇದನ್ನು ಕೊಂಬ್ಯಾಟ್ ಬೂಟುಗಳು ಮತ್ತು ಬಿಳಿ ಸಾಕ್ಸ್‌ಗಳೊಂದಿಗೆ ಧರಿಸಿ. ಸ್ವಲ್ಪ ಹೆಚ್ಚು ಸ್ಟೈಲ್ ಬಯಸುವವರಿಗೆ ಇದು ಸೂಕ್ತವಾಗಿದೆ.
ಗ್ರಾಫಿಕ್ ಸ್ಟ್ರೀಟ್ ಚಿಕ್
ಗ್ರಾಫಿಕ್ ಟಿ-ಶರ್ಟ್ ಗಳು ಈ ವಸಂತಕಾಲದಲ್ಲಿ ಸ್ಟೈಲಿಶ್ ಆಗಿರುತ್ತವೆ, ಸ್ಮಾರ್ಟ್ ಮತ್ತು ಆರಾಮದಾಯಕವಾಗಿರುವ ನ್ಯೂಟ್ರಲ್-ಟೋನ್ಡ್ ಪ್ಯಾಂಟ್‍ಗಳೊಂದಿಗೆ ಇದು ಉತ್ತಮವಾಗಿ ಕಾಣುತ್ತದೆ. ಗ್ರಾಫಿಕ್ ಟಿ-ಶರ್ಟ್ ನೋಟವು ವಿಭಿನ್ನವಾಗಿದೆ ಮತ್ತು ಆರಾಮವನ್ನು ನೀಡುತ್ತದೆ. ವೈಟ್ ಸ್ನೀಕರ್ ಗಳ ಜೊತೆಗೆ ಚಿನ್ನದ ಬಣ್ಣದ ಹ್ಯಾಂಡ್ ಬ್ಯಾಗ್ ಅನ್ನು ಹಿಡಿದುಕೊಂಡರೆ ನಿಮ್ಮ ನೋಟ ಸುಂದರವಾಗಿ ಕಾಣುತ್ತದೆ.
ಕಾರ್ಸೆಟ್‍ಗಳು ಮತ್ತು ಕ್ಯಾಶುಯಲ್‍ಗಳು
ಸಾದಾ ಬಿಳಿ ಶರ್ಟ್ ಅನ್ನು ಡಾರ್ಕ್ ಬಣ್ಣದ ಕಾರ್ಸೆಟ್‍ನೊಂದಿಗೆ ಸೇರಿಸಿ ಧರಿಸಿದರೆ ನೀವು ಕ್ಯಾಶುಯಲ್ ಆಗಿ ಕಾಣುತ್ತೀರಿ. ಫ್ಯಾಶನ್‍ನಲ್ಲಿ ನೀವು ಇನ್ನೂ ಹೆಚ್ಚು ಚೆನ್ನಾಗಿ ಕಾಣಲು ಬಯಸುವವರು ಅದನ್ನು ಮಿನಿ ಸ್ಕರ್ಟ್ ಮತ್ತು ಎಡ್ಜ್ ಬೂಟ್‌ಗಳೊಂದಿಗೆ ಧರಿಸಬಹುದು, ಇದು ಹೆಚ್ಚಿನ ಜನರು ನಿಮ್ಮನ್ನು ನೋಡಿ ಬೆರಗಾಗುವಂತೆ ಮಾಡುತ್ತದೆ.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿ ಮೇಲೆ ಮಲಗಿದ ಯುವತಿಗೆ ಗಾಢ ನಿದ್ದೆ! ಮುಂದೇನಾಯ್ತು?
ಎಫರ್ಟ್ ಲೆಸ್ ಆಫೀಸ್ ಚಿಕ್
ಇತ್ತೀಚಿನ ದಿನಗಳಲ್ಲಿ ಆಫೀಸ್ ಕೆಲಸಕ್ಕೆ ಹೋಗುವಾಗ ಧರಿಸುವಂತಹ ಅತ್ಯುತ್ತಮವಾದ ಫ್ಯಾಷನ್ ಡ್ರೆಸ್ ಇದಾಗಿದೆ. ದೊಡ್ಡದಾದ ಕಾಟನ್ ಶರ್ಟ್, ಚೆನ್ನಾಗಿ ವಿನ್ಯಾಸಗೊಳಿಸಲಾದ ನ್ಯೂಟ್ರಲ್ ಪ್ಯಾಂಟ್‍ಗಳೊಂದಿಗೆ ಧರಿಸುವ ಈ ಸ್ಟೈಲ್ ಆರಾಮದಾಯಕವಾಗಿರುತ್ತದೆ. ಸ್ನೀಕರ್ ಗಳೊಂದಿಗೆ ಧರಿಸುವ ಇದು ಆರಾಮದಾಯಕ ಮತ್ತು ಫ್ಯಾಶನ್ ಡ್ರೆಸ್‍ಗಳನ್ನು ಧರಿಸುವ ಬಯಕೆ ಇರುವ ಮಹಿಳೆಯರಿಗೆ ಇದು ಸೂಕ್ತವಾಗಿದೆ.
ಈ ಫ್ಯಾಶನ್‍ಗಳನ್ನು ಅನುಸರಿಸುವ ಮೂಲಕ ನೀವು ಸ್ಟೈಲಿಶ್ ಆಗಿ ತಿರುಗಾಡಬಹುದು. ಮತ್ತು ಅನೇಕರನ್ನು ನಿಮ್ಮ ಕಡೆಗೆ ಸೆಳೆಯಬಹುದು.